ಇನ್ಮೇಲೆ ನೀವು ಮಾಡುವ ಪ್ರತಿ ರೀಚಾರ್ಜ್‌ಗೆ Paytm ಪ್ರೊಸೆಸಿಂಗ್ ಚಾರ್ಜ್ ವಿಧಿಸುತ್ತಿದೆ

HIGHLIGHTS

ಮೊಬೈಲ್ ರೀಚಾರ್ಜ್‌ಗಳ ಮೇಲೆ ಶುಲ್ಕ ವಿಧಿಸಿ ಶಾಕ್ ನೀಡಿದ್ದ PhonePe ಸಾಲಿಗೆ ಇದೀಗ Paytm ಕೂಡ ಸೇರಿಕೊಂಡಿದೆ.

Paytm ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡುವ ವೇಳೆ 1 ರೂ. ನಿಂದ 6 ರೂ.ಗಳವರೆಗೆ ಶುಲ್ಕವನ್ನು ವಿಧಿಸಲಾಗುತ್ತಿದೆ

ಇನ್ಮೇಲೆ ನೀವು ಮಾಡುವ ಪ್ರತಿ ರೀಚಾರ್ಜ್‌ಗೆ Paytm ಪ್ರೊಸೆಸಿಂಗ್ ಚಾರ್ಜ್ ವಿಧಿಸುತ್ತಿದೆ

ಮೊಬೈಲ್ ರೀಚಾರ್ಜ್‌ಗಳ ಮೇಲೆ ಶುಲ್ಕ ವಿಧಿಸಿ ಶಾಕ್ ನೀಡಿದ್ದ PhonePe ಸಾಲಿಗೆ ಇದೀಗ Paytm ಕೂಡ ಸೇರಿಕೊಂಡಿದೆ. 2019 ರಲ್ಲಿ UPI ಮತ್ತು ವ್ಯಾಲೆಟ್‌ಗಳನ್ನು ಬಳಸಿಕೊಂಡು Paytm ಅನ್ನು ಬಳಸುವಾಗ ಗ್ರಾಹಕರಿಗೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಹೇಳಿದ್ದ Paytm ಇದೀಗ ಉಲ್ಟಾ ಹೊಡೆದಿದ್ದು Paytm ಅಪ್ಲಿಕೇಶನ್ ಬಳಸಿ ರೀಚಾರ್ಜ್ ಮಾಡಿದರೆ ಪ್ರೊಸೆಸಿಂಗ್ ಶುಲ್ಕವನ್ನು (ಪ್ಲಾಟ್‌ಫಾರ್ಮ್ ಶುಲ್ಕ/ಅನುಕೂಲಕರ ಶುಲ್ಕ) ವಿಧಿಸುತ್ತಿರುವುದು ಕಂಡುಬಂದಿದೆ.

Digit.in Survey
✅ Thank you for completing the survey!

Paytm ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ Paytm ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡುವ ವೇಳೆ 1 ರೂ. ನಿಂದ 6 ರೂ.ಗಳವರೆಗೆ ಶುಲ್ಕವನ್ನು ವಿಧಿಸಲಾಗುತ್ತಿದೆ. Paytm ಅಪ್ಲಿಕೇಶನ್ ಅನ್ನು ಬಳಸಿಕೊಂಡು 148 ರೂ. ಏರ್‌ಟೆಲ್ ಯೋಜನೆಯನ್ನು ರೀಚಾರ್ಜ್ ಮಾಡಲು ಹೆಚ್ಚುವರಿ 1 ರೂ. ಶುಲ್ಕವನ್ನು ವಿಧಿಸಲಾಗಿದ್ದರೆ ಏರ್‌ಟೆಲ್‌ನ ಅತ್ಯಂತ ದುಬಾರಿ 3,359 ರೀಚಾರ್ಜ್ ಪ್ಲಾನ್ ಅನ್ನು ರೀಚಾರ್ಜ್ ಮಾಡಲು 6 ರೂಪಾಯಿಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂಬುದನ್ನು ಗಮನಿಸಲಾಗಿದೆ.

ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾದ ಫೋನ್‌ಪೇ ಕೂಡ ಮೊಬೈಲ್ ರೀಚಾರ್ಜ್‌ಗಳ ಮೇಲೆ ಶುಲ್ಕ ವಿಧಿಸುತ್ತಿದೆ. ಡಿಜಿಟಲ್ ಪಾವತಿಗಳ ನಾಯಕನಾಗಿ ಬೆಳೆದುನಿಂತ ನಂತರ ತನ್ನ PhonePe ಅಪ್ಲಿಕೇಷನ್‌ನಲ್ಲಿ 50 ರೂ.ಗಿಂತ ಹೆಚ್ಚಿನ ಫೋನ್ ರೀಚಾರ್ಜ್‌ಗಳ ಮೇಲೆ 1 ರಿಂದ 2 ರೂಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿದೆ. 51 ರಿಂದ 100 ರೂ.ವರೆಗಿನ ರೀಚಾರ್ಜ್‌ಗಳಿಗೆ 1 ರೂ. ಶುಲ್ಕ ಮತ್ತು 100 ರೂ.ಗಿಂತ ಹೆಚ್ಚಿನದಕ್ಕೆ 2 ರೂ.ಶುಲ್ಕವನ್ನು ವಿಧಿಸುತ್ತಿರುವುದನ್ನು ನಾವು ನೋಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo