iQOO Z10 Lite 5G ಸ್ಮಾರ್ಟ್ಫೋನ್ ಬರೋಬ್ಬರಿ 6000mAh ಬ್ಯಾಟರಿಯೊಂದಿಗೆ ಈ ದಿನ ಬಿಡುಗಡೆ! ಬೆಲೆ ಎಷ್ಟಿರಬಹುದು?
ಮುಂಬರಲಿರುವ iQOO Z10 Lite 5G ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
iQOO Z10 Lite 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ ಬರುವುದಾಗಿ ಕಂಫಾರ್ಮ್ ಮಾಡಿದೆ.
iQOO Z10 Lite 5G ಆರಂಭಿಕ 6GB RAM ಮತ್ತು ಸ್ಟೋರೇಜ್ ಸುಮಾರು 10,000 ರೂಗಳಿಗೆ ಬರುವ ನಿರೀಕ್ಷೆ.
ಐಕ್ಯೂ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ iQOO Z10 Lite 5G ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈಗಾಗಲೇ ಈ iQOO Z10 Lite 5G ಸ್ಮಾರ್ಟ್ಫೋನ್ ಬಗ್ಗೆ ಐಕ್ಯೂ ಇಂಡಿಯಾದ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ಇದರ ಬ್ಯಾಟರಿಯನ್ನು 6000mAh ಜೊತೆಗೆ ಬರುವುದಾಗಿ ಕಂಫಾರ್ಮ್ ಮಾಡಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಬಜೆಟ್ ವಿಭಾಗದಲ್ಲಿ ಬರಲಿದ್ದು ಈಗಾಗಲೇ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇದರ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಹೆಚ್ಚಾಗಿದ್ದು ಇಂಟ್ರೆಸ್ಟಿಂಗ್ ಫೀಚರ್ ಬೆಲೆಯನ್ನು ತಿಳಿಯಲು ಜನ ಹೆಚ್ಚು ಉತ್ಸುಕರಾಗಿದ್ದರೆ. ಯಾಕೆಂದರೆ iQOO Z10 Lite 5G ಆರಂಭಿಕ 6GB RAM ಮತ್ತು ಸ್ಟೋರೇಜ್ ಸುಮಾರು 10,000 ರೂಗಳಿಗೆ ಬರುವ ನಿರೀಕ್ಷೆಗಳಿವೆ.
SurveyiQOO Z10 Lite 5G ಬಿಡುಗಡೆಯ ದಿನಾಂಕ ಮತ್ತು ಬೆಲೆ:
ಈ ಮುಂಬರಲಿರುವ iQOO Z10 Lite 5G ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆ ಐಕ್ಯೂ ಇಂಡಿಯಾದ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೂ 18ನೇ ಜೂನ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗುವುದಾಗಿ ಕಂಪನಿ ಘೋಷಿಸಿದೆ. ಸ್ಮಾರ್ಟ್ಫೋನ್ iQOO Z10 Lite 5G ಆರಂಭಿಕ 6GB RAM ಮತ್ತು ಸ್ಟೋರೇಜ್ ಸುಮಾರು 10,000 ರೂಗಳಿಗೆ ಬರುವ ನಿರೀಕ್ಷೆಗಳಿವೆ. ಇದರ ಲೈವ್ ಸ್ಟ್ರೀಮ್ ಅನ್ನು ನೀವು iQOO ಅಧಿಕೃತ ಯುಟ್ಯೂಬ್ ಚಾನಲ್ನಲ್ಲಿ ವೀಕ್ಷಿಸಬಹುದು.
Meet the beast that outlasts them all. 🔋
— iQOO India (@IqooInd) June 6, 2025
Introducing the all new #iQOOZ10Lite — the Segment's Biggest Battery 5G Smartphone*, packed with a massive 6000mAh battery that keeps you going through every class, every game, every moment.
This is just the beginning. Get ready to… pic.twitter.com/GBupAlbwtA
ಭಾರತದಲ್ಲಿ iQOO Z10 Lite 5G ಫೀಚರ್ಗಳೇನು?
ಈ ಮುಂಬರಲಿರುವ ಸ್ಮಾರ್ಟ್ಫೋನ್ ಫೀಚರ್ ಬಗ್ಗೆ ಮಾತನಾಡುವುದಾದರೆ iQOO Z10 Lite 5G ಈಗಾಗಲೇ ದೊಡ್ಡ ಬ್ಯಾಟರಿ ಅಂದ್ರೆ 6000mAh ಬ್ಯಾಟರಿಯೊಂದಿಗೆ ಬರುವುದಾಗಿ ಕಂಫಾರ್ಮ್ ಮಾಡಿದೆ. ಅಲ್ಲದೆ The Hindu ವರದಿಯ ಪ್ರಕಾರ ಸ್ಮಾರ್ಟ್ಫೋನ್ 6.6 ಇಂಚಿನ HD+ ಡಿಸ್ಪ್ಲೇಯೊಂದಿಗೆ 90Hz ರಿಫ್ರೇಶ್ ರೇಟ್ ಜೊತೆಗೆ ಬರಲಿದೆ. ಅಲ್ಲದೆ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಕ್ಯಾಮೆರಾ ಮತ್ತು ಬೋಕೆ ಸೆನ್ಸರ್ ಹೊಂದಲಿದೆ.
ಇದನ್ನೂ ಓದಿ: Jio vs Airtel vs BSNL: ಕಡಿಮೆ ಬೆಲೆಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು 90 ದಿನಗಳಿಗೆ ಯಾರ್ಯಾರ ಪ್ಲಾನ್ ಬೆಸ್ಟ್?
iQOO Z10 Lite 5G ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಕ್ಯಾಮೆರಾ ಹೊಂದಲಿದೆ. ಅಲ್ಲದೆ ಸ್ಮಾರ್ಟ್ಫೋನ್ MediaTek ಪ್ರೊಸೆಸರ್ ಜೊತೆಗೆ ಹೊಸ ಅನ್ದ್ರೋಯಿಡ್ 15 ಅನ್ನು ಹೊಂದಲಿದೆ. ಅಲ್ಲದೆ ಬ್ಯಾಟರಿ ವಿಭಾಗದಲ್ಲಿ ಈಗಾಗಲೇ ಹೇಳಿರುವಂತೆ 6000mAh ಬ್ಯಾಟರಿಯನ್ನು ಅದೇ 25W ಫಾಸ್ಟ್ ಚಾರ್ಜ್ ಜೊತೆಗೆ ಬರುವ ನಿರೀಕ್ಷೆಗಳಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile