iQOO Z9 Lite 5G ಸ್ಮಾರ್ಟ್ಫೋನ್ 50MP Sony AI ಕ್ಯಾಮೆರಾದೊಂದಿಗೆ ಕೇವಲ ₹9,499 ರೂಗಳಿಗೆ ಮಾರಾಟ!

iQOO Z9 Lite 5G ಸ್ಮಾರ್ಟ್ಫೋನ್ 50MP Sony AI ಕ್ಯಾಮೆರಾದೊಂದಿಗೆ ಕೇವಲ ₹9,499 ರೂಗಳಿಗೆ ಮಾರಾಟ!
HIGHLIGHTS

iQOO Z9 Lite 5G ಸ್ಮಾರ್ಟ್ಫೋನ್ ₹8,499 ರೂಗಳಿಗೆ ಲಭ್ಯವಿದೆ.

iQOO Z9 Lite 5G ಪ್ರಸ್ತುತ 50MP Sony AI ಕ್ಯಾಮೆರಾದೊಂದಿಗೆ ಬರುತ್ತದೆ.

iQOO Z9 Lite 5G ಪ್ರೇಮಿಗಳ ದಿನದಂದು ನಿಮ್ಮ ಪ್ರೇಯಸಿ ಅಥವಾ ಪ್ರಿಯಕನಿಗಾಗಿ ಬೆಸ್ಟ್ ಗಿಫ್ಟ್ ನೀಡಬಹುದು.

ಪ್ರೇಮಿಗಳ ದಿನದಂದು (Valentine’s Day 2025) ಪ್ರಯುಕ್ತ ನಿಮಗೆ ಅಥವಾ ನಿಮಗೆ ತಿಳಿದವರಿಗೊಂದು ಬಜೆಟ್ ಬೆಲೆಯಲ್ಲಿ ಲೇಟೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದರೆ ಈ iQOO Z9 Lite 5G ಪ್ರೇಮಿಗಳ ದಿನದಂದು ನಿಮ್ಮ ಪ್ರೇಯಸಿ ಅಥವಾ ಪ್ರಿಯಕನಿಗಾಗಿ ಬೆಸ್ಟ್ ಗಿಫ್ಟ್ ನೀಡಲು ಉತ್ತಮ ಆಯ್ಕೆಯಾಗಲಿದೆ. ಯಾಕೆಂದರೆ ಪ್ರಸ್ತುತ 50MP Sony AI ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್‌ಫೋನ್‌ ಎರಡು ರೂಪಾಂತರಗಳ ಮೇಲೆ 2000 ರೂಗಳ ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು.

iQOO Z9 Lite 5G ಫೀಚರ್ ಮತ್ತು ವಿಶೇಷಗಳೇನು?

iQoo Z9 Lite 5G ಸ್ಮಾರ್ಟ್‌ಫೋನ್ 6.56 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು 90Hz ರಿಫ್ರೆಶ್ ದರ ಮತ್ತು 840 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ.ಸ್ಮಾರ್ಟ್‌ಫೋನ್ ಸೋನಿಯಿಂದ 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ.

iQOO Z9 Lite 5G
iQOO Z9 Lite 5G

ಇದು MediaTek Dimensity 6300 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಹೆಚ್ಚುವರಿಯಾಗಿ ಫೋನ್ 6GB ವರ್ಚುವಲ್ RAM ನೊಂದಿಗೆ ಬರುತ್ತದೆ. iQoo Z9 Lite 5G ಆಂಡ್ರಾಯ್ಡ್ 14 ಆಧಾರಿತ ಫನ್‌ಟಚ್ ಓಎಸ್ 14 ಅನ್ನು ರನ್ ಮಾಡುತ್ತದೆ. ಇದು ಎರಡು ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು ಮೂರು ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ಪಡೆಯುತ್ತದೆ. ಸ್ಮಾರ್ಟ್‌ಫೋನ್ 15W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಸಹ ಹೊಂದಿದೆ. ಇದಲ್ಲದೆ ಇದು IP64 ಪ್ರಮಾಣೀಕರಣ, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.

Also Read: TRAI New Rules: ನೀವು ರಿಚಾರ್ಜ್ ಮಾಡದಿದ್ದರೆ ಎಷ್ಟು ದಿನ ಸಿಮ್ ಆಕ್ಟಿವ್ ಆಗಿರುತ್ತೆ ನಿಮಗೊತ್ತಾ?

iQOO Z9 Lite 5G ಆಫರ್ ಬೆಲೆ ಮತ್ತು ಲಭ್ಯತೆ

iQOO Z9 Lite 5G ಸ್ಮಾರ್ಟ್ಫೋನ್‌ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹10,499 ರೂಗಳಿಗೆ ಮತ್ತು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹11,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು HDFC Bank, ICICI Bank ಮತ್ತು Federal Bank ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 9,499 ರೂಗಳಿಗೆ ಈ ಸ್ಮಾರ್ಟ್ಫೋನ್‌ ಖರೀದಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo