Samsung Galaxy S26 Ultra, Galaxy S26 Plus, Galaxy S26 ಫೋನ್‌ಗಳ ಬೆಲೆಯ ಮಾಹಿತಿ ಇಲ್ಲಿದೆ

HIGHLIGHTS

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಆರಂಭಿಕ ವೇರಿಯಂಟ್‌ ಬೆಲೆ 87,999 ರೂ.ಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಪ್ಲಸ್‌ ಆರಂಭಿಕ ವೇರಿಯಂಟ್‌ ಬೆಲೆ 1,19,999 ರೂ.ಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ ಆರಂಭಿಕ ವೇರಿಯಂಟ್‌ ಬೆಲೆ 1,39,999 ರೂ.ಗಳು

Samsung Galaxy S26 Ultra, Galaxy S26 Plus, Galaxy S26 ಫೋನ್‌ಗಳ ಬೆಲೆಯ ಮಾಹಿತಿ ಇಲ್ಲಿದೆ

Samsung Galaxy S26 Series Price: ದಕ್ಷಿಣ ಕೊರಿಯಾದ ಟೆಕ್‌ ದೊಡ್ಡಣ್ಣ ಸ್ಯಾಮ್‌ಸಂಗ್‌ ಕಂಪನಿಯ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2026 ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಸರಣಿಯ ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 4 ಸರಣಿಯು ಬಿಡುಗಡೆ ಆಗಿದೆ. ಈ ಗ್ಯಾಲಕ್ಸಿ S26 ಫೋನ್‌ ಸರಣಿಯು Samsung Galaxy S26, Samsung Galaxy S26 Plus ಮತ್ತು Samsung Galaxy S26 Ultra ಮಾಡೆಲ್‌ಗಳನ್ನು ಒಳಗೊಂಡಿದೆ. ಅದೇ ರೀತಿ ಗ್ಯಾಲಕ್ಸಿ ಬಡ್ಸ್‌ 4 ಸರಣಿಯು Galaxy Buds 4 ಮತ್ತು Galaxy Buds 4 Pro ಡಿವೈಸ್‌ಗಳನ್ನು ಹೊಂದಿದೆ. ಅಪ್‌ಗ್ರೇಡ್‌ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಡಿವೈಸ್‌ಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಹಾಗಾದರೆ ಭಾರತದಲ್ಲಿ ಗ್ಯಾಲಕ್ಸಿ S26 ಫೋನ್‌ ಸರಣಿ ಮತ್ತು ಗ್ಯಾಲಕ್ಸಿ ಬಡ್ಸ್‌ 4 ಸರಣಿಯ ಬೆಲೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Digit.in Survey
✅ Thank you for completing the survey!

Also Read : ಭಾರತದಲ್ಲಿ Samsung Galaxy Buds 4 ಮತ್ತು Galaxy Buds 4 Pro ಲಾಂಚ್‌! ಬೆಲೆ ಹಾಗೂ ಫೀಚರ್ಸ್‌

Samsung Galaxy S26 ಸರಣಿಯ ಬೆಲೆ ಮಾಹಿತಿ

Samsung Galaxy S26 Ultra ಸ್ಮಾರ್ಟ್‌ಫೋನ್‌

12GB RAM + 256GB ವೇರಿಯಂಟ್‌ ಬೆಲೆ 1,39,999 ರೂ.ಗಳು

12GB RAM + 512GB ವೇರಿಯಂಟ್‌ ಬೆಲೆ 1,59,999 ರೂ.ಗಳು

16GB RAM + 1TB ವೇರಿಯಂಟ್‌ ಬೆಲೆ 1,89,999 ರೂ.ಗಳು

Samsung Galaxy S26

Samsung Galaxy S26 Plus ಸ್ಮಾರ್ಟ್‌ಫೋನ್‌

12GB RAM + 256GB ವೇರಿಯಂಟ್‌ ಬೆಲೆ 1,19,999 ರೂ.ಗಳು

12GB RAM + 512GB ವೇರಿಯಂಟ್‌ ಬೆಲೆ 1,39,999 ರೂ.ಗಳು

Samsung Galaxy S26 ಸ್ಮಾರ್ಟ್‌ಫೋನ್‌

12GB RAM + 256GB ವೇರಿಯಂಟ್‌ ಬೆಲೆ 87,999 ರೂ.ಗಳು

12GB RAM + 512GB ವೇರಿಯಂಟ್‌ ಬೆಲೆ 1,07,999 ರೂ.ಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿ: ಆಫರ್ ಮತ್ತು ಲಭ್ಯತೆ

ಭಾರತದಲ್ಲಿ ಗ್ಯಾಲಕ್ಸಿ S26 ಸರಣಿಯ ಪ್ರಿ-ಆರ್ಡರ್‌ಗಳು ಫೆಬ್ರವರಿ 25 ರಂದು ಪ್ರಾರಂಭ ಆಗಿದೆ. ಆಸಕ್ತ ಗ್ರಾಹಕರು Samsung ಕಂಪನಿಯ ಅಧಿಕೃತ ವೆಬ್‌ಸೈಟ್‌ ಮತ್ತು ಪಾಲುದಾರ ರಿಟೇಲ್‌ ಸ್ಟೋರ್‌ಗಳ ಮೂಲಕ ಫೋನ್ ಬುಕ್ ಮಾಡಬಹುದು. ಇನ್ನು ಪ್ರಿ-ಆರ್ಡರ್‌ ಮಾಡುವವರು 2,699 ರೂ.ಗಳ ಮೌಲ್ಯದ ಪ್ರಯೋಜನಗಳನ್ನು ಪಡೆಯುತ್ತಾರೆ. ಸ್ಯಾಮ್‌ಸಂಗ್‌ ಕಂಪನಿಯು ಆರಂಭಿಕ ಖರೀದಿದಾರರಿಗೆ ಸ್ಟೋರೇಜ್ ಅಪ್‌ಗ್ರೇಡ್ ಪ್ರಯೋಜನಗಳು ಮತ್ತು ಹೆಚ್ಚುವರಿ ಕೊಡುಗೆಗಳನ್ನು ಸಹ ನೀಡುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಸರಣಿಯು ಕೋಬಾಲ್ಟ್ ವೈಲೆಟ್, ಬ್ಲ್ಯಾಕ್‌, ವೈಟ್‌ ಮತ್ತು ಸ್ಕೈ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಆನ್‌ಲೈನ್ ಖರೀದಿದಾರರು ಪಿಂಕ್ ಗೋಲ್ಡ್ ಮತ್ತು ಸಿಲ್ವರ್ ಶ್ಯಾಡೋ ಸ್ಪೆಷಲ್ ಕಲರ್‌ ಆಯ್ಕೆ ಪಡೆಯಬಹುದು.

Galaxy Buds 4 ಸರಣಿ: ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ Galaxy Buds 4 ಬೆಲೆ 16,999 ರೂ.ಗಳು ಹಾಗೂ Galaxy Buds 4 Pro ಬೆಲೆ 22,999 ರೂ.ಗಳು ಆಗಿದೆ. Galaxy Buds4 ಸರಣಿಯ ಪ್ರಿ-ಆರ್ಡರ್‌ಗಳು ಫೆಬ್ರವರಿ 25 ರಂದು ಪ್ರಾರಂಭ ಆಗಿದೆ. ಹಾಗೆಯೇ ಇದೇ ಮಾರ್ಚ್ 11 ರಿಂದ ಸಾಮಾನ್ಯ ಲಭ್ಯತೆ ಇರುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo