ಭಾರತದಲ್ಲಿ Samsung Galaxy Buds 4 ಮತ್ತು Galaxy Buds 4 Pro ಲಾಂಚ್‌! ಬೆಲೆ ಹಾಗೂ ಫೀಚರ್ಸ್‌

HIGHLIGHTS

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 4 ಸರಣಿಯು ANC ಸೌಲಭ್ಯ ಒಳಗೊಂಡಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ 4 ಪ್ರೊ ಡಿವೈಸ್‌ ಹೆಡ್ ಗೆಸ್ಚರ್ ಕಂಟ್ರೋಲ್‌ ಆಯ್ಕೆ ಪಡೆದಿದೆ

ಗ್ಯಾಲಕ್ಸಿ ಬಡ್ಸ್‌ 4 ಇಯರ್‌ಬಡ್ಸ್ ಸರಣಿಯು ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ ಆಯ್ಕೆಯಲ್ಲಿ ಲಭ್ಯ

ಭಾರತದಲ್ಲಿ Samsung Galaxy Buds 4 ಮತ್ತು Galaxy Buds 4 Pro ಲಾಂಚ್‌! ಬೆಲೆ ಹಾಗೂ ಫೀಚರ್ಸ್‌

Samsung Galaxy Buds 4 Series: ಸ್ಯಾಮ್‌ಸಂಗ್‌ ಕಂಪನಿಯ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2026 ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಸರಣಿಯ ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 4 ಸರಣಿಯು ಬಿಡುಗಡೆ ಆಗಿದೆ. ಈ ಸರಣಿಯು Galaxy Buds 4 ಮತ್ತು Galaxy Buds 4 Pro ಡಿವೈಸ್‌ಗಳನ್ನು ಒಳಗೊಂಡಿದೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸರಣಿಯ ಡಿವೈಸ್‌ಗಳು ANC ಸೌಲಭ್ಯ ಪಡೆದುಕೊಂಡಿವೆ. ಅಲ್ಟ್ರಾ ಸ್ಲಿಕ್ ಡಿಸೈನ್‌ ಪಡೆದಿರುವ ಈ ಎರಡು ಇಯರ್‌ಬಡ್‌ ಡಿವೈಸ್‌ಗಳು ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ ಆಯ್ಕೆಯನ್ನು ಪಡೆದುಕೊಂಡಿವೆ. ಅಲ್ಲದೇ ಗೂಗಲ್ ಜೆಮಿನಿ ಸೇರಿದಂತೆ ಪ್ರಮುಖ AI ಗಳನ್ನು ಹ್ಯಾಂಡ್ಸ್‌ ಫ್ರೀ ಹಾಗೂ ವಾಯ್ಸ್‌ ಕಂಟ್ರೋಲ್‌ ಬಳಕೆ ಮಾಡುವ ಆಯ್ಕೆ ಒಳಗೊಂಡಿವೆ. ಇನ್ನುಳಿದಂತೆ Galaxy Buds 4 ಮತ್ತು Galaxy Buds 4 Pro ಡಿವೈಸ್‌ ಬೆಲೆ, ಫೀಚರ್ಸ್‌ ಮಾಹಿತಿಯನ್ನು ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕರ್ವ್ ಡಿಸ್‌ಪ್ಲೇ ಇರುವ Motorola Edge 60 Pro ಬೆಲೆಯಲ್ಲಿ ಭಾರೀ ಇಳಿಕೆ! 6000mAh ಬ್ಯಾಟರಿ ಸಪೋರ್ಟ್‌

Samsung Galaxy Buds 4 Series ಫೀಚರ್ಸ್‌ ಮಾಹಿತಿ

Galaxy Buds 4 ಮತ್ತು Galaxy Buds 4 Pro ಡಿವೈಸ್‌ಗಳು ಸಾಕಷ್ಟು ಅಪ್‌ಡೇಟ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಈ ಎರಡು ಡಿವೈಸ್‌ಗಳು ಬ್ಲೇಡ್ ವಿನ್ಯಾಸದ ವೈಶಿಷ್ಟ್ಯತೆಯನ್ನು ಪಡೆದಿವೆ. ಇವು ಅಲ್ಟ್ರಾ-ಸ್ಲೀಕ್ ಹಾಗೂ ಅತ್ಯುತ್ತಮ ಫಿಟ್ ವಿನ್ಯಾಸವನ್ನು ಹೊಂದಿದ್ದು ದಿನಪೂರ್ತಿ ಬಳಸುವಾಗ ಹೆಚ್ಚು ಭದ್ರತೆ ಮತ್ತು ಆರಾಮದಾಯಕ ಅನುಭವವನ್ನು ಒದಗಿಸುತ್ತವೆ. ಇದರ ಬ್ಲೇಡ್ ಪ್ರೀಮಿಯಂ ಮೆಟಲ್ ಫಿನಿಶ್ ರಚನೆಯು ಡಿವೈಸ್‌ ಪತ್ತೆಗೆ ಪೂರಕವಾಗಿದೆ. ನೂತನ ಗ್ಯಾಲಕ್ಸಿ ಬಡ್ಸ್ 4 ಸರಣಿಯು 20Hz ನಿಂದ 40,000Hz (40kHz) ಫ್ರಿಕ್ವೇನ್ಸಿ ಹೊಂದಿದ್ದು ಇದು ಹೆಚ್ಚು ಸ್ಪಷ್ಟವಾದ ಧ್ವನಿ ಕೇಳಲು ಪೂರಕವಾಗಿದೆ. ಅಲ್ಲದೇ ಅತ್ಯುತ್ತಮ ಧ್ವನಿಗಾಗಿ deep bass ಮತ್ತು high treble ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.

Samsung Galaxy Buds 4

ಇನ್ನು ಈ ಡಿವೈಸ್‌ಗಳು ದೊಡ್ಡ ಸ್ಪೀಕರ್‌ಗಳನ್ನು ಒಳಗೊಂಡಿರುವ ಜೊತೆಗೆ ಉತ್ತಮ ವಾಯ್ಸ್‌ ಗುಣಮಟ್ಟವನ್ನು ಒದಗಿಸುತ್ತವೆ. ಹಾಗೆಯೇ ಗ್ಯಾಲಕ್ಸಿ ಬಡ್ಸ್ 4 ಪ್ರೊ ಡಿವೈಸ್‌ ವೈಡರ್ ವೂಫರ್ ಅನ್ನು ಪಡೆದುಕೊಂಡಿದೆ. ಇವು 24-ಬಿಟ್/96kHz ಆಡಿಯೊವನ್ನು ಬೆಂಬಲಿಸುವ ವ್ಯವಸ್ಥೆ ಪಡೆದುಕೊಂಡಿವೆ. ಇಯರ್‌ಬಡ್ಸ್‌ನ ಮೈಕ್ರೊಫೋನ್ ಅನ್ನು ಮೆಟಲ್‌ ಫಿನಿಶ್‌ ಮೇಲ್ಭಾಗದಲ್ಲಿ ಇರಿಸಲಾಗಿದ್ದು ಇದು Active Noise Cancellation ಕಾರ್ಯವನ್ನು ಹೆಚ್ಚಿಸಲು ಪೂರಕವಾಗಿದೆ. ಬಡ್ಸ್ 4 ಪ್ರೊ ಡಿವೈಸ್‌ ಹೆಡ್ ಗೆಸ್ಚರ್ ಕಂಟ್ರೋಲ್‌ ಆಯ್ಕೆಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಗೂಗಲ್ ಜೆಮಿನಿ ಸೇರಿದಂತೆ ಪ್ರಮುಖ AI ಗಳನ್ನು ಹ್ಯಾಂಡ್ಸ್‌ ಫ್ರೀ ಹಾಗೂ ವಾಯ್ಸ್‌ ಕಂಟ್ರೋಲ್‌ ಬಳಕೆ ಮಾಡುವ ಆಯ್ಕೆ ಒಳಗೊಂಡಿವೆ. ಗ್ಯಾಲಕ್ಸಿ ವೇರಬಲ್ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡದೇ ಗ್ಯಾಲಕ್ಸಿ ಬಳಕೆದಾರರು ತಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ತಮ್ಮ ಈ ಬಡ್ಸ್‌ ಅನ್ನು ಸುಲಭವಾಗಿ ಕನೆಕ್ಟ್‌ ಮಾಡಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 4 ಸರಣಿ ಲಭ್ಯತೆ

ಭಾರತೀಯ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 4 ಸರಣಿ ಲಗ್ಗೆ ಇಟ್ಟಿದೆ. Galaxy Buds4 ಸರಣಿಯು ಆಯ್ದ ಮಾರುಕಟ್ಟೆಗಳಲ್ಲಿ ಮುಂಗಡ-ಆರ್ಡರ್‌ಗೆ ಇಂದಿನಿಂದ ಲಭ್ಯವಿದೆ. ಹಾಗೆಯೇ ಇದೇ ಮಾರ್ಚ್ 11 ರಿಂದ ಸಾಮಾನ್ಯ ಲಭ್ಯತೆ ಇರುತ್ತದೆ. ಇನ್ನು Galaxy Buds 4 ಮತ್ತು Galaxy Buds 4 Pro ಡಿವೈಸ್‌ಗಳು ಬ್ಲ್ಯಾಕ್‌ ಮತ್ತು ವೈಟ್‌ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಹಾಗೆಯೇ Galaxy Buds 4 Pro ಆನ್‌ಲೈನ್‌ನಲ್ಲಿ ವಿಶೇಷವಾಗಿ ಪಿಂಕ್‌ ಬಣ್ಣದಲ್ಲಿ ಲಭ್ಯವಾಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo