ಬಜೆಟ್ ಬೆಲೆಯ POCO C85 5G ಮೊಬೈಲ್ ಈಗ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ!
ಪೊಕೊ C85 5G ಬೆಲೆಯಲ್ಲಿ ಈಗ ಆಕರ್ಷಕ ಡಿಸ್ಕೌಂಟ್
ಪೊಕೊದ ಈ ಮೊಬೈಲ್ 50MP ಕ್ಯಾಮೆರಾ ರಚನೆ ಪಡೆದುಕೊಂಡಿದೆ
ಪೊಕೊ ಕಂಪನಿಯ ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ
ಗ್ರಾಹಕರು ಬಜೆಟ್ ಫೋನ್ ಖರೀದಿಸುವುದಿರಲಿ ಅಥವಾ ಇಲ್ಲವೇ ದುಬಾರಿ ಸ್ಮಾರ್ಟ್‌ಫೋನ್ ಕೊಳ್ಳುವುದಿರಲಿ ಇ ಕಾಮರ್ಸ್ ವೆಬ್‌ಸೈಟ್‌ಗಳತ್ತ ಒಮ್ಮೆ ಗಮನಿಸುತ್ತಾರೆ. ಹೀಗಾಗಿ ಇ ಕಾಮರ್ಸ್ ವೆಬ್‌ಸೈಟ್‌ಗಳು ಕೂಡಾ ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಡಿಸ್ಕೌಂಟ್ ಘೋಷಿಸುತ್ತವೆ. ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಪೊಕೊ ಕಂಪನಿಯ POCO C85 5G ಸ್ಮಾರ್ಟ್‌ಫೋನ್‌ಗೆ ಬೊಂಬಾಟ್ ರಿಯಾಯಿತಿ ಘೋಷಿಸಿದೆ. ಇದಲ್ಲದೇ ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಪೊಕೊ C85 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ ಹಾಗೂ 6,000mAh ಬ್ಯಾಟರಿ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ 50MP ಕ್ಯಾಮೆರಾ ಸಪೋರ್ಟ್ ಸಹ ಒಳಗೊಂಡಿದೆ. ಹಾಗಾದರೆ ಅಮೆಜಾನ್ ವೆಬ್‌ಸೈಟ್‌ನಲ್ಲಿ ಪೊಕೊ C85 5G ಮೊಬೈಲ್‌ಗೆ ಲಭ್ಯ ಇರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಇಂದು ಭಾರತದಲ್ಲಿ Motorola Edge 70 Pro ಲಾಂಚ್! 6,500mAh ಬ್ಯಾಟರಿ ಸಾಧ್ಯತೆ
POCO C85 5G ಫೋನ್ ಈಗ ಆಫರ್‌ನಲ್ಲಿ ಲಭ್ಯ
ಆಕರ್ಷಕ ಡಿಸೈನ್ ಹೊಂದಿರುವ ಪೊಕೊ C85 5G ಮೊಬೈಲ್ ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿ ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB RAM + 128GB ವೇರಿಯಂಟ್ ಬೆಲೆ 16,999 ರೂ.ಗಳು ಪ್ರೈಸ್‌ಟ್ಯಾಗ್ ಹೊಂದಿದ್ದು, ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 15,790 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಈ ಮೊಬೈಲ್ ಅನ್ನು ಮಿಸ್ಟಿಕ್ ಪರ್ಪಲ್, ಸ್ಪ್ರಿಂಗ್ ಗ್ರೀನ್ ಹಾಗೂ ಪವರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದು.

ಪೊಕೊ C85 5G ಮೊಬೈಲ್ ಫೀಚರ್ಸ್ ಹೀಗಿವೆ
ಪೊಕೊ C85 5G ಮೊಬೈಲ್ 6.9 ಇಂಚಿನ HD+ ಪ್ಯಾನೆಲ್ ಡಿಸ್‌ಪ್ಲೇ ಪಡೆದುಕೊಂಡಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್ ಪಡೆದುಕೊಂಡಿದ್ದು 810 nits ಗರಿಷ್ಠ ಬ್ರೈಟ್ನೆಸ್ ಬೆಂಬಲ ಹೊಂದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 4GB RAM + 128GB, 6GB RAM + 128GB ಹಾಗೂ 8GB RAM + 128GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಈ ಮೊಬೈಲ್ 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದ್ದು ಇದಕ್ಕೆ ಪೂರಕವಾಗಿ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 10W ವೈರ್ಡ್ ರಿವರ್ಸ್ ಚಾರ್ಜಿಂಗ್ ಒಳಗೊಂಡಿದೆ.
ಹಾಗೆಯೇ ಪೊಕೊ C85 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾ 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ ಮತ್ತು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್ 8MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಈ ಮೊಬೈಲ್ IP64 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile