ಕರ್ವ್ ಡಿಸ್‌ಪ್ಲೇ ಇರುವ Motorola Edge 60 Pro ಬೆಲೆಯಲ್ಲಿ ಭಾರೀ ಇಳಿಕೆ! 6000mAh ಬ್ಯಾಟರಿ ಸಪೋರ್ಟ್‌

HIGHLIGHTS

ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಮೊಟೊರೊಲಾ ಎಡ್ಜ್‌ 60 ಪ್ರೊ ಭಾರೀ ಡಿಸ್ಕೌಂಟ್‌ ಪಡೆದಿದೆ

ಮೊಟೊರೊಲಾ ಎಡ್ಜ್‌ 60 ಪ್ರೊ ಫೋನ್‌ MediaTek Dimensity 8350 ಪ್ರೊಸೆಸರ್‌ ಅನ್ನು ಪಡೆದಿದೆ

ಮೊಟೊರೊಲಾ ಎಡ್ಜ್‌ 60 ಪ್ರೊ ಮೊಬೈಲ್‌ 90W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ

ಕರ್ವ್ ಡಿಸ್‌ಪ್ಲೇ ಇರುವ Motorola Edge 60 Pro ಬೆಲೆಯಲ್ಲಿ ಭಾರೀ ಇಳಿಕೆ! 6000mAh ಬ್ಯಾಟರಿ ಸಪೋರ್ಟ್‌

ಮೊಟೊರೊಲಾ ಸಂಸ್ಥೆಯ ಸ್ಟೈಲಿಶ್‌ ಹಾಗೂ ಪವರ್‌ಫುಲ್‌ ಸ್ಮಾರ್ಟ್‌ಫೋನ್‌ ಎನಿಸಿರುವ Motorola Edge 60 Pro ಖರೀದಿಸಲು ಈಗ ಸಕಾಲ. ಮೊಟೊರೊಲಾ ಸಂಸ್ಥೆಯ ಮೊಟೊರೊಲಾ ಎಡ್ಜ್‌ 60 ಪ್ರೊ ಮೊಬೈಲ್‌ ಈಗ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ ನಲ್ಲಿ ಭರ್ಜರಿ ಬೆಲೆ ಕಡಿತ ಆಗಿದೆ. ಅಲ್ಲದೇ ಗ್ರಾಹಕರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಮೊಟೊರೊಲಾ ಕಂಪನಿಯ ಈ ಮೊಬೈಲ್‌ MediaTek Dimensity 8350 ಎಕ್ಸ್‌ಟ್ರಿಮ್‌ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು ಇದರೊಂದಿಗೆ 6000mAh ಬ್ಯಾಟರಿ ಸಪೋರ್ಟ್‌ ಅನ್ನು ಒಳಗೊಂಡಿದೆ. ಅಂದಹಾಗೆ ಈ ಫೋನ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಮೊಟೊರೊಲಾ ಎಡ್ಜ್‌ 60 ಪ್ರೊ ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಇಂದು Samsung Galaxy S26, Galaxy S26 Plus ಮತ್ತು Galaxy S26 Ultra ಬಿಡುಗಡೆ! ಏನನ್ನು ನಿರೀಕ್ಷಿಸಬಹುದು

Motorola Edge 60 Pro 5G ಮೊಬೈಲ್‌ಗೆ ಬಿಗ್ ಡಿಸ್ಕೌಂಟ್‌

ಮೊಟೊರೊಲಾ ಎಡ್ಜ್‌ 60 ಪ್ರೊ ಸ್ಮಾರ್ಟ್‌ಫೋನ್‌ ಪ್ರಸ್ತುತ Amazon ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 8GB RAM + 256GB ವೇರಿಯಂಟ್‌ ಬೆಲೆ 36,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 29,377 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿಯಾಗಿ 1,500 ರೂ.ಗಳ ವರೆಗೂ ಇನ್‌ಸ್ಟಂಟ್‌ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಪ್ಯಾಂಟೋನ್ ಡ್ಯಾಜ್ಲಿಂಗ್ ಬ್ಲೂ, ಪ್ಯಾಂಟೋನ್ ಶ್ಯಾಡೋ, ಪ್ಯಾಂಟೋನ್ ಸ್ಪಾರ್ಕ್ಲಿಂಗ್ ಗ್ರೇಪ್ ಮತ್ತು ಪ್ಯಾಂಟೋನ್ ವಾಲ್ನಟ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

 Motorola Edge 60 Pro

ಮೊಟೊರೊಲಾ ಎಡ್ಜ್‌ 60 ಪ್ರೊ ಪ್ರಮುಖ ಫೀಚರ್ಸ್‌ ಹೀಗಿವೆ

ಮೊಟೊರೊಲಾ ಎಡ್ಜ್‌ 60 ಪ್ರೊ ಮೊಬೈಲ್‌ ಡಿಸ್‌ಪ್ಲೇಯು 6.7 ಇಂಚಿನ ಕರ್ವ್ಡ pOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಹೊಂದಿದ್ದು ಜೊತೆಗೆ 4,500 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಮೊಬೈಲ್‌ MediaTek Dimensity 8350 ಎಕ್ಸ್‌ಟ್ರಿಮ್‌ ಚಿಪ್‌ಸೆಟ್‌ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 8GB RAM + 256GB ಹಾಗೂ 512GB  ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಹಾಗೆಯೇ ಮೊಟೊರೊಲಾ ಎಡ್ಜ್‌ 60 ಪ್ರೊ ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಹಾಗೂ ತೃತೀಯ ಕ್ಯಾಮೆರಾ ಸಹ 10MP ಸೆನ್ಸಾರ್‌ ಬಲ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 50MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 6000mAh ಬ್ಯಾಟರಿ ಜೊತೆಗೆ 90W ವೈರ್ಡ್ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಅಲ್ಲದೇ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo