Moto e13: ಮೋಟೊರೋಲದ 4G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ಫೀಚರ್ ಕೇಳಿದ್ರೆ ಶಾಕ್ ಆಗ್ತೀರಾ!

Ravi Rao ಇವರಿಂದ | ಪ್ರಕಟಿಸಲಾಗಿದೆ 09 Feb 2023 15:27 IST
HIGHLIGHTS
  • ಇತ್ತೀಚೆಗೆ ಮೊಟೊರೊಲಾದಿಂದ ಕಡಿಮೆ ಬೆಲೆಯ Moto E13 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ.

  • ಈ Moto E13 ಸ್ಮಾರ್ಟ್ಫೋನ್ ಅನ್ನು ಒಟ್ಟಾರೆ ಮೂರು ಬಣ್ಣ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ.

  • ಒಂದೆರಡು ವಾರಗಳ ಹಿಂದೆ Moto e13 ಜಾಗತಿಕ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು.

Moto e13: ಮೋಟೊರೋಲದ 4G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ಫೀಚರ್ ಕೇಳಿದ್ರೆ ಶಾಕ್ ಆಗ್ತೀರಾ!
Moto e13: ಮೋಟೊರೋಲದ 4G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ಫೀಚರ್ ಕೇಳಿದ್ರೆ ಶಾಕ್ ಆಗ್ತೀರಾ!

ಇತ್ತೀಚೆಗೆ ಮೊಟೊರೊಲಾದಿಂದ ಕಡಿಮೆ ಬೆಲೆಯ Moto E13 ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಮೊಟೊರೊಲಾ ತನ್ನ ಈ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಸದ್ದಿಲ್ಲದೇ ಬಿಡುಗಡೆ ಮಾಡಿದೆ. ಇದನ್ನು Moto E13 ಎಂದು ಹೆಸರಿಸಲಾಗಿದೆ. Moto e13 ಹೊಸ ಆಪರೇಟಿಂಗ್ ಸಿಸ್ಟಂ, ಯುನಿಸೊಕ್ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಉತ್ತಮ ಸ್ಮಾರ್ಟ್‌ಫೋನ್ ಆಗಿ ಪ್ರಾರಂಭವಾಗಿದೆ. ಒಂದೆರಡು ವಾರಗಳ ಹಿಂದೆ Moto e13 ಜಾಗತಿಕ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತು. ಈ ಎಂಟ್ರಿ ಲೆವೆಲ್ ಫೋನ್‌ನ ವಿನ್ಯಾಸವು ತುಂಬಾ ಇಷ್ಟವಾಗುತ್ತಿದೆ. ಈ Moto E13 ಸ್ಮಾರ್ಟ್ಫೋನ್ ಅನ್ನು ಒಟ್ಟಾರೆ ಮೂರು ಬಣ್ಣ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ ಫೋನ್‌ನಲ್ಲಿ ಯೋಗ್ಯವಾದ ಕ್ಯಾಮೆರಾವನ್ನು ಸಹ ನೀಡಲಾಗುತ್ತಿದೆ.

ಭಾರತದಲ್ಲಿ Moto e13 ಬೆಲೆ

ಭಾರತದಲ್ಲಿ Moto e13 2GB/64GB ಸೆಟ್‌ಗೆ ರೂ 6,999 ಮತ್ತು 4GB/64GB ಸೆಟ್‌ಗೆ ರೂ 7,999 ಆಗಿದೆ. Motorola e13 ಭಾರತದಲ್ಲಿ ಫೆಬ್ರವರಿ 15 ರಿಂದ ಫ್ಲಿಪ್‌ಕಾರ್ಟ್ ಮತ್ತು ಇತರ ರಿಟೇಲ್ ಸ್ಟೋರ್ ಗಳ ಮೂಲಕ ಮಾರಾಟವಾಗಲಿದೆ. ಈ Moto E13 ಸ್ಮಾರ್ಟ್ಫೋನ್ ಅನ್ನು ಒಟ್ಟಾರೆ ಮೂರು ಬಣ್ಣ ಕಾಸ್ಮಿಕ್ ಬ್ಲಾಕ್, ಅರೋರಾ ಗ್ರೀನ್ ಮತ್ತು ಕ್ರೀಮಿ ವೈಟ್ ಕಲರ್‌ ಆಯ್ಕೆಯಲ್ಲಿ ಲಭ್ಯವಿರುತ್ತದೆ.

Moto e13 ಫೀಚರ್‌ಗಳು

ಯುನಿಸೊಕ್ T606 ಪ್ರೊಸೆಸರ್ ಮೂಲಕ Mali G57 GPU ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಫೋನ್ 64GB ಸ್ಟೋರೇಜ್   ಮತ್ತು 4GB RAM ಅನ್ನು ಹೊಂದಿದೆ. ಹೆಚ್ಚಿನ ಸ್ಟೋರೇಜ್ ಗಾಗಿ ಮೈಕ್ರೊ SD ಕಾರ್ಡ್ ಅನ್ನು ಸಹ ಬಳಸಬಹುದು. ಆಂಡ್ರಾಯ್ಡ್ 13 (Go Edition) ಮೂಲಕ Moto e13 ರನ್ ಆಗುತ್ತದೆ. Moto e13 ಇತ್ತೀಚಿನ ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿದ್ದು ಇತರೆ ಯಾವುದೇ ಅಪ್ಡೇಟ್ ಗಳ ಬಗ್ಗೆ ಮಾಹಿತಿ ಇಲ್ಲ. ಕೈಗೆಟುಕುವ ಬೆಲೆಯಲ್ಲಿರುವ ಈ ಸ್ಮಾರ್ಟ್‌ಫೋನ್‌ 5000 mAh ಬ್ಯಾಟರಿ 10W ಚಾರ್ಜಿಂಗ್ ಅನ್ನು ಬೆಂಬಲಿಸುವುದರ ಜೊತೆಗೆ Dolby Atmos ಅನ್ನು ಬೆಂಬಲಿಸುತ್ತದೆ.

Moto e13 ಸ್ಮಾರ್ಟ್ಫೋನ್ 3.5mm ಆಡಿಯೊ ಜಾಕ್ ಅನ್ನು ಒಳಗೊಂಡಿದೆ. Moto e13 20:9 ಆಸ್ಪೆಕ್ಟ್ ರೇಶಿಯೋದೊಂದಿಗೆ 6.5 ಇಂಚಿನ HD+ IPS LCD ಪ್ಯಾನೆಲ್ ಅನ್ನು ಹೊಂದಿದೆ. ಡಿಸ್ಪ್ಲೇಯಲ್ಲಿರುವ ವಾಟರ್‌ಡ್ರಾಪ್ ನಾಚ್ 5 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Moto e13 ಸಿಂಗಲ್ 13 MP ಬ್ಯಾಂಕ್ ಕ್ಯಾಮರಾ LED ಫ್ಲಾಷ್ ಅನ್ನು ಆಯ್ಕೆ ಮಾಡುತ್ತದೆ. ಕೊನೆಯದಾಗಿ Moto e13 ಸ್ಮಾರ್ಟ್ಫೋನ್ ಡ್ಯುಯಲ್-ಸಿಮ್ 4G, Wi-Fi, ಬ್ಲೂಟೂತ್, GPS, USB-C ಪೋರ್ಟ್ ಮತ್ತು ಮತ್ತು ಹೆಚ್ಚಿನವು ಸೇರಿವೆ.

ಕನ್ನಡದಲ್ಲಿ ಹೆಚ್ಚಿನ ತಂತ್ರಜ್ಞಾನ ಸುದ್ದಿಗಳು, ಪ್ರಾಡಕ್ಟ್ ವಿಮರ್ಶೆಗಳು, ವೈಜ್ಞಾನಿಕ ತಂತ್ರಜ್ಞಾನದ ಫೀಚರ್ಗಳು ಮತ್ತು ಅಪ್ಡೇಟ್ಗಳಿಗಾಗಿ Digit.in ಓದುತ್ತಿರಿ ಅಥವಾ Google News ಪೇಜ್ ನೋಡಿ

ಮೋಟೋ E13 Key Specs, Price and Launch Date

Expected Price: ₹9990
Release Date: 26 Feb 2023
Variant: 32 GB/2 GB RAM
Market Status: Upcoming

Key Specs

  • Screen Size Screen Size
    6.73" (1080 x 2460)
  • Camera Camera
    13 + 2 | 5 MP
  • Memory Memory
    32 GB/2 GB
  • Battery Battery
    5000 mAh
Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

Motorola launched Moto e13 in India at Rs 6999, know price, specs and features

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

Advertisements

VISUAL STORY ಎಲ್ಲವನ್ನು ವೀಕ್ಷಿಸಿ