50MP ಸೆಲ್ಫಿ ಕ್ಯಾಮೆರಾವುಳ್ಳ Motorola Edge 50 Pro 5G ಲಾಂಚ್! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ ಪರಿಶೀಲಿಸಿ!

50MP ಸೆಲ್ಫಿ ಕ್ಯಾಮೆರಾವುಳ್ಳ Motorola Edge 50 Pro 5G ಲಾಂಚ್! ಖರೀದಿಗೂ ಮುಂಚೆ ಈ ಟಾಪ್ 5 ಫೀಚರ್ ಪರಿಶೀಲಿಸಿ!
HIGHLIGHTS

ಭಾರತದಲ್ಲಿ Motorola Edge 50 Pro 5G ಬೆಲೆ ರೂ 27,999 ರೂಗಳಿಂದ ಪ್ರಾರಂಭವಾಗುತ್ತದೆ.

Motorola Edge 50 Pro 5G ಸ್ಮಾರ್ಟ್ಫೋನ್ 144Hz ಡಿಸ್ಪ್ಲೇ, 125W ಫಾಸ್ಟ್ ಚಾರ್ಜಿಂಗ್ ಮತ್ತು ಹೆಚ್ಚಿನದನ್ನು ನೀಡುತ್ತದೆ.

Motorola Edge 50 Pro 5G ಸ್ಮಾರ್ಟ್ಫೋನ್ ಸ್ಲಿಮ್ ಬಾಡಿ ಮತ್ತು ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

Motorola has launched Edge 50 Pro 5G smartphone in India: ಭಾರತದಲ್ಲಿ ಮೋಟೊರೋಲ ಕಂಪನಿ ತಲ್ಲ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ Motorola Edge 50 Pro 5G ಎಂದು ಹೆಸರಿಸಿದ್ದು ಉತ್ತಮ ಮಧ್ಯಮ ಶ್ರೇಣಿಯಲ್ಲಿ ಇದು ಸ್ಟೈಲಿಶ್ ವಿನ್ಯಾಸ, ಉತ್ತಮ ಕ್ಯಾಮೆರಾ ಮತ್ತು ಬೆಸ್ಟ್ ಸಾಫ್ಟ್‌ವೇರ್‌ನಂತಹ ಪ್ರಮುಖ ಭಾಗಗಳಲ್ಲಿ ಫೋನ್ ಹೆಚ್ಚು ಪ್ರೀಮಿಯಂ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ Motorola Edge 50 Pro 5G ಸೆಲ್ಫಿ ಪ್ರಿಯರನ್ನು ಗುರಿಯಾಗಿಸಿಕೊಂಡಿದ್ದು ಉತ್ತಮ ಆಯ್ಕೆ ಅಂದರೆ ತಪ್ಪಿಲ್ಲ.

ನೀವೊಂದು ಸೊಗಸಾದ ಮತ್ತು ಹೆಚ್ಚು ಬಾಳಿಕೆ ಬರುವದನ್ನು ಲೇಟೆಸ್ಟ್ 5G ಪ್ರೀಮಿಯಂ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ Motorola Edge 50 Pro 5G ಸೂಕ್ತ ಆಯ್ಕೆಯಾಗಿದೆ. ಮೊಟೊರೊಲಾ ಈ ಲೇಟೆಸ್ಟ್ Motorola Edge 50 Pro 5G ಸ್ಮಾರ್ಟ್ಫೋನಲ್ಲಿ ಇತ್ತೀಚಿನ ಟೆಕ್ನಾಲಜಿ ಫೀಚರ್ ಗಳನ್ನು ಬಳಸಿಕೊಂಡು ತಮ್ಮ ಬಳಕೆದಾರರಿಗೆ ಮೆಚ್ಚುವಂತಹ ಕೆಲಸವನ್ನು ಮಾಡಿದೆ. ಆದ್ದರಿಂದ ಈ ಸ್ಮಾರ್ಟ್ಫೋನ್ ಖರೀದಿಸುವ ಮುಂಚೆ ಇದರ ಟಾಪ್ 5 ಫೀಚರ್ಗಳನೊಮ್ಮೆ ಪರಿಶೀಲಸಿಕೊಳ್ಳಿ.

Also Read: Lava Agni 2 5G ಸ್ಮಾರ್ಟ್ಫೋನ್ ಬೆಲೆ ಕಡಿತ! ಭಾರಿ ಡಿಸ್ಕೌಂಟ್‌ಗಳೊಂದಿಗೆ ಇಂದೇ ಖರೀದಿಸಿ!

Motorola Edge 50 Pro 5G ಡಿಸ್ಪ್ಲೇ ಮಾಹಿತಿ

ಮೊದಲಿಗೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ 1220 x 2712 ಪಿಕ್ಸೆಲ್ ರೆಸುಲ್ಯೂಷನ್ ಜೊತೆಗೆ ಪೂರ್ತಿ 6.7 ಇಂಚಿನ 1.5K 144Hz ಕರ್ವ್ pOLED ಡಿಸ್ಪ್ಲೇಯನ್ನು ವಿಶ್ವದಲ್ಲೇ ಮೊದಲ ಬಾರಿಗೆ ಪ್ಯಾಂಟೋನ್ ಮೂಲಕ ಮೌಲ್ಯೀಕರಿಸಲಾದ ಪ್ಯಾನಲ್ ಅನ್ನು ಒಳಗೊಂಡಿದೆ. ಸ್ಮಾರ್ಟ್ಫೋನ್ 2000 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಅಲ್ಲದೆ ನಿಮಗೆ HDR 10+ ಅನ್ನು ಬೆಂಬಲದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ.

Motorola has launched Edge 50 Pro 5G smartphone in India
Motorola has launched Edge 50 Pro 5G smartphone in India

Motorola Edge 50 Pro 5G ಕ್ಯಾಮೆರಾ ಹೇಗಿದೆ?

ಈ ಸ್ಮಾರ್ಟ್ಫೋನ್ ನಿಮಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ನೀಡಿದ್ದು ಮೊದಲಿಗೆ ಪ್ರೈಮರಿ 50MP ಮೆಗಾಪಿಕ್ಸೆಲ್ ಪ್ರೈಮರಿ ಅಲ್ಟ್ರಾವೈಡ್ ಸೆನ್ಸರ್ f/1.4 ಅಪರ್ಚರ್ ಜೊತೆಗೆ ಹೊಂದಿದೆ. ಈ ಲೆನ್ಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಸಹ ಪಡೆಯುತ್ತದೆ. ಅಲ್ಲದೆ ಇದರಲ್ಲಿ 3x ಆಪ್ಟಿಕಲ್ ಜೂಮ್ ಬೆಂಬಲದೊಂದಿಗೆ 10MP ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ನೀಡಲಾಗಿದೆ. ಕೊನೆಯದಾಗಿ ಮ್ಯಾಕ್ರೋ ಫೋಟೋಗ್ರಫಿಯನ್ನು ಬೆಂಬಲಿಸಲು ಅತಿದೊಡ್ಡ ಲೆನ್ಸ್ 13MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಪ್ರೈಮರಿ ಕ್ಯಾಮೆರಾದಿಂದ ಉತ್ತಮ ಫೋಟೋ ಮತ್ತು ವಿಡಿಯೋಗಳನ್ನು ಪಡೆಯಬಹುದು.

ಇದರ ಕ್ಯಾಮೆರಾ ಸೆಟಪ್ ನೈಜ ಪ್ರಪಂಚದ ಬಣ್ಣಗಳು ಮತ್ತು ಅಧಿಕೃತ ಸ್ಕಿನ್ ಟೋನ್‌ಗಳಿಗಾಗಿ ಪ್ಯಾಂಟೋನ್ ವ್ಯಾಲಿಡೇಟ್ ಎಂದು ಹೇಳಲಾಗುತ್ತದೆ. ಆದರೆ ಫೋಟೋಗಳು ಸ್ವಲ್ಪ ಹೆಚ್ಚು ಸ್ಯಾಚುರೇಟೆಡ್ ಆಗಿದ್ದು ಕ್ಯಾಮೆರಾ ಸಿಸ್ಟಮ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೆಲವು AI ಪಡೆಯುತ್ತದೆ. ಕೊನೆಯದಾಗಿ Motorola Edge 50 Pro 5G ಮುಂಭಾಗದಲ್ಲಿ ಆಟೋಫೋಕಸ್ನೊಂದಿಗೆ 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ.

Motorola has launched Edge 50 Pro 5G smartphone in India

ಮೋಟೊರೋಲ Edge 50 Pro 5G ಹಾರ್ಡವೆರ್ ಡೀಟೇಲ್ಸ್

ಹ್ಯಾಂಡ್‌ಸೆಟ್ ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ಯಿಂದ 12GB RAM ಮತ್ತು 256GB ಯ ಆನ್‌ಬೋರ್ಡ್ ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ. Motorola Edge 50 Pro Android 14 ಅನ್ನು ಔಟ್-ಆಫ್-ದಿ-ಬಾಕ್ಸ್ ಜೊತೆಗೆ Hello UI ಲೇಯರ್ಡ್ ಜೊತೆಗೆ ರನ್ ಮಾಡುತ್ತದೆ. ಇದು ಒಟ್ಟಿಗೆ ಸ್ಟಾಕ್ ಹತ್ತಿರವಿರುವ Android ಅನುಭವವನ್ನು ನೀಡುತ್ತದೆ. ಆಂಡ್ರಾಯ್ಡ್ 17 ರವರೆಗೆ ಮೂರು OS ಅಪ್‌ಗ್ರೇಡ್‌ಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲು ಸ್ಮಾರ್ಟ್‌ಫೋನ್ ಭರವಸೆ ಇದೆ. ಸ್ಮಾರ್ಟ್ಫೋನ್ 8GB ಮತ್ತು 12GB LPDDR4X RAM ಅನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ 256GB ಮತ್ತು 512GB ಸ್ಟೋರೇಜ್ ಅನ್ನು ಸಪೋರ್ಟ್ ಮಾಡುತ್ತದೆ.

ಮೋಟೊರೋಲ Edge 50 Pro 5G ಬ್ಯಾಟರಿ ಮತ್ತು ಸೆನ್ಸರ್‌ಗಳು

Motorola Edge 50 Pro ಸ್ಮಾರ್ಟ್ಫೋನ್ 4,500mAh ಬ್ಯಾಟರಿಯಿಂದ 125W ವೈರ್ಡ್ ಮತ್ತು 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. 125W ಚಾರ್ಜರ್ 12GB RAM ರೂಪಾಂತರದೊಂದಿಗೆ ಲಭ್ಯವಿದೆ. ಆದರೆ 8GB RAM ಆಯ್ಕೆಯು ಬಾಕ್ಸ್‌ನಲ್ಲಿ 68W ಚಾರ್ಜರ್ ಅನ್ನು ಪಡೆಯುತ್ತದೆ. Motorola Edge 50 Pro 5G ನಿಮಗೆ Dolby Atmos, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಸಹ ಪಡೆಯುತ್ತೀರಿ

Motorola has launched Edge 50 Pro 5G smartphone in India
Motorola has launched Edge 50 Pro 5G smartphone in India

Motorola Edge 50 Pro 5G ಬೆಲೆ ಮತ್ತು ಲಭ್ಯತೆ

ಕಂಪನಿಯು Motorola Edge 50 Pro 5G ಸ್ಮಾರ್ಟ್ಫೋನ್ ಮಾರಾಟವು ಫ್ಲಿಪ್‌ಕಾರ್ಟ್‌ನಲ್ಲಿ ಏಪ್ರಿಲ್ 8 ರಿಂದ ಪ್ರಾರಂಭವಾಗುತ್ತದೆ.ಅನ್ನು ರೂ 31,999 ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಈ ಬೆಲೆಯು ಫೋನ್‌ನ 8GB RAM + 256GB ಸ್ಟೋರೇಜ್ ರೂಪಾಂತರವಾಗಿದೆ. ಪರಿಚಯಾತ್ಮಕ ಕೊಡುಗೆಯ ಅಡಿಯಲ್ಲಿ ಅದರ ಮೇಲೆ 2000 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದರ ನಂತರ ಅದರ ಬೆಲೆ 29,999 ರೂಗಳಾಗಿವೆ. ಆದರೆ ಸ್ಮಾರ್ಟ್‌ಫೋನ್‌ನ 12GB RAM + 256GB ಸ್ಟೋರೇಜ್ ರೂಪಾಂತರವು ರೂ 35,999 ಗೆ ಬರುತ್ತದೆ. ಇದನ್ನು ನೀವು ರೂ 33,999 ಗೆ ಆಫರ್ ಅಡಿಯಲ್ಲಿ ಖರೀದಿಸಬಹುದು. ಈ Motorola Edge 50 Pro 5G ರೂಪಾಂತರದೊಂದಿಗೆ ಕಂಪನಿಯು 125W ಚಾರ್ಜರ್ ಅನ್ನು ಒದಗಿಸುತ್ತಿದೆ. Motorola ಈ ಫೋನ್‌ನೊಂದಿಗೆ HDFC ಕಾರ್ಡ್‌ಗಳ ಮೇಲೆ 2500 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo