ಈಗಾಗಲೇ ನಿಮಗೆ ತಿಳಿದಿರುವಂತೆ ಏಷ್ಯಾ ಕಪ್ (Asia Cup 2023) ಅಬ್ಬರದಿಂದ ಆರಂಭಗೊಂಡಿದ್ದು ಪಂದ್ಯಾವಳಿಯ ಮೊದಲ ಪಂದ್ಯವನ್ನು ಪಾಕಿಸ್ತಾನ 238 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಲಿರುವ ಏಷ್ಯನ್ ಕ್ರಿಕೆಟ್ ಟೂರ್ನಿಯ (IND vs PAK Asia Cup 2023) ಎರಡನೇ ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು ಎದುರಿಸಲಿದೆ. ಪಾಕಿಸ್ತಾನಕ್ಕೆ ಇದು ಎರಡನೇ ಪಂದ್ಯವಾಗಿದ್ದರೂ ಭಾರತವು ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
Survey
✅ Thank you for completing the survey!
ಏಷ್ಯಾ ಕಪ್ 2023 ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?
ನೀವು ಮನೆಯಲ್ಲಿ ಏಷ್ಯಾ ಕಪ್ 2023 ಪಂದ್ಯಗಳನ್ನು ಆನಂದಿಸಲು ಬಯಸಿದರೆ ನೀವು ಮನೆಯಲ್ಲಿ ಪ್ರತಿ ಪಂದ್ಯವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಭಾರತದಲ್ಲಿ ಏಷ್ಯಾ ಕಪ್ 2023 ಲೈವ್ ಸ್ಟ್ರೀಮ್ ಅನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ? ಏಷ್ಯಾ ಕಪ್ 2023 ಪಂದ್ಯವನ್ನು ಯಾವುದೇ ವೆಚ್ಚವಿಲ್ಲದೆ HD ಗುಣಮಟ್ಟದಲ್ಲಿ Disney+ Hotstar ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು. ಪಂದ್ಯಾವಳಿಯನ್ನು ವೀಕ್ಷಿಸಲು ಬಯಸುವ ಬಳಕೆದಾರರು ಮೊದಲು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಹಾಟ್‌ಸ್ಟಾರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ ಸಾಕು. ಯಾವುದೇ ಚಂದಾದಾರಿಕೆ ಇಲ್ಲದೆ ನೀವು ಎಲ್ಲಾ ಏಷ್ಯಾ ಕಪ್ 2023 ಪಂದ್ಯಗಳನ್ನು ಇಲ್ಲಿ ವೀಕ್ಷಿಸಬಹುದು.
ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಮ್ಯಾಚ್ 50 ಓವರ್‌ಗಳ ಪಂದ್ಯವು ಮಧ್ಯಾಹ್ನ 3:00 ಗಂಟೆಗೆ (IST) ಪ್ರಾರಂಭವಾಗುತ್ತದೆ. ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಏಷ್ಯಾ ಕಪ್ ಗುಂಪು ಹಂತದ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಅಭಿಮಾನಿಗಳು ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸಹ ವೀಕ್ಷಿಸಬಹುದು.
ನಿಮ್ಮ ಫೋನ್‌ಗಳಲ್ಲಿ ಏಷ್ಯಾ ಕಪ್ 2023 ಲೈವ್ ಪಂದ್ಯಗಳನ್ನು ವೀಕ್ಷಿಸುವುದು ಹೇಗೆ?
1. ಮೊದಲಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.
2. ಇದರ ನಂತರ Disney+ Hotstar ಅಪ್ಲಿಕೇಶನ್ ತೆರೆಯಿರಿ.
3. ಪಂದ್ಯವು ಲೈವ್ ಆಗಿದ್ದರೆ ಆ ಪಂದ್ಯವನ್ನು ವೀಕ್ಷಿಸಲು IND vs PAK Asia Cup 2023 ಮೇಲಿನ ಬ್ಯಾನರ್ ಅನ್ನು ಆಯ್ಕೆಮಾಡಿ.
4. ನೀವು ಬಯಸಿದರೆ ನೀವು ಮೊಬೈಲ್ ಅಪ್ಲಿಕೇಶನ್‌ನ ಮೇಲ್ಭಾಗದಲ್ಲಿರುವ ಸ್ಪೋರ್ಟ್ಸ್ ಟ್ಯಾಬ್‌ನಿಂದಲೂ ಈ ಎಲ್ಲಾ ಪಂದ್ಯವನ್ನು ವೀಕ್ಷಿಸಬಹುದು.
ಏಷ್ಯಾ ಕಪ್ 2023 ಪಂದ್ಯವನ್ನು ನೀವು ಮೊಬೈಲ್‌ನಲ್ಲಿ ವೀಕ್ಷಿಸಿದರೆ ನೀವು ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ನೀವು ಉಚಿತವಾಗಿ ವೀಕ್ಷಿಸಬಹುದು. ಆದರೆ ನೀವು ಲ್ಯಾಪ್‌ಟಾಪ್, ಪಿಸಿ ಅಥವಾ ಸ್ಮಾರ್ಟ್ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸಲು ಬಯಸಿದರೆ ನೀವು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile