POCO M3 ಸ್ಮಾರ್ಟ್ಫೋನ್ 6000 mAh ಬ್ಯಾಟರಿ ಮತ್ತು 6GB RAM ಫೋನ್ ಅನ್ನು ಅತಿ ಕಡಿಮೆ ಬೆಲೆಗಳಲ್ಲಿ ಪಡೆಯುವ ಅವಕಾಶ ಇಲ್ಲಿದೆ

POCO M3 ಸ್ಮಾರ್ಟ್ಫೋನ್ 6000 mAh ಬ್ಯಾಟರಿ ಮತ್ತು 6GB RAM ಫೋನ್ ಅನ್ನು ಅತಿ ಕಡಿಮೆ ಬೆಲೆಗಳಲ್ಲಿ ಪಡೆಯುವ ಅವಕಾಶ ಇಲ್ಲಿದೆ
HIGHLIGHTS

POCO M3 ಸ್ಮಾರ್ಟ್ಫೋನ್ ಬೆಲೆ 6GB RAM + 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂಗಳಾಗಿವೆ.

POCO M3 ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಪರಿಣಾಮಕಾರಿಯಾದ ಡಿಸ್ಕೌಂಟ್ ಪಡೆಯಬವುದು.

ಇದು ಎಫ್ / 1.79 ಲೆನ್ಸ್ ಹೊಂದಿರುವ 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಒಳಗೊಂಡಿದೆ.

ಭಾರತದಲ್ಲಿ POCO M2 ನ ಉತ್ತರಾಧಿಕಾರಿಯಾಗಿ ಕಳೆದ ವಾರ ದೇಶದಲ್ಲಿ ಇತ್ತೀಚಿನ ಪೊಕೊ ಫೋನ್ ಅನ್ನು ಬಿಡುಗಡೆ ಮಾಡಲಾಯಿತು. POCO M3 ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು ವಾಟರ್‌ಡ್ರಾಪ್ ಶೈಲಿಯ ಡಿಸ್ಪ್ಲೇ ನಾಚ್‌ನೊಂದಿಗೆ ಬರುತ್ತದೆ. ಇದು ಚರ್ಮದಂತಹ ಫಿನಿಶ್ ಅನ್ನು ಸಹ ಹೊಂದಿದ್ದು ಮೂರು ವಿಭಿನ್ನ ಬಣ್ಣಗಳಲ್ಲಿ ಬರುತ್ತದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 SoC ನಿಂದ ನಿಯಂತ್ರಿಸಲ್ಪಡುತ್ತದೆ. ಮತ್ತು 128GB ವರೆಗೆ ಆನ್‌ಬೋರ್ಡ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಫೋನ್ Realme i7 ಮತ್ತು Samsung Galaxy M11 ಗಳ ವಿರುದ್ಧ ಸ್ಪರ್ಧಿಸುತ್ತದೆ.

POCO M3: ಬೆಲೆ ಮತ್ತು ಆಫರ್ 

ಭಾರತದಲ್ಲಿ POCO M3 ಸ್ಮಾರ್ಟ್ಫೋನ್ ಬೆಲೆ 6GB RAM + 64GB ಸ್ಟೋರೇಜ್ ರೂಪಾಂತರಕ್ಕೆ 10,999 ರೂಗಳಾಗಿದ್ದು ಇದರ 6GB RAM + 128GB ಸ್ಟೋರೇಜ್ ರೂಪಾಂತರಕ್ಕೆ 11,999 ರೂಗಳಾಗಿವೆ. ಈ ಎರಡೂ ಮಾದರಿಗಳು ನೀಲಿ, ಹಳದಿ ಮತ್ತು ಕಪ್ಪು ಬ್ಲ್ಯಾಕ್ ಬಣ್ಣಗಳಲ್ಲಿ ಬರುತ್ತವೆ. POCO M3 ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಮಾರಾಟದ ಪ್ರಸ್ತಾಪದ ಪ್ರಕಾರ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ಬಳಸಿ POCO M3 ಸ್ಮಾರ್ಟ್ಫೋನ್ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ ರಿಯಾಯಿತಿಗಳನ್ನು ಪಡೆಯಬವುದು. ಈ ಮೂಲಕ ಈ ಅದ್ದೂರಿಯ POCO M3 ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಪರಿಣಾಮಕಾರಿಯಾದ ಡಿಸ್ಕೌಂಟ್ ಪಡೆಯಬವುದು. 

POCO M3: ವಿಶೇಷಣಗಳು ಮತ್ತು ಫೀಚರ್ 

ಈ ಸ್ಮಾರ್ಟ್ಫೋನ್ ಡ್ಯುಯಲ್-ಸಿಮ್ (ನ್ಯಾನೊ) POCO M3 ಆಂಡ್ರಾಯ್ಡ್ 10 ನಲ್ಲಿ ಪೊಕೊಗಾಗಿ MIUI12 ಜೊತೆಗೆ ಚಲಿಸುತ್ತದೆ. ಈ ಫೋನ್ 6.53 ಇಂಚಿನ FHD+ (1080×2340 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿದೆ. ಇದರೊಳಗೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 SoC ಜೊತೆಗೆ 6GB RAM ಇದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನೊಂದಿಗೆ ಫೋನ್ ಬರುತ್ತದೆ. ಇದು ಎಫ್ / 1.79 ಲೆನ್ಸ್ ಹೊಂದಿರುವ 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್  ಒಳಗೊಂಡಿದೆ. ಕ್ಯಾಮೆರಾ ಸೆಟಪ್ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2MP ಮೆಗಾಪಿಕ್ಸೆಲ್ ಆಳ ಸಂವೇದಕವನ್ನು ಸಹ ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳನ್ನು ಸೆರೆಹಿಡಿಯುವ ಭಾಗವಾಗಿ POCO M3 ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವನ್ನು ಹೊಂದಿದೆ. ಇದನ್ನು ಎಫ್ / 2.05 ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ.

ಈ POCO M3 ಸ್ಮಾರ್ಟ್ಫೋನ್ 128GB ವರೆಗೆ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ (512GB ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಫೋನ್ 4 ಜಿ ವೋಲ್ಟಿಇ ವೈ-ಫೈ ಬ್ಲೂಟೂತ್ ಯುಎಸ್‌ಬಿ ಟೈಪ್-ಸಿ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿರುವ ಹಲವಾರು ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಇದು ಇನ್ಫ್ರಾರೆಡ್ (ಐಆರ್) ಬ್ಲಾಸ್ಟರ್ ಅನ್ನು ಸಹ ಒಳಗೊಂಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo