ಹೊಸ Honor View 20 ಸ್ಮಾರ್ಟ್ಫೋನ್ 48 ಮೆಗಾಪಿಕ್ಸೆಲ್ ಕ್ಯಾಮರಾ ಮತ್ತು ಇನ್ ಸ್ಕ್ರೀನ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ.

ಹೊಸ Honor View 20 ಸ್ಮಾರ್ಟ್ಫೋನ್ 48 ಮೆಗಾಪಿಕ್ಸೆಲ್ ಕ್ಯಾಮರಾ ಮತ್ತು ಇನ್ ಸ್ಕ್ರೀನ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರಲಿದೆ.
HIGHLIGHTS

ಇನ್ ಸ್ಕ್ರೀನ್ ಸೆಲ್ಫಿ ಕ್ಯಾಮೆರಾದ ತಂತ್ರಜ್ಞಾನದೊಂದಿಗೆ ಹೊರ ಬರುವ ವಿಶ್ವದ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಇದಾಗಿರುತ್ತದೆ.

ಚೀನೀ ಸ್ಮಾರ್ಟ್ಫೋನ್ ತಯಾರಕ ಹುವಾವೇ ಉಪ ಬ್ರಾಂಡ್ Honor ಈಗ 48MP ಮೆಗಾಪಿಕ್ಸೆಲ್ ಕ್ಯಾಮರಾ ಸ್ಮಾರ್ಟ್ಫೋನ್ Honor View 20 ಮುಂದಿನ ವರ್ಷ ಅಂದ್ರೆ 2019 ರಂದು ಪ್ರಾರಂಭಿಸಲು ಸಿದ್ಧವಾಗಿದೆ. ಈ ಮಾಹಿತಿಯನ್ನು ಹಾನರ್ನ ಈ ಫೋನ್ನಲ್ಲಿ ತೋರಿಸಲಾಗಿದೆ. ಈ ಫೋನ್ನಲ್ಲಿ ನೀವು ಸಂಪೂರ್ಣ ವೀಕ್ಷಣೆ ಪ್ರದರ್ಶನದ ಅನುಭವವನ್ನು (full view display experience) ಪಡೆಯುತ್ತೀರಿ. ಸೆಲ್ಫಿ ಕ್ಯಾಮರಾ ಫೋನ್ನ ಡಿಸ್ಪ್ಲೇಯದಲ್ಲಿ ಸರಿಹೊಂದುತ್ತದೆ. 

ಇನ್ ಸ್ಕ್ರೀನ್ ಸೆಲ್ಫಿ ಕ್ಯಾಮೆರಾದ  ತಂತ್ರಜ್ಞಾನದೊಂದಿಗೆ ಹೊರ ಬರುವ ಮೊಟ್ಟ ಮೊದಲ ಸ್ಮಾರ್ಟ್ಫೋನ್ Honor View 20 ಆಗಿರುತ್ತದೆ. ನಿಮಗೆ ತಿಳಿಯದಿದ್ದರೆ ಹಾನರ್  ಚೀನಾದ ಮೊದಲ ಸ್ಮಾರ್ಟ್ಫೋನ್ ಬ್ರಾಂಡ್ ಎಂದು ತಿಳಿಸೋತ್ತೇವೆ. ಈ ಕಂಪೆನಿಯ ಪ್ರಾಡಕ್ಟ್ ಜನರಲ್ ಮ್ಯಾನೇಜರ್ ಕ್ಸಿಯಾಂಗ್ ಪ್ರಕಾರ ಹೊಸ ಬ್ರಾಂಡ್ ಹೊರತಾಗಿಯೂ ಕಂಪನಿಯು ಸಾಗರೋತ್ತರ ಮಾರುಕಟ್ಟೆಯಲ್ಲಿ 150% ಪ್ರತಿಶತದಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

https://www.huaweicentral.com/wp-content/uploads/2018/12/Honor-View-20-Hole-Cutout-7-1280x720.jpg 

ಇದು ವಿಶ್ವದ ಮೊದಲ ಸ್ಕ್ರೀನ್ ಕ್ಯಾಮರಾ ವಿನ್ಯಾಸವಾಗಿದೆ. ಈ ನಾವೀನ್ಯತೆಯ ಸಹಾಯದಿಂದ ಪ್ರದರ್ಶನದ ಸ್ಕ್ರೀನ್-ಟು-ಬಾಡಿ ಅನುಪಾತವು 100% ಪ್ರತಿಶತದವರೆಗೆ ಇರುತ್ತದೆ. ಈ ರೀತಿಯಲ್ಲಿ ಬಳಕೆದಾರರು ಈ ಫೋನ್ನಲ್ಲಿ ನೀವು ಸಂಪೂರ್ಣ ವೀಕ್ಷಣೆ ಪ್ರದರ್ಶನದ ಅನುಭವವನ್ನು (full view display experience) ಪಡೆಯುತ್ತೀರಿ.ಈ ಫೋನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಕಂಪ್ಯೂಟಿಂಗ್ ಪವರ್ ಅನ್ನು ಬಳಸಲಾಗಿದೆ. 

ಇದಲ್ಲದೆ ಇದು ಹುವಾವೇ ಅವರ ಇತ್ತೀಚಿನ ಕಿರಿನ್ 980 ಚಿಪ್ಸೆಟ್ ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ನ ಸಹಾಯದಿಂದ ಇಮೇಜ್ ಮಲ್ಟಿ ಫ್ರೇಮ್ ಸಂಸ್ಕರಣೆಯಾಗಲಿದೆ. ಇದು ಬಳಕೆದಾರರಿಗೆ ಹೈ ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಎಐ ಹೈ ಡೆಫಿನಿಷನ್ (HD) ಇಮೇಜ್ ಅನ್ನು ತಲುಪಿಸಲು ಸಹಾಯ ಮಾಡುತ್ತದೆ. 

48MP ಕ್ಯಾಮರಾದಲ್ಲಿ ಡ್ಯೂಯಲ್-ಟೋನ್ LED ಫ್ಲ್ಯಾಷ್ ಅನ್ನು ನೀಡಬಹುದು. ಇದಲ್ಲದೆ ವಾಲ್ಯೂಮ್ ರಾಕರ್ಗಳನ್ನು ಫೋನ್ನ ಮುಂದೆ ಬಳಸಬಹುದಾಗಿದೆ. ಮುಂದಿನ ವರ್ಷದ ಜನವರಿಯಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಬಹುದು. ದಕ್ಷಿಣ ಕೊರಿಯಾದ ಸ್ಮಾರ್ಟ್ಫೋನ್ ತಯಾರಕ ಸೋನಿ ಕಂಪನಿ ಜೊತೆಗೆ 48MP ಕ್ಯಾಮರಾದಲ್ಲಿ ಸ್ಮಾರ್ಟ್ಫೋನ್ ಕೂಡ ಸ್ಮಾರ್ಟ್ಫೋನ್ ಪ್ರಾರಂಭಿಸಬಹುದು.

 

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo