7,000mAh ಬ್ಯಾಟರಿಯೊಂದಿಗೆ ಅಬ್ಬರಿಸಲು ಶೀಘ್ರದಲ್ಲೇ ಬರ್ತಿದೆ Realme C83 5G ಮೊಬೈಲ್!
ಶೀಘ್ರದಲ್ಲೇ ಭಾರತದಲ್ಲಿ ರಿಯಲ್‌ಮಿ C83 5G ಮೊಬೈಲ್ ಲಾಂಚ್
7000mAh ಟೈಟಾನ್ ಬ್ಯಾಟರಿ ರಿಯಲ್‌ಮಿ C83 5G ಫೋನಿನ ಹೈಲೈಟ್ ಆಗಿದೆ
ಈ ಮೊಬೈಲ್ ಬ್ಲೂಮಿಂಗ್ ಪರ್ಪಲ್ ಮತ್ತು ಸ್ಪ್ರೌಟಿಂಗ್ ಗ್ರೀನ್ ಕಲರ್ ಆಯ್ಕೆ ಪಡೆದಿರಲಿದೆ
ರಿಯಲ್‌ಮಿ ಮೊಬೈಲ್ ಸಂಸ್ಥೆಯು ಶೀಘ್ರದಲ್ಲೇ ಭಾರತದಲ್ಲಿ ಮತ್ತೊಂದು ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ತನ್ನ C ಸರಣಿಯಲ್ಲಿ ಹೊಸದಾಗಿ Realme C83 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಮಾರ್ಚ್ ಮೊದಲ ವಾರವೇ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ. ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಪೇಜ್ ಕೂಡಾ ತೆರೆದಿದೆ. ಲೀಕ್ ಮಾಹಿತಿ ಪ್ರಕಾರ ಈ ಫೋನ್ ಬರೋಬ್ಬರಿ 7,000mAh ಟೈಟಾನ್ ಬ್ಯಾಟರಿ ಸಪೋರ್ಟ್ ಪಡೆದಿರಲಿದೆ. ಹಾಗೆಯೇ ಈ ಫೋನ್ ಎರಡು ಆಕರ್ಷಕ ಕಲರ್ ಆಯ್ಕೆ ಜೊತೆಗೆ 144Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗಾದರೆ ಮುಂಬರುವ ರಿಯಲ್‌ಮಿ C83 5G ಮೊಬೈಲ್‌ನ ನಿರೀಕ್ಷಿತ ಬೆಲೆ, ಫೀಚರ್ಸ್ ಹಾಗೂ ಇತರೆ ಮಾಹಿತಿ ಬಗ್ಗೆ ಮುಂದೆ ತಿಳಿಯೋಣ.
SurveyAlso Read : Samsung Galaxy S26 Ultra, Galaxy S26 Plus, Galaxy S26 ಫೋನ್‌ಗಳ ಬೆಲೆಯ ಮಾಹಿತಿ ಇಲ್ಲಿದೆ
Realme C83 5G ಬಿಡುಗಡೆ ದಿನಾಂಕ ಮತ್ತು ಮಾರಾಟ
Realme ಕಂಪನಿಯು ಬಿಡುಗಡೆ ಮಾಡಲಿರುವ ರಿಯಲ್‌ಮಿ C83 5G ಫೋನ್ ಲೀಕ್ ಫೀಚರ್ಸ್ ಮೂಲಕ ಗಮನ ಸೆಳೆದಿದೆ. ಕಂಪನಿಯು ತನ್ನ ಹೊಸ ರಿಯಲ್‌ಮಿ C83 5G ಮೊಬೈಲ್ ಅನ್ನು ಇದೇ ಮಾರ್ಚ್ 7 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಿದೆ. ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ಈಗಾಗಲೇ ಈ ಮೊಬೈಲ್ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲಿಸ್ಟ್ ಮಾಡಿದೆ. ಹೀಗಾಗಿ ರಿಯಲ್‌ಮಿ C83 5G ಫೋನ್ ರಿಯಲ್‌ಮಿ ವೆಬ್‌ಸೈಟ್ ಜೊತೆಗೆ ಫ್ಲಿಪ್‌ಕಾರ್ಟ್ ತಾಣದ ಮೂಲಕ ಮಾರಾಟ ಮಾಡಲಾಗುವುದು ಪಕ್ಕಾ ಆಗಿದೆ. ಅಂದಹಾಗೆ ಈ ಫೋನಿನ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಅಧಿಕವಾಗಿವೆ. ಇನ್ನು ಈ ಫೋನ್ ಬ್ಲೂಮಿಂಗ್ ಪರ್ಪಲ್ ಮತ್ತು ಸ್ಪ್ರೌಟಿಂಗ್ ಗ್ರೀನ್ ಕಲರ್ ಆಯ್ಕೆ ಪಡೆದಿರಲಿದೆ.

7000mAh ಟೈಟಾನ್ ಬ್ಯಾಟರಿ ಹೈಲೈಟ್
ಮುಂಬರುವ ರಿಯಲ್‌ಮಿ C83 5G ಮೊಬೈಲ್‌ನ ಪ್ರಮುಖ ಹೈಲೈಟ್ ಎಂದರೆ 7000mAh ಟೈಟಾನ್ ಬ್ಯಾಟರಿ ಆಗಿದೆ. ಈ ಬ್ಯಾಟರಿಯು ಸುಮಾರು 890.5 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಬ್ಯಾಕ್‌ಅಪ್ ಒದಗಿಸಲಿದೆ ಎನ್ನಲಾಗಿದೆ. ಹಾಗೆಯೇ 27.7 ಗಂಟೆಗಳವರೆಗೆ ವೀಡಿಯೊ ಸ್ಟ್ರೀಮಿಂಗ್, 159.8 ಗಂಟೆಗಳ ವರೆಗೆ ಮ್ಯೂಸಿಕ್ ಪ್ಲೇಬ್ಯಾಕ್, 58.5 ಗಂಟೆಗಳ ವರೆಗೆ ಕರೆ, 15.6 ಗಂಟೆಗಳ ಗೇಮಿಂಗ್ ಬ್ಯಾಕ್‌ಅಪ್ ನೀಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಫೋನ್ ರಿವರ್ಸ್ ವೈರ್ಡ್ ಚಾರ್ಜಿಂಗ್ ಮತ್ತು ಬೈಪಾಸ್ ಚಾರ್ಜಿಂಗ್‌ನಂತಹ ಆಯ್ಕೆಗಳನ್ನು ಸಹ ಪಡೆದಿರಲಿದೆ. ಇದರೊಂದಿಗೆ IP64 ಧೂಳು ಮತ್ತು ನೀರಿನ ನಿರೋಧಕವಾಗಿದ್ದು, ಒದ್ದೆಯಾದರೂ ಹಾನಿಯಾಗದಂತೆ ತಡೆಯುತ್ತದೆ ಎನ್ನಲಾಗಿದೆ.
ಇನ್ನು ರಿಯಲ್‌ಮಿ C83 5G ಮೊಬೈಲ್ 144Hz ರಿಫ್ರೆಶ್ ದರ ಪ್ರದರ್ಶನವನ್ನು ಸಹ ಹೊಂದಿರುತ್ತದೆ. ಅಲ್ಲದೇ ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ನೂತನ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಪ್ರೊಸೆಸರ್ ಪವರ್‌ನಲ್ಲಿ ರನ್ ಆಗುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ 6GB/8GB RAM ಮತ್ತು 128GB ವರೆಗೆ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿರಲಿದೆ ಜೊತೆಗೆ ಮೈಕ್ರೋ SD ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಬಹುದಾದ ಆಯ್ಕೆ ನೀಡುವ ನಿರೀಕ್ಷೆಯಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile