ಭಾರತದಲ್ಲಿ 10,000 ರೂಗಳ ಅಡಿಯಲ್ಲಿ ಲಭ್ಯವಿರುವ ಅತ್ಯುತ್ತಮ ಮೊಬೈಲ್ ಫೋನ್‌ಗಳು

ಭಾರತದಲ್ಲಿ 10,000 ರೂಗಳ ಅಡಿಯಲ್ಲಿ ಲಭ್ಯವಿರುವ ಅತ್ಯುತ್ತಮ ಮೊಬೈಲ್ ಫೋನ್‌ಗಳು
HIGHLIGHTS

ಭಾರತದಲ್ಲಿ ಈಗ ಸದ್ಯಕ್ಕೆ ಕೇವಲ 10,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳು

ಈ ಲೇಖನದಲ್ಲಿ ನಿಮಗೆ ಭಾರತದಲ್ಲಿ ಈಗ ಸದ್ಯಕ್ಕೆ ಕೇವಲ 10,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಬಗ್ಗೆ ತಿಳಿಸಲಿದ್ದೇನೆ. ಈ ಪಟ್ಟಿಯಲ್ಲಿನ ಫೋನ್ಗಳನ್ನು ನಮ್ಮ ಡಿಜಿಟ್ ಟೆಸ್ಟ್ ಲ್ಯಾಬ್ ಮೂಲಕ ಪ್ರತ್ಯೇಕವಾಗಿ ಪರೀಕ್ಷಿಸಿ ಪಟ್ಟಿ ಮಾಡಲಾಗಿದೆ. ಡಿಜಿಟ್ ಫೋನ್ಗಳನ್ನು ಹೇಗೆ ಟೆಸ್ಟ್ ಮಾಡುತ್ತದೆಂದು ತಿಳಿಯಲು ಅದರ ಲಿಂಕ್ ಕೆಳಗೆ ನೀಡಿದ್ದೇನೆ ಅಲ್ಲಿಂದ ನೋಡಬವುದು. 

ಇದರ ಐದನೇ ಸ್ಥಾನದಲ್ಲಿದೆ Xiaomi Redmi 8A Dual, ಈ Redmi 8A Dual ಸ್ಮಾರ್ಟ್ಫೋನ್ ಈ ವಿಭಾಗದಲ್ಲಿ ಅತಿ ಹೆಚ್ಚಾಗಿ ಬೇಡಿಕೆಯಲ್ಲಿವೆ. ಇದರಲ್ಲಿ 5000mAh ಬ್ಯಾಟರಿ ಹೊಂದಿದ್ದು Xiaomi ಕಂಪನಿ 27 ದಿನಗಳ ಸ್ಟಾಂಡ್ ಬೈ ಟೈಮ್ ನೀಡುವುದಾಗಿ ಹೇಳಿಕೆ ನೀಡಿದೆ. ಈ ಫೋನ್ ಡುಯಲ್ ಕ್ಯಾಮೆರಾದೊಂದಿಗೆ Snapdragon 439 ಪ್ರೊಸೆಸರ್ ಜೊತೆ 6.22 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಒಟ್ಟಿಗೆ ಎರಡು 4G ಸಿಮ್ಗಳನ್ನು ಬಳಸಬವುದು.

Xiaomi Redmi 8A Dual

ಇದರ ನಾಲ್ಕನೇ ಸ್ಥಾನದಲ್ಲಿದೆ Samsung Galaxy M30. ಈ Galaxy M30 ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 15W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ. ಹಲವಾರು ರೀತಿಯ ಫೀಚರ್ಗಳನ್ನು ಹೊಂದಿದ್ದು Flagship ರೇಂಜಿನ ವಿಭಾಗದಲ್ಲಿ ಸ್ಯಾಮ್ಸಂಗ್ ಈ ಸ್ಮಾರ್ಟ್ಫೋನನ್ನು ಈ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದೊಂದು ಡಿಸೆಂಟ್ ಗೇಮಿಂಗ್ ಫೋನ್ ಆಗಿದ್ದು ಇದರಲ್ಲಿ Exynos 9611 ಚಿಪ್ ಹೊಂದಿದೆ. ಒಟ್ಟಾರೆಯಾಗಿ ನಿಮಗೊಂದು ಉತ್ತಮವಾದ ಧೀರ್ಘಕಾಲದ ಬ್ಯಾಟರಿ ಲೈಫ್ ಜೊತೆಗೆ 10,000 ರೂಗಳೊಳಗಿನ ಫೋನ್ ಬೇಕಿದ್ದರೆ ಇದು ನಿಮಗಾಗಿದೆ.

Samsung Galaxy M30

ಇದರ ಮೂರನೇ ಸ್ಥಾನದಲ್ಲಿದೆ Vivo U20, ಈ ಹೊಸ ಸ್ಮಾರ್ಟ್ಫೋನ್ 6.53 ಇಂಚಿನ IPS LCD ಪ್ಯಾನಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಇದರ ವೈಡ್-ವೈನ್ L1 ಸರ್ಟಿಫೈಡ್ ಹೊಂದಿದ್ದು HD ಕಂಟೆಂಟ್ ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ. ಈ ಫೋನ್ Snapdragon 675 ಪ್ರೊಸೆಸರ್ ಜೊತೆಗೆ ನಡೆಯುತ್ತದೆ. ಈ ಬಜೆಟ್ ಒಳಗೆ ಇದೊಂದು ಅದ್ದೂರಿಯ ಡೀಲ್ ಎನ್ನುವುದರಲ್ಲಿ ಬೇರೆ ಮಾತಿಲ್ಲ. ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 16MP ಪ್ರೈಮರಿ 8MP ಅಲ್ಟ್ರಾ ವೈಡ್ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿದೆ. ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 18w ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

ಇದರ ಎರಡನೇ ಸ್ಥಾನದಲ್ಲಿದೆ Realme 5s. ಈ Realme 5s ಸ್ಮಾರ್ಟ್ಫೋನ್ 6.5 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು ಕ್ವಾಡ್ ಅಂದ್ರೆ 48MP + 8MP + 2MP + 2MP ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಈ ಸ್ಮಾರ್ಟ್ಫೋನ್ Snapdragon 665 ಪ್ರೊಸೆಸರ್ ಜೊತೆಗೆ ನಡೆಯುತ್ತದೆ. ಇದು 3GB ಮತ್ತು  4GB RAM ಮತ್ತು 64GB ಸ್ಟೋರೇಜ್ ವರೆಗೆ ಲಭ್ಯವಿದೆ. ಇದು ಕಲರ್ OS ಆಂಡ್ರಾಯ್ಡ್ ಪೈ ಆಧಾರಿತ ನಡೆಯುತ್ತದೆ. ಫ್ರಂಟ್ 16MP ಸೆಲ್ಫಿ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಅದ್ರಲ್ಲಿ 5000mAh ಬ್ಯಾಟರಿಯನ್ನು ಹೊಂದಿದೆ.

  

ಇದರ ಮೊದಲನೇ ಸ್ಥಾನದಲ್ಲಿದೆ Xiaomi Redmi Note 8. ಈ Redmi Note 8 ಭಾರತದಲ್ಲಿ ಈಗ ಸದ್ಯಕ್ಕೆ ಕೇವಲ 10,000 ರೂಗಳೊಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಒಂದಾಗಿದೆ. ಏಕೆಂದರೆ ಇದರಲ್ಲಿ ಕ್ವಾಡ್ 48MP ಕ್ಯಾಮೆರಾದೊಂದಿಗೆ ಬರುತ್ತದೆ. ಅಂದ್ರೆ 48MP ಪ್ರೈಮರಿ, 8MP ಅಲ್ಟ್ರಾ ವೈಡ್ ಲೆನ್ಸ್, 2MP ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಈ ಫೋನಲ್ಲಿ Snapdragon 665 ಪ್ರೊಸೆಸರ್ ಜೊತೆಗೆ ನಡೆಯುತ್ತದೆ. ಇದು 6.3 ಇಂಚಿನ FHD+ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರಲ್ಲಿ 4000mAh ಬ್ಯಾಟರಿಯನ್ನು 18w ಫಾಸ್ಟ್ ಚಾರ್ಜರ್ ಸಪೋರ್ಟ್ ಮಾಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo