ಸ್ಮಾರ್ಟ್ಫೋನ್ ಬಳಕೆಯಲ್ಲಿ ಪದೇ ಪದೇ ನೆಟ್ವರ್ಕ್ ಮಾಯದಿಂದ ಬೇಸರವಾಗಿದ್ಯಾ?
ಕರೆಯಲ್ಲಿರುವಾಗ ವಾಯಿಸ್ ಬರದಿರುವುದು, ಹೇಳದೇ ಕೇಳದೆ ಕಟ್ ಆಗೋದು ಸಾಮಾನ್ಯವಾಗಿದೆ.
ನೀವು ಈ ಸಮಸ್ಯೆಗಳನ್ನು ಪರಿಹರಿಸಲು ಬಯಸಿದರೆ ಉಪಯುಕ್ತವಾದ ಮಾಹಿತಿಗಳನ್ನು ಈ ಕೆಳಗೆ ವಿವರಿಸಲಾಗಿದೆ.
How to Fix Phone Network Issue: ಈ ಸಮಸ್ಯೆಯ ಬಗ್ಗೆ ಹೆಚ್ಚು ವಿಸ್ತಾರವಾಗಿ ಹೇಳುವ ಅಗತ್ಯವಿಲ್ಲ ಯಾಕೆಂದರೆ ಇದೊಂದು ಸಣ್ಣ ಪುಟ್ಟ ನೆಗಡಿ ಕೆಮ್ಮಿನಂತೆ ಸ್ಮಾರ್ಟ್ಫೋನ್ ಬಳಸುವ ಪ್ರತಿಯೊಬ್ಬರು ಈ ನೆಟ್ವರ್ಕ್ ಸಮಸ್ಯೆಯಿಂದ ಹಾದು ಹೋಗಿರುತ್ತಾರೆ. ಕೆಲವರು ಇಂದಿಗೂ ಈ ಸಿಕ್ಕಾಪಟ್ಟೆ ತಲೆನೋವನ್ನು ನೀಡುವ ನೆಟ್ವರ್ಕ್ ಸಮಸ್ಯೆಗೆ ಸಿಕ್ಕಿ ಬಳಲುತ್ತಿದ್ದರೆ ಮತ್ತೆ ಕೆಲವರು ನೆಟ್ವರ್ಕ್ ಪೂರೈಕೆದಾರರನ್ನೇ ಬದಲಾಯಿಸಿ ಅಲ್ಲಿಯೂ ತಲೆನೋವನ್ನು ಮುಂದುವರಿಸುತ್ತಿದ್ದಾರೆ. ಈ ಸಮಸ್ಯೆ ಹೆಚ್ಚಾಗಿ ನಿಮ್ಮ ಮನೆ, ಕಚೇರಿ ಅದರಲ್ಲೂ ಕಟ್ಟಡಗಳ ಕೆಳಭಾಗದಲ್ಲಿ ಅಥವಾ ಕಟ್ಟಡಗಳ ಅಕ್ಕಪಕ್ಕದಲ್ಲಿ ಹೇರಳವಾಗಿ ಕಾಣಲು ಸಿಗುತ್ತದೆ.
Surveyಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಕಾರಣಗಳೇನು?
ಹೌದು, ಮೊದಲಿಗೆ ಈ ಸಮಸ್ಯೆಗೆ ಕಾರಣಗಳೇನು ಎಂದು ತಿಳಿಯುವುದು ಅತಿ ಮುಖ್ಯವಾದ ಅಂಶವಾಗಿದೆ. ಯಾಕೆಂದರೆ ನೆಟ್ವರ್ಕ್ ದೇವಸ್ಥಾನ ಪ್ರಸಾದದಂತೆ ಒಬ್ಬೊಬ್ಬರಿಗೆ ಇಂತಿಷ್ಟು ಅಂತ ಯಾರೂ ನೀಡುತ್ತಿಲ್ಲ ಹಾಗಿರುವಾಗ ಈ ಅಪಾರದರ್ಶಕ ಅನಿಯಮಿತ ನೆಟ್ವರ್ಕ್ ಯಾಕೆ ಸಮಸ್ಯೆ ಮಾಡುತ್ತಿದೆ ಎನ್ನೋದು ತಿಳಿಯಲೇಬೇಕು. ಉದಾಹರಣೆಗೆ ಮೈಗೆ ಉಷಾರಿಲ್ಲ ಅಂದ್ರೆ ವೈದ್ಯ ಔಷಧಿ ನೀಡುವ ಮೊದಲು ಯಾವ ಕಾರಣಕ್ಕಾಗಿ ಉಷಾರು ತಪ್ಪಿದೆ ಎನ್ನುವುದುನ್ನು ಹೇಗೆ ಪತ್ತೆ ಹಚ್ಚುತ್ತಾರೋ ಹಾಗೆಯೆ ಪದೇ ಪದೇ ನೆಟ್ವರ್ಕ್ ಕಣ್ಮರೆಯಾಗುತ್ತಿದ್ದರೆ ಇದಕ್ಕೆ ಕಾರಣವೇನು ಎಂದು ತಿಳಿಯುದು ಬಹು ಮುಖ್ಯವಾಗಿದೆ.

ಕೆಲವೊಮ್ಮೆ ಸಿಮ್ ಕಾರ್ಡ್ ಬದಲಾಯಿಸುವುದರಿಂದಲೂ ಪೂರ್ತಿ ಸಮಸ್ಯೆ ಬಗೆಹರಿಯುತ್ತದೆ. ಮತ್ತೆ ಕೆಲ ಸನ್ನಿವೇಶಗಳಿಗೆ ಅನುಗುಣವಾಗಿ ನಿರ್ಧಾರ ಕೈಗೆತ್ತಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಈ ನೆಟ್ವರ್ಕ್ ಸಮಸ್ಯೆಯು ದೀರ್ಘಕಾಲದವರೆಗೆ ಮುಂದುವರಿದರೆ ಅದು ನಿಮಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ನೀವು ಈ ಸಮಸ್ಯೆಯನ್ನು ಪರಿಹರಿಸಲು ಬಯಸಿದರೆ ಇಂದು ಕೆಲವೊಂದು ಉಪಯುಕ್ತವಾದ ಸಲಹೆಗಳನ್ನು ವಿವರಿಸಿದ್ದೇವೆ.
Also Read: ಫ್ಲಿಪ್‌ಕಾರ್ಟ್‌ನಿಂದ POCO M7 5G ಇಂದು ಫಸ್ಟ್ ಸೇಲ್! 6GB RAM ಮತ್ತು 5160mAh ಬ್ಯಾಟರಿಯ ಫೋನ್ ಮಾರಾಟ!
ಮೊಬೈಲ್ ನೆಟ್ವರ್ಕ್ ಸಮಸ್ಯೆಗಳಿಗೆ (Mobile Network Issue) ಈ ಅಂಶಗಳು ಕಾರಣ!
ಇಂದಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ಮನೆಗಳು ದೊಡ್ಡ ದೊಡ್ಡ ಬಿಲ್ಡಿಂಗ್ ಮಾದರಿಯಲ್ಲಿ ತಯಾರಾಗುತ್ತಿರುವ ಹಿನ್ನೆಯಲ್ಲಿ ಮನೆಯ ಹೊರಗೆ ಅತ್ಯುತ್ತಮ ನೆಟ್‌ವರ್ಕ್ ಇದ್ದರೂ ಮನೆಯೊಳಗೆ ಬಂದ ತಕ್ಷಣ ಮೊಬೈಲ್ ನೆಟ್‌ವರ್ಕ್ (Mobile Network) ಪೂರ್ತಿಯಾಗಿ ಮಾಯವಾಗುವುದನ್ನು ಗಮನಿಸಬಹುದು. ಕೆಲವೊಮ್ಮೆ ನೆಟ್ವರ್ಕ್ ಪೂರ್ತಿ ಇದ್ದರೂ ಡೇಟಾ ಅಥವಾ ಕರೆ ಕನೆಕ್ಟ್ ಆಗೋದೆ ಇಲ್ಲ. ಅಂದ್ರೆ ನಿಮ್ಮ ಸುತ್ತಮುತ್ತ ದೊಡ್ಡ ಗೋಡೆಗಳಿದ್ದರೆ, ಫೋನ್ / ಸಿಮ್ ಕಾರ್ಡ್ ಡ್ಯಾಮೇಜ್ ಆಗಿದ್ದರೆ, ಸಿಮ್ ಕಾರ್ಡ್ ಸಿಕ್ಕಾಪಟ್ಟೆ ಹಳೆಯದಾಗಿದ್ದರೆ, ನೈಸರ್ಗಿಕ ಗಾಳಿಯಿಂದ ದೂರವಿದ್ದರೆ ಅಥವಾ ನೆಟ್ವರ್ಕ್ ಟವರ್ನಿಂದ ಹೆಚ್ಚು ದೂರವಿದ್ದರೆ ಮೊಬೈಲ್ ನೆಟ್ವರ್ಕ್ ಸಮಸ್ಯೆಯಾಗುವುದು ಅನಿವಾರ್ಯವಾಗಿದೆ.

ಮೊಬೈಲ್ ನೆಟ್ವರ್ಕ್ ಸಮಸ್ಯೆಗಳಿಗೆ ಪರಿಹಾರಗಳೇನು?
ನಿಮ್ಮ ಸುತ್ತಮುತ್ತ ದೊಡ್ಡ ಗೋಡೆಗಳಿದ್ದರೆ: ಈ ಅಂಶದಲ್ಲಿ ಯಾವುದೇ ದೊಡ್ಡ ಸಲಹೆ ಇಲ್ಲ, ಸಿಂಪಲ್ ಅಂದ್ರೆ ದೊಡ್ಡ ಗೋಡೆಗಳು ಕಟ್ಟುವ ತನಕ ಕಾಯ್ದು ನಂತರ ಅಲ್ಲಿ ಯಾವ ನೆಟ್ವರ್ಕ್ ಉತ್ತಮವಾಗಿದ್ಯೋ ಈ ಟೆಲಿಕಾಂ ಕಂಪನಿಯತ್ತ ನಿಮ್ಮ ಹಳೆಯ ನಂಬರ್ ಜೊತೆಗೆ ಮುಖ ಮಾಡಬೇಕಾಗುತ್ತದೆ.
ಫೋನ್ / ಸಿಮ್ ಕಾರ್ಡ್ ಡ್ಯಾಮೇಜ್: ಈ ಸಮಸ್ಯೆಯಲ್ಲಿ ನೀವಿದ್ದರೆ ಸರಳವಾಗಿ ಒಮ್ಮೆ ನಿಮ್ಮ ಹತ್ತಿರದ ಟೆಲಿಕಾಂ ಪೂರೈಕೆದಾರರ ಸ್ಟೋರ್ ಭೇಟಿ ನೀಡಿ ಡ್ಯಾಮೇಜ್ ಆಗಿರುವ ಸಿಮ್ ಕಾರ್ಡ್ ನಕಲೀಕರಿಸಿ ಪಡೆಯಬಹುದು. ಇದರೊಂದಿಗೆ ಅಗತ್ಯವಿದ್ದರೆ ಫೋನ್ ಸಹ ಬದಲಾಯಿಸುವುದು ಉತ್ತಮ.
ಸಿಮ್ ಕಾರ್ಡ್ ಸಿಕ್ಕಾಪಟ್ಟೆ ಹಳೆಯದಾಗಿದ್ದರೆ: ಒಂದು ವೇಳೆ ನಿಮ್ಮ ಸಿಮ್ ಕಾರ್ಡ್ ಒಂದೇ ಫೋನಲ್ಲಿ ತುಂಬ ವರ್ಷಗಳಿದ ತೆಗೆಯದೆ ಬಳಸುತ್ತಿದ್ದಾರೆ ನೆಟ್ವರ್ಕ್ ಸಮಸ್ಯೆ ಎಚ್ಚಾಗುವ ಹೆಚ್ಚು ಅವಕಾಶಗಳಿವೆ. ಯಾಕೆಂದರೆ 2G, 3G ಸಿಮ್ ಕಾರ್ಡ್ ಇನ್ನೂ ಬಳಸುತ್ತಿದ್ದರೆ ಒಮ್ಮೆ ಹೊಸ 4G, ಅಥವಾ 5G ಸಿಮ್ ಕಾರ್ಡ್ ಅಪ್ಗ್ರೇಡ್ ಮಾಡಿಕೊಳ್ಳಿ.
ಎಲ್ಲ ಸರಿಯಾಗಿದ್ದು ಅಚಾನಕ್ ನೆಟ್ವರ್ಕ್ ಮಾಯ: ಇಂತಹ ಸಮಸ್ಯೆ ಹೆಚ್ಚಾಗಿ ನೀವು ಪ್ರಯಾಣಿಸುವಾಗ ಗಮನಿಸಬಹುದು. ಸರಳವಾಗಿ ಹೇಳುವುದಾದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೀವು ವೇಗವಾಗಿ ಹೋದಾಗ ನಿಮ್ಮ ಫೋನ್ ಟವರ್ ರೇಂಜ್ನಿಂದ ಹೊರಹೋಗಿ ಮತ್ತೆ ಟವರ್ ಒಳಗೆ ಪ್ರವೇಶಿಸುತ್ತದೆ. ಈ ಮಧ್ಯೆ ಆಗುವ ಸಮಸ್ಯೆ ಪೂರ್ತಿ ನೆಟ್ವರ್ಕ್ ಸಮಸ್ಯೆಯಾಗಿದ್ದು ಈಗಾಗಲೇ ಹೇಳಿರುವಂತೆ ಪ್ರಯಾಣದಲ್ಲಿ ಗಮನಿಸಬಹುದು. ಇದನ್ನು ಸರಿಪಡಿಸಲು ಒಮ್ಮೆ ಏರ್‌ಪ್ಲೇನ್ ಮೋಡ್ (Flight Mode) ಆನ್ ಆಫ್ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile