Snapdragon 8 Elite ಚಿಪ್‌ನೊಂದಿಗೆ Asus Zenfone 12 Ultra ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

HIGHLIGHTS

Asus Zenfone 12 Ultra ಅನ್ನು ಸ್ಮಾರ್ಟ್ಫೋನ್ 12GB RAM ಮತ್ತು 5500 mAh ಬ್ಯಾಟರಿಯೊಂದಿಗೆ ಬರುತ್ತದೆ.

Asus Zenfone 12 Ultra ಅನ್ನು ಸ್ಮಾರ್ಟ್ಫೋನ್ ಅನ್ನು ಜಾಗತಿಕವಾಗಿ ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

32MP ಸೇಲ್ಫಿ ಕ್ಯಾಮೆರಾ, LTPO AMOLED ಡಿಸ್ಪ್ಲೇ ಮತ್ತು Snapdragon 8 Elite ಚಿಪ್‌ನೊಂದಿಗೆ ಪರಿಚಯಿಸಲಾಗಿದೆ.

Snapdragon 8 Elite ಚಿಪ್‌ನೊಂದಿಗೆ Asus Zenfone 12 Ultra ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

Asus Zenfone 12 Ultra Launched: ಅಸುಸ್ ಕಂಪನಿ ಇತ್ತೀಚೆಗೆ ತನ್ನ ಲೇಟೆಸ್ಟ್ Asus Zenfone 12 Ultra ಅನ್ನು ಸ್ಮಾರ್ಟ್ಫೋನ್ ಅನ್ನು ಜಾಗತಿಕವಾಗಿ ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಹೊಸ Asus Zenfone 12 Ultra ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ 32MP ಸೇಲ್ಫಿ ಕ್ಯಾಮೆರಾ, LTPO AMOLED ಡಿಸ್ಪ್ಲೇ, 12GB RAM ಮತ್ತು Snapdragon 8 Elite ಚಿಪ್‌ನೊಂದಿಗೆ ಬರುತ್ತದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್ಫೋನ್ ಬೆಲೆಯೊಂದಿಗೆ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಪರಿಶೀಲಿಸಬಹುದು.

Digit.in Survey
✅ Thank you for completing the survey!

Asus Zenfone 12 Ultra Launch Price

ಕಂಪನಿ ROG Phone 9 ನಂತರ ಈಗ ನೇರವಾಗಿ ಈ ಹೊಸ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದ್ದು ಇಂದು ಜಾಗತಿಕವಾಗಿ ಬಿಡುಗಡೆಯಾಗಿರುವ Asus Zenfone 12 Ultra ಸ್ಮಾರ್ಟ್ಫೋನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೋಡುವುದಾದರೆ ಫೋನ್ ಪ್ರಸ್ತುತ ಭಾರತದಲ್ಲಿ ಇನ್ನೂ ಯಾವುದೇ ಮಾಹಿತಿಯನ್ನು ಪ್ರಕಟಿಸಲಾಗಿದ್ದು ಇದರ ಜಾಗತಿಕ ರೂಪಾಂತರದ ಬೆಲೆ ಮತ್ತು ಲಭ್ಯತೆಯ ಮಾಹಿತಿ ಇಲ್ಲಿದೆ.

ಈ ಸ್ಮಾರ್ಟ್ಫೋನ್ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ತೈವಾನ್‌ನಲ್ಲಿ TN29,990 (ಸುಮಾರು ರೂ. 80,000) ಮತ್ತೊಂದು ಇದರ 16GB RAM ಮತ್ತು 512GB ಸ್ಟೋರೇಜ್ ತೈವಾನ್‌ನಲ್ಲಿ TN31,990 (ಸುಮಾರು ರೂ. 85,300) ಆಗಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಎಬೊನಿ ಬ್ಲಾಕ್, ಸಕುರಾ ವೈಟ್ ಮತ್ತು ಸೇಜ್ ಗ್ರೀನ್ ಎಂಬ 3 ಬಣ್ಣಗಳಲ್ಲಿ ಪರಿಚಯಿಸಲಾಗಿದೆ.

Asus Zenfone 12 Ultra ಫೀಚರ್ ಮತ್ತು ವಿಶೇಷಣಗಳೇನು?

Asus Zenfone 12 Ultra ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) ಸ್ಯಾಮ್‌ಸಂಗ್ E6 AMOLED LTPO ಡಿಸ್ಪ್ಲೇಯನ್ನು 120Hz ವರೆಗಿನ ರಿಫ್ರೆಶ್ ದರದೊಂದಿಗೆ ಹೊಂದಿದೆ. ಈ ಡಿಸ್ಪ್ಲೇ ಗೇಮಿಂಗ್‌ಗಾಗಿ 144Hz ವರೆಗೆ ರಿಫ್ರೆಶ್ ದರ ಮತ್ತು 2,500nits ಗರಿಷ್ಠ ಹೊಳಪನ್ನು ನೀಡುತ್ತದೆ. ಈ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

Asus Zenfone 12 Ultra Launched
Asus Zenfone 12 Ultra Launched

Asus Zenfone 12 Ultra ಸ್ಮಾರ್ಟ್ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಗಿಂಬಲ್ OIS ಜೊತೆಗೆ 50MP ಮೆಗಾಪಿಕ್ಸೆಲ್ ಸೋನಿ ಲಿಟಿಯಾ 700 1/1.56 ಇಂಚಿನ ಸೆನ್ಸರ್ ಮತ್ತು 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 32MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ 13MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ ಇದು 32-ಮೆಗಾಪಿಕ್ಸೆಲ್ RGBW ಕ್ಯಾಮೆರಾವನ್ನು ಹೊಂದಿದೆ.

Also Read: 50MP IMX882 ಕ್ಯಾಮೆರಾ ಮತ್ತು 5500mAh ಬ್ಯಾಟರಿಯ Vivo T3 Pro 5G ಮೇಲೆ 4000 ರೂಗಳ ಇಳಿಕೆ!

Asus Zenfone 12 Ultra ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಅಡಿಯಲ್ಲಿ Snapdragon 8 Elite ಚಿಪ್‌ನೊಂದಿಗೆ 16GB ವರೆಗೆ LPDDR5X RAM ಮತ್ತು ಗರಿಷ್ಠ 512GB UFS4.0 ಸ್ಟೋರೇಜ್ ಹೊಂದಿದೆ. ಕೊನೆಯದಾಗಿ ಈ ಫೋನ್ 5500mAh ಬ್ಯಾಟರಿಯನ್ನು ಹೊಂದಿದ್ದು ಅದು 65W ವೈರ್ಡ್ ಚಾರ್ಜಿಂಗ್ ಮತ್ತು 15W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo