HIGHLIGHTSMoto G9 ಟ್ರಿಪಲ್ ರಿಯರ್ ಕ್ಯಾಮೆರಾಗಳ ಜೊತೆಗೆ 20W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ.
Moto G9 ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಬೆಲೆ 11,499 ರೂಗಳಾಗಿವೆ.
ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಕೊಡುಗೆ ಸಿಗುತ್ತದೆ.
Moto G9 ಇಂದು ಭಾರತದಲ್ಲಿ ತನ್ನ ಮೊದಲ ಮಾರಾಟದ ಮೂಲಕ ಖರೀದಿಗೆ ಲಭ್ಯವಾಗಿತ್ತು. ಈ ಹೊಸ ಮೊಟೊರೊಲಾ ಸ್ಮಾರ್ಟ್‌ಫೋನ್ ಕಳೆದ ವಾರ ದೇಶದಲ್ಲಿ ಪಾದಾರ್ಪಣೆ ಮಾಡಿತು. ಇದು ಟ್ರಿಪಲ್ ರಿಯರ್ ಕ್ಯಾಮೆರಾಗಳ ಜೊತೆಗೆ 20W ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಈ Moto G9 ಸ್ಮಾರ್ಟ್ಫೋನ್ Redmi Note 9 Pro, Samsung Galaxy M21 ಮತ್ತು Realme 6i ನಂತಹ ಮುಂತಾದವುಗಳನ್ನು ಪಡೆದುಕೊಳ್ಳಲು ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ನೀಡುತ್ತದೆ. ಇವೆಲ್ಲವೂ ಆಂಡ್ರಾಯ್ಡ್‌ನ ಮೇಲಿರುವ ಕಸ್ಟಮ್ ಸ್ಕಿನ್‌ನೊಂದಿಗೆ ಪ್ರೀ ಲೋಡ್ ಆಗುತ್ತವೆ. Moto G9 ನ ಇತರ ಪ್ರಮುಖ ಮುಖ್ಯಾಂಶಗಳು ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಡಿಸೈನ್, NFC ಬೆಂಬಲ ಮತ್ತು ವಾಟರ್ ಪ್ರೊಫ್ ನಿರ್ಮಾಣವನ್ನು ಒಳಗೊಂಡಿವೆ.
ಈ ಹೊಸ Moto G9 ಒಂಡ್ ಈ ಒಂದು ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದು 4GB RAM ಮತ್ತು 64GB ಸ್ಟೋರೇಜ್‌ನಲ್ಲಿ ಬರುತ್ತದೆ. ಇದರ ಆರಂಭಿಕ ಬೆಲೆ 11,499 ರೂಗಳಾಗಿವೆ. ಬಳಕೆದಾರರು ಇದನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಪ್ರತ್ಯೇಕವಾಗಿ ಖರೀದಿಸಲು ಸಾಧ್ಯವಾಗುತ್ತದೆ. ಈ ಸ್ಮಾರ್ಟ್‌ಫೋನ್ ಸಫೈರ್ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಫೋನ್ 3500 ರೂಗಳ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಅಲ್ಲದೆ ICICI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ 500 ರೂಪಾಯಿಗಳ ರಿಯಾಯಿತಿ ಕೊಡುಗೆಯನ್ನು ನೀಡಲಾಗುತ್ತಿದೆ. ಅದೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಕೊಡುಗೆ ಸಿಗುತ್ತದೆ.
ಡ್ಯುಯಲ್ ಸಿಮ್ (ನ್ಯಾನೋ) Moto G9 ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.5 ಇಂಚಿನ ಎಚ್‌ಡಿ + ಮ್ಯಾಕ್ಸ್ ವಿಷನ್ ಟಿಎಫ್‌ಟಿ ಡಿಸ್ಪ್ಲೇಯೊಂದಿಗೆ 20: 9 ಆಕಾರ ಅನುಪಾತ ಮತ್ತು 87% ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 SoC ನಿಂದ ನಿಯಂತ್ರಿಸಲ್ಪಡುತ್ತದೆ. ಇದು 4GB LPDDR4 RAM ನೊಂದಿಗೆ ಜೋಡಿಯಾಗಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ ನೀವು 48MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಆಳ ಸಂವೇದಕ ಮತ್ತು ಮ್ಯಾಕ್ರೋ ಲೆನ್ಸ್ ಹೊಂದಿರುವ 2MP ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ಸ್ಮಾರ್ಟ್ಫೋನ್ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವನ್ನು ಸಹ ನೀಡುತ್ತದೆ.
ಮೊಟೊರೊಲಾ Moto G9 ನಲ್ಲಿ 64GB ಆನ್‌ಬೋರ್ಡ್ ಸಂಗ್ರಹವನ್ನು ಒದಗಿಸಿದೆ. ಇದನ್ನು ಮೈಕ್ರೊ SD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ (512GB ವರೆಗೆ). ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G ವೋಲ್ಟಿಇ, ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ. ಸ್ಮಾರ್ಟ್ಫೋನ್ FM ರೇಡಿಯೋ ಮತ್ತು ಎನ್ಎಫ್ಸಿ ಬೆಂಬಲದೊಂದಿಗೆ ಬರುತ್ತದೆ. ಇದಲ್ಲದೆ ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸಂವೇದಕವಿದೆ. ಒಟ್ಟಾರೆಯಾಗಿ ಧೀರ್ಘಕಾಲದ ಬ್ಯಾಟರಿಯೊಂದಿಗೆ ಅತ್ಯುತ್ತಮ ಡಿಸ್ಪ್ಲೇಯನ್ನು ಕೇವಲ 12,000 ರೂಗಳ ಬಜೆಟ್ ಒಳಗೆ ಹುಡುಕುತ್ತಿದ್ದರೆ ಇದೊಂದು ಸೂಕ್ತವಾದ ಆಯ್ಕೆ ನಿಮಗಾಗಲಿದೆ. ಈ ಸ್ಮಾರ್ಟ್ಫೋನ್ ಖರೀದಿಸಲು ಅಥವಾ ಹೆಚ್ಚಿನ ಮಾಹಿತಿಯನ್ನು ಪಡೆಯಲು Moto G9 ಬೆಲೆ ಮತ್ತು ಲಭ್ಯತೆ ಅಥವಾ Moto G9 ವಿಶೇಷಣಗಳ ಮೇಲೆ ಕ್ಲಿಕ್ ಮಾಡಿ.
Price: |
![]() |
Release Date: | 24 Sep 2020 |
Variant: | 64GB4GBRAM |
Market Status: | Launched |
Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.
We are about leadership-the 9.9 kind! Building a leading media company out of India.And,grooming new leaders for this promising industry.(Kannada)