50MP ಕ್ಯಾಮೆರಾ ಮತ್ತು Dimensity 7020 ಪ್ರೊಸೆಸರ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿರುವ Moto G54 5G

HIGHLIGHTS

Moto G54 5G ಫೋನ್ 6.5 ಇಂಚಿನ 120Hz ರಿಫ್ರೆಶ್ ರೇಟ್‌ನೊಂದಿಗೆ ಬಿಡುಗಡೆಯಲು ಸಿದ್ಧವಾಗಿದೆ.

Moto G54 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ 30W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.

Moto G54 5G ಸ್ಮಾರ್ಟ್ಫೋನ್ MediaTek Dimensity 7020 ಸೆಸರ್‌ನೊಂದಿಗೆ ಬಿಡುಗಡೆಯಾಗಲಿರುವ ಮೊದಲ ಫೋನ್.

50MP ಕ್ಯಾಮೆರಾ ಮತ್ತು Dimensity 7020 ಪ್ರೊಸೆಸರ್‌ನೊಂದಿಗೆ ಬಿಡುಗಡೆಗೆ ಸಜ್ಜಾಗಿರುವ Moto G54 5G

ಮೊಟೊರೊಲಾ ಇಂಡಿಯಾ ತನ್ನ ಮುಂಬರಲಿರುವ 5G ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ಚೀನಾದಲ್ಲಿ 5ನೇ ಸೆಪ್ಟೆಂಬರ್ ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್ಫೋನ್ ಭಾರತದಲ್ಲಿ ಫ್ಲಿಪ್ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಇ-ಕಾಮರ್ಸ್ ಪೋರ್ಟಲ್ ಸ್ಮಾರ್ಟ್ಫೋನ್ ಸಂಬಂಧಿಸಿದ ಮೈಕ್ರೋಸೈಟ್ ಅನ್ನು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಮಾಡಿದ್ದು ಇದು ಕೆಲವು ಪ್ರಮುಖ ವಿಶೇಷಣಗಳನ್ನು ದೃಢೀಕರಿಸುತ್ತದೆ.

Digit.in Survey
✅ Thank you for completing the survey!

ಇದನ್ನೂ ಓದಿ: WhatsApp Tips: ವಾಟ್ಸಾಪ್‌ನಲ್ಲಿ ಹೈ ಕ್ವಾಲಿಟಿಯ HD ಫೋಟೋ ಮತ್ತು ವೀಡಿಯೊಗಳನ್ನು ಕಳುಹಿಸುವುದು ಹೇಗೆ?

ಭಾರತದಲ್ಲಿ Moto G54 5G ಬಿಡುಗಡೆ ದಿನಾಂಕ!

ಮೊಟೊರೊಲಾ MediaTek Dimensity 7020 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿರುವ Moto G54 5G ಭಾರತದಲ್ಲಿ 6ನೇ ಸೆಪ್ಟೆಂಬರ್ 2023 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಫೋನ್ ಡೈಮೆನ್ಸಿಟಿ 7020 ಪ್ರೊಸೆಸರ್‌ನೊಂದಿಗೆ ಚಾಲಿತವಾಗಲಿದೆ ಎಂದು ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ತಿಳಿಸುತ್ತದೆ. ನೀವು ಇದರ ಲೈವ್ ಸ್ಟ್ರೀಮಿಂಗ್ ಅನ್ನು ಮೊಟೊರೊಲಾ ಯುಟ್ಯೂಬ್ ಮತ್ತು ಫ್ಲಿಪ್ಕಾರ್ಟ್ ಸೈಟ್ ಮೂಲಕ ವೀಕ್ಷಿಸಬಹುದು.

Moto G54 5G ನಿರೀಕ್ಷಿತ ಫೀಚರ್ಗಳು  

ಸ್ಮಾರ್ಟ್‌ಫೋನ್ 6000mAh ಬ್ಯಾಟರಿಯೊಂದಿಗೆ ಬರಲಿದೆ. ಹೆಚ್ಚಿನ ವಿವರಗಳನ್ನು ದೃಢೀಕರಿಸುವ ಮೊಟೊರೊಲಾದ ಇಂಡಿಯಾ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್ಫೋನ್ ಪಟ್ಟಿಮಾಡಲಾಗಿದೆ. Motorola G54 ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿರುವ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ OIS ಬೆಂಬಲವನ್ನು ಹೊಂದಿರುತ್ತದೆ. ಮುಂಭಾಗದಲ್ಲಿ ಸ್ಮಾರ್ಟ್ಫೋನ್ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ. ಸ್ಮಾರ್ಟ್ಫೋನ್ 30W ಟರ್ಬೋಪವರ್ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಅಪ್‌ಡೇಟ್ ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ಪ್ಯಾಚ್‌ಗಳನ್ನು ಸ್ವೀಕರಿಸುತ್ತದೆ.

Moto G54 5G with MediaTek Dimensity 7020

ಇದನ್ನೂ ಓದಿ: Rakhi Gift: ಗ್ಯಾಸ್ ಸಿಲೆಂಡರ್‌ ಮೇಲೆ 200 ರೂಗಳ ಕಡಿತ! ಯಾರಿಗೆ ಸಿಗುತ್ತೆ ಈ ಉಚಿತ ಉಜ್ವಲ ಗ್ಯಾಸ್ ಕನೆಕ್ಷನ್‌?

Moto G54 5G ನಿರೀಕ್ಷಿತ ಬೆಲೆ

ಈ ಸ್ಮಾರ್ಟ್ಫೋನ್ ರಿಲಯನ್ಸ್ ಡಿಜಿಟಲ್‌ನಲ್ಲಿನ ಉತ್ಪನ್ನದ ಪುಟದ ಪಟ್ಟಿಯ ಸೌಜನ್ಯದಿಂದ ಬಹಿರಂಗಪಡಿಸಲಾಗಿದೆ. Moto G54 5G ಅನ್ನು ಚಿಲ್ಲರೆ ವ್ಯಾಪಾರಿಗಳ ವೆಬ್‌ಸೈಟ್‌ನಲ್ಲಿ ರೂ 14,999 ಗೆ ಪಟ್ಟಿ ಮಾಡಲಾಗಿದೆ. ಈ ಬೆಲೆಯು 8GB RAM + 128GB ಸ್ಟೋರೇಜ್ ಮಾದರಿಗೆ ಅನ್ವಯಿಸುತ್ತದೆ. 256GB ಸ್ಟೋರೇಜ್ ಹೊಂದಿರುವ 12GB RAM ಮಾದರಿಯನ್ನು ಸಹ 18,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಮತ್ತೊಂದೆಡೆ 256GB ಇಂಟರ್ನಲ್ ಸ್ಟೋರೇಜ್ ಜೊತೆಗೆ 12GB RAM ಮಾದರಿಯು ರೂ 19,999 ವೆಚ್ಚವಾಗಲಿದೆ.

ಇದನ್ನೂ ಓದಿ: Jio vs Airtel Fiber Plan: ಜಿಯೋ ಮತ್ತು ಏರ್‌ಟೆಲ್‌ನ ಫೈಬರ್ ಪ್ಲಾನ್‌ಗಳ ಸ್ಪೀಡ್ ಮತ್ತು ಬೆಲೆ ಎಷ್ಟು?

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo