Moto G35 5G ಸ್ಮಾರ್ಟ್ಫೋನ್ 120Hz ಡಿಸ್ಪ್ಲೇ ಮತ್ತು 50MP ಕ್ಯಾಮೆರಾದೊಂದಿಗೆ ಕೇವಲ ₹9999 ರೂಗಳಿಗೆ ಬಿಡುಗಡೆ!
ಭಾರತದಲ್ಲಿ Moto G35 5G ಇಂದು ಅಧಿಕೃತವಾಗಿ ₹9,999 ರೂಗಳಿಗೆ ಬಿಡುಗಡೆಯಾಗಿದೆ.
Moto G35 5G ಸ್ಮಾರ್ಟ್ಫೋನ್ 120Hz ಡಿಸ್ಪ್ಲೇ ಮತ್ತು 50MP ಕ್ಯಾಮೆರಾದೊಂದಿಗೆ ಅನಾವರಣಗೊಂಡಿದೆ.
Moto G35 5G ಸ್ಮಾರ್ಟ್ಫೋನ್ ಮೊದಲ ಮಾರಾಟವನ್ನು 16ನೇ ಡಿಸೆಂಬರ್‌ನಿಂದ ಆರಂಭಿಸಲಿದೆ.
Moto G35 5G in India: ಭಾರತದಲ್ಲಿ ಇಂದು ಭಾರತದಲ್ಲಿ ಮೋಟೋರೋಲಾ (Motorola) ಸ್ಮಾರ್ಟ್ಫೋನ್ ಕಂಪನಿ ತನ್ನ ಲೇಟೆಸ್ಟ್ Moto G35 5G ಸ್ಮಾರ್ಟ್ಫೋನ್ 120Hz ಡಿಸ್ಪ್ಲೇ ಮತ್ತು 50MP ಕ್ಯಾಮೆರಾದೊಂದಿಗೆ ₹9,999 ರೂಗಳಿಗೆ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ ತನ್ನ G ಸರಣಿಗೆ ಸೇರಿಸಿದ್ದು ಅತಿ ಕಡಿಮೆ ಬೆಲೆಗೆ ಹೆಚ್ಚುವರಿ ಫೀಚರ್ ಪ್ರಯೋಜನಗಳನ್ನು ನೀಡುವ 5G ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದನ್ನು ಇಂದು ಅಂದ್ರೆ 10ನೇ ಡಿಸೆಂಬರ್ 2024 ರಂದು ಬಿಡುಗಡೆಗೊಳಿಸಿದ್ದು ಇದರ ಮೊದಲ ಮಾರಾಟವನ್ನು 16ನೇ ಡಿಸೆಂಬರ್‌ನಿಂದ ಆರಂಭಿಸಲಿದೆ.
SurveyAlso Read: BSNL Recharge: ಕೇವಲ ₹797 ರೂಗಳಿಗೆ ಬರೋಬ್ಬರಿ 300 ದಿನಗಳ ವ್ಯಾಲಿಡಿಟಿಗೆ ಲಭ್ಯವಿದೆ
ಭಾರತದಲ್ಲಿ Moto G35 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ
Moto G35 5G ಸ್ಮಾರ್ಟ್ಫೋನ್ ಇನ್ ಬಿಲ್ಟ್ 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಒಂದೇ ಒಂದು ಮೆಮೊರಿಯ ರೂಪಾಂತರಕ್ಕಾಗಿ ಹ್ಯಾಂಡ್‌ಸೆಟ್‌ನ ಬೆಲೆ ₹9,999 ರೂಗಳಿಗೆ ಗ್ರಾಹಕರು 16ನೇ ಡಿಸೆಂಬರ್ 2024 ರಿಂದ ಮಧ್ಯಾಹ್ನ 12:00 ಗಂಟೆಗೆ Flipkart, Motorola.in ಮತ್ತು ದೇಶಾದ್ಯಂತದ ಪ್ರಮುಖ ಮೊಬೈಲ್ ಅಂಗಡಿಗಳಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಈ ಸ್ಮಾರ್ಟ್ಫೋನ್ ಅನ್ನು Midnight Black, Leaf Green ಮತ್ತು Guava Red ಎಂಬ ಮೂರು ಬಣ್ಣಗಳಲ್ಲಿ ಖರೀದಿಸಬಹುದು.
ಭಾರತದಲ್ಲಿ Moto G35 5G ಫೀಚರ್ ಮತ್ತು ವಿಶೇಷಣಗಳೇನು?
Moto G35 5G ಸ್ಮಾರ್ಟ್ಫೋನ್ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.72 ಇಂಚಿನ FHD+ LCD ಡಿಸ್ಪ್ಲೇಯನ್ನು ಹೊಂದಿದೆ. ಹ್ಯಾಂಡ್‌ಸೆಟ್ HDR10 ಅನ್ನು ಬೆಂಬಲಿಸುತ್ತದೆ ಮತ್ತು 1000 nits ವರೆಗಿನ ಗರಿಷ್ಠ ಹೊಳಪನ್ನು ನೀಡುತ್ತದೆ. ರೋಮಾಂಚಕ ದೃಶ್ಯಗಳನ್ನು ಖಾತ್ರಿಗೊಳಿಸುತ್ತದೆ. ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. Moto G35 5G ಸ್ಮಾರ್ಟ್ಫೋನ್ ಅಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ.
Enjoy segment's fastest 5G with 12 bands, a stunning FHD+ 6.7” 120Hz, Vision Booster Display with Gorilla® Glass 3, 50MP Quad Pixel camera & vegan leather design.
— Motorola India (@motorolaindia) December 10, 2024
Sale starts 16 Dec at ₹9,999/- @Flipkart | https://t.co/azcEfy1Wlo | leading retail stores.#MotoG35 5G #ExtraaHai pic.twitter.com/lKBUzS4q3b
ಇದು UNISOC T760 ಚಿಪ್ನೊಂದಿಗೆ ಚಾಲಿತವಾಗಿದ್ದು ಫೋನ್ 4GB RAM ಮತ್ತು RAM ವಿಸ್ತರಣೆಯ ಮೂಲಕ ಹೆಚ್ಚುವರಿ 4GB ವರ್ಚುವಲ್ RAM ನೊಂದಿಗೆ ಉತ್ತಮವಾದ 128GB ಸ್ಟೋರೇಜ್ ಅನ್ನು ಒಳಗೊಂಡಿದೆ. ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಎರಡು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಭರವಸೆಯೊಂದಿಗೆ ಆಂಡ್ರಾಯ್ಡ್ 15 ಅಪ್‌ಗ್ರೇಡ್ ಮಾಡಬಹುದು. Moto G35 5G ಸಂಪರ್ಕದಲ್ಲಿ ನಮ್ಯತೆಗಾಗಿ ಹೈಬ್ರಿಡ್ ಡ್ಯುಯಲ್ ಸಿಮ್ ಸ್ಲಾಟ್ ಅನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು ಅದು 18W ಟರ್ಬೋಪವರ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಬಾಕ್ಸ್‌ನಲ್ಲಿ 20W ಚಾರ್ಜರ್ ಅನ್ನು ಒಳಗೊಂಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile