JioPhone Next: ಅತಿ ಕಡಿಮೆ ಬೆಲೆಯ Jio 4G ಫೋನ್ ಬಿಡುಗಡೆ ಮುಂದೂಡಿಕೆ, ಕಾರಣವೇನು ತಿಳಿಯಿರಿ

JioPhone Next: ಅತಿ ಕಡಿಮೆ ಬೆಲೆಯ Jio 4G ಫೋನ್ ಬಿಡುಗಡೆ ಮುಂದೂಡಿಕೆ, ಕಾರಣವೇನು ತಿಳಿಯಿರಿ
HIGHLIGHTS

JioPhone Next ಅತಿ ಕಡಿಮೆ ಬೆಲೆಯ Jio 4G ಫೋನ್ ಬಿಡುಗಡೆ ಮುಂದೂಡಿಕೆ

JioPhone Next ಫೋನ್ ದೀಪಾವಳಿಗೆ ಮುಂಚಿತವಾಗಿ ಬಿಡುಗಡೆವಾಗುತ್ತದೆ.

JioPhone Next ಸೋರಿಕೆಯ ಪ್ರಕಾರ ಈ ಫೋನ್ 3,499 ರೂಗಳ ಬೆಲೆಯಲ್ಲಿ ಬರುವ ನಿರೀಕ್ಷೆಯಿದೆ

ಜಿಯೋಫೋನ್ ನೆಕ್ಸ್ಟ್ ಲಾಂಚ್ ಲೇಟೆಸ್ಟ್ ಅಪ್‌ಡೇಟ್ ಮೂಲಕ ರಿಲಯನ್ಸ್ ಜಿಯೋದ ಅತಿ ಅಕೆಡಿಮೆ ಬೆಲೆಗೆ ಮುಂಬರುವ ಫೋನ್ ಜಿಯೋಫೋನ್ ನೆಕ್ಸ್ಟ್‌ಗಾಗಿ ನೀವು ಕೂಡ ಕಾಯುತ್ತಿದ್ದರೆ ವಾಸ್ತವವಾಗಿ ಈ ಫೋನ್ ಮುಂದಿನ ತಿಂಗಳು ದೀಪಾವಳಿಗೆ ಮುಂಚಿತವಾಗಿ ಬಿಡುಗಡೆವಾಗುತ್ತದೆ. ಇದನ್ನು ರಿಲಯನ್ಸ್ ಜಿಯೋ ಗುರುವಾರ ತಡವಾಗಿ ಘೋಷಿಸಿತು. ರಿಲಯನ್ಸ್ ಜಿಯೋನ ಹೊಸ ಜಿಯೋಫೋನ್ ನೆಕ್ಸ್ಟ್ JioPhone Next ಅನ್ನು ಕೆಲವು ವಾರಗಳವರೆಗೆ ವಿಳಂಬ ಮಾಡುತ್ತಿದೆ ಎಂದು ದೃಢಪಡಿಸಿದೆ. ಈ ವಿಳಂಬದ ಹಿಂದಿನ ಮುಖ್ಯ ಕಾರಣ ಇದರಲ್ಲಿನ ಜಾಗತಿಕ ಸೆಮಿಕಂಡಕ್ಟರ್ ಚಿಪ್ ಕೊರತೆಗೆ ಸಂಬಂಧಿಸಿದೆ. ಈ ಮುಂಚೆ ಗಣೇಶ ಚತುರ್ಥಿಯಂದು ಅಂದರೆ ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿಯು ಜೂನ್ ನಲ್ಲಿ ಘೋಷಿಸಿದ್ದರೂ ಸ್ಮಾರ್ಟ್ಫೋನ್ ಪ್ರಸ್ತುತ ಸುಧಾರಿತ ಪ್ರಯೋಗಗಳಲ್ಲಿರುವ ಕಾರಣ ದೀಪಾವಳಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಘೋಷಿಸಿದೆ.

JioPhone Next

JioPhone Next ಬೆಲೆ

ಜೂನ್ ನಲ್ಲಿ ರಿಲಯನ್ಸ್ ಜಿಯೋ ಫೋನ್‌ಗೆ ಸೆಪ್ಟೆಂಬರ್ 10 ಬಿಡುಗಡೆ ದಿನಾಂಕವನ್ನು ಘೋಷಿಸಿತು ಮತ್ತು ಅದನ್ನು ಗೂಗಲ್‌ನೊಂದಿಗೆ ಅಭಿವೃದ್ಧಿಪಡಿಸುವುದರಿಂದ ಆಂಡ್ರಾಯ್ಡ್ ಮತ್ತು ಪ್ಲೇ ಸ್ಟೋರ್‌ನಂತಹ ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳನ್ನು ತರುತ್ತದೆ ಎಂದು ಹೇಳಿತು ಆದರೆ ಫೀಚರ್‌ಫೋನ್‌ನ ಬೆಲೆಯಲ್ಲಿ ಕಂಪನಿಯು JioPhone Next ಜಿಯೋಫೋನ್ ನೆಕ್ಸ್ಟ್‌ಗೆ ನಿರ್ದಿಷ್ಟ ಬೆಲೆಯನ್ನು ಘೋಷಿಸದಿದ್ದರೂ JioPhone Next ಸೋರಿಕೆಯ ಪ್ರಕಾರ ಈ ಫೋನ್ 3,499 ರೂಗಳ ಬೆಲೆಯಲ್ಲಿ ಬರುವ ನಿರೀಕ್ಷೆಯಿದೆ.

JioPhone Next ವೈಶಿಷ್ಟ್ಯಗಳು

ಮುಂಬರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜಿಯೋ ಹೆಚ್ಚು ಬಹಿರಂಗಪಡಿಸಿಲ್ಲ. ಆದರೆ ಇದು ಫೋನ್‌ನ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಒಂದು ವಿಷಯಕ್ಕೆ ಇದು ಸ್ಪಷ್ಟವಾಗಿ 4G ಯಲ್ಲಿ ಕೆಲಸ ಮಾಡುತ್ತದೆ. ಏಕೆಂದರೆ ಇದು ರಿಲಯನ್ಸ್ ಜಿಯೋ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವುದು. ಫೋನ್ ಗೂಗಲ್ ಪ್ಲೇ ಮತ್ತು ಭಾರತ ನಿರ್ದಿಷ್ಟ ಸ್ನ್ಯಾಪ್‌ಚಾಟ್ ಲೆನ್ಸ್‌ಗಳೊಂದಿಗೆ ಮೊದಲೇ ಲೋಡ್ ಮಾಡಲಾಗಿದೆ.

ಇದಲ್ಲದೇ ಫೋನಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಇದು ದಪ್ಪ ಬೆಜೆಲ್ ಗಳನ್ನು ಹೊಂದಿದೆ. ಮತ್ತು ಫೋನಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಒಂದೇ ಕ್ಯಾಮೆರಾ ಇದೆ. ಸೋರಿಕೆಯಾದ ಮಾಹಿತಿಯ ಪ್ರಕಾರ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ 11 (ಗೋ ಎಡಿಷನ್) ನಲ್ಲಿ ಕಾರ್ಯನಿರ್ವಹಿಸಬಹುದು. ಮತ್ತು 5.5 ಇಂಚಿನ ಡಿಸ್ಪ್ಲೇ ಹೊಂದಿರಬಹುದು. ಫೋನ್ Qualcomm QM215 ಪ್ರೊಸೆಸರ್ ಮತ್ತು 2500mAh ಬ್ಯಾಟರಿ ಡ್ಯುಯಲ್-ಸಿಮ್ ಬೆಂಬಲ ಮತ್ತು 2GB ಅಥವಾ 3GB RAM ಆಯ್ಕೆಗಳು ಹಾಗೂ 16GB ಅಥವಾ 32GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರಬಹುದು. ಆದಾಗ್ಯೂ ಈ ವಿವರಗಳನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo