ಫೋನ್ ಕವರ್ ಈ ರೀತಿ ಕೊಳೆಗಾಗಿದ್ದರೆ ಈ ಟ್ರಿಕ್ ಅನುಸರಿಸಿ! ಫಳ ಫಳ ಹೊಳೆಯುವಂತೆ ಮಾಡಿ| How To

HIGHLIGHTS

ನೀವು ಸಿಲಿಕಾನ್ ಪಾರದರ್ಶಕದ (Silicone Transparent) ಮೊಬೈಲ್ ಕವರ್ ಹೊಂದಿದ್ದರೆ ಹಳದಿ ಬಣ್ಣಕ್ಕೆ ತಿರುಗುತ್ತಿರುವುದನ್ನು ಗಮನಿಸಬಹುದು.

ಸದಾ ನಿಮ್ಮ ಜೇಬು ಅಥವಾ ಕೈಯಲ್ಲೇ ಇರುವ ಫೋನ್ ಕವರ್ ಕೊಳೆಯಾಗುವುದು ಸರ್ವೇ ಸಾಮಾನ್ಯವಾಗಿದೆ

ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುವನ್ನು ಬಳಸಿ ಇದನ್ನು ಫಳ ಫಳ ಹೊಳೆಯುವಂತೆ ಮಾಡುವುದು ಹೇಗೆಂದು ತಿಳಿಯಿರಿ.

ಫೋನ್ ಕವರ್ ಈ ರೀತಿ ಕೊಳೆಗಾಗಿದ್ದರೆ ಈ ಟ್ರಿಕ್ ಅನುಸರಿಸಿ! ಫಳ ಫಳ ಹೊಳೆಯುವಂತೆ ಮಾಡಿ| How To

ನೀವು ಈ ಲೇಖನವನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಓದುತ್ತಿರಿದ್ದರೆ ನಿಮ್ಮ ಒಮ್ಮೆ ನಿಮ್ಮ ಮೊಬೈಲ್ ಕೇಸ್ ಅಥವಾ ಕವರ್ (Phone Case) ಅನ್ನು ತೆರೆದು ನೋಡಿ ಅದರಲ್ಲೂ ಒಂದು ವೇಳೆ ನೀವು ಸಿಲಿಕಾನ್ ಪಾರದರ್ಶಕದ (Silicone Transparent) ಮೊಬೈಲ್ ಕವರ್ ಹೊಂದಿದ್ದರೆ ಒಂದಲ್ಲ ಒಂದು ಕಾರಣಗಳಿಂದ ಅದು ಕೊಂಚ ಕೊಂಚವಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿರುವುದನ್ನು ಗಮನಿಸಬಹುದು. ಏಕೆಂದರೆ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರಲೆಂದು ಅದಕ್ಕೆ ಕವರ್ ಹಾಕಿ ಬಳಸುತ್ತಾರೆ. ಆದರೆ ನಿಮಗೊತ್ತಾ ಸದಾ ನಿಮ್ಮ ಜೇಬು ಅಥವಾ ಕೈಯಲ್ಲೇ ಇರುವ ಫೋನ್ ಕವರ್ ಕೊಳೆಯಾಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಬಗ್ಗೆ ಈಗ ನೀವು ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುವನ್ನು ಬಳಸಿ ಇದನ್ನು ಫಳ ಫಳ ಹೊಳೆಯುವಂತೆ ಮಾಡುವುದು ಹೇಗೆಂದು ತಿಳಿಯಿರಿ.

Digit.in Survey
✅ Thank you for completing the survey!

Why is my phone case turning yellow?

ಈಗಾಗಲೇ ಮೇಲೆ ತಿಳಿಸಿರುವತೆ ಸದಾ ನಿಮ್ಮ ಜೇಬು ಅಥವಾ ಕೈಯಲ್ಲೇ ಇರುವ ಫೋನ್ ಕವರ್ ಕೊಳೆಯಾಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಎಡಕ್ಕೆ ಕಾರಣವೇನು ಅಂಥ ನೋಡುವುದಾದರೆ ಈ ಕೊಳಕು UV ಲೈಟ್, ನೈಸರ್ಗಿಕ ಧೂಳು ಮತ್ತು ತೈಲದೊಂದಿಗೆ ನಮ್ಮ ದೇಹದ ಬೆವರು ಈ ಫೋನ್ ಕೇಸ್ ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ. ಇದು ಸಂಭವಿಸುವುದನ್ನು ತಡೆಯಲು ನೀವು ನಿಯಮಿತವಾಗಿ ಕೆಲವು ಅಂಶಗಳನ್ನು ಗಮನದಲ್ಲಿಟ್ಟು ಸ್ವಚ್ಛಗೊಳಿಸಬೇಕು. ನೀವು ಸದಾ ಪರಿಸರ ಅವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಇದು ಪ್ರತಿ ಎರಡು ದಿನಗಳಿಗೊಮ್ಮೆ ಸ್ವಚ್ಛಗೊಳಿಸಬಹುದು.

How to Clean mobile cover

How can I clean my mobile case at home?

ನೀವು ಮನೆಯಲ್ಲೇ ನಿಮ್ಮ ಸ್ಮಾರ್ಟ್ಫೋನ್ ಕವರ್ ಅನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನಿಮ್ಮ ಬಳಿ ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಬಳಸುವ ಟ್ರಿಕ್ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ಮೊದಲಿ ಕೈ ಬೆಚ್ಚಗಿನ ನೀರು ಮತ್ತು ಡಿಶ್ ಸೋಪ್ನ ಒಂದು ಬೌಲ್ನಲ್ಲಿ ಕೆಲವು ನಿಮಿಷಗಳ ಕಾಲ ಕೇಸ್ ಅನ್ನು ನೆನೆಸಿ. ಎಲ್ಲಾ ಕೊಳಕುಗಳನ್ನು ತೆಗೆದುಹಾಕುವವರೆಗೆ ಪಾತ್ರೆ ತೊಳೆಯುವ ಸಾಬೂನಿಂದ ಕೇಸ್ ಅನ್ನು ಉಜ್ಜಿ. ನಂತರ ಟೂತ್ ಬ್ರಷ್ ಮತ್ತು ಅಡಿಗೆ ಸೋಡಾದೊಂದಿಗೆ ಕೇಸ್ ಅನ್ನು ನಿಧಾನವಾಗಿ ಪ್ರತಿಕಡೆ ಸ್ಕ್ರಬ್ ಮಾಡಿ. ಡಿಶ್‌ವಾಟರ್‌ನಿಂದ ಲಘುವಾಗಿ ತೇವಗೊಳಿಸಲಾದ ಮೈಕ್ರೋಫೈಬರ್ ಟವೆಲ್‌ನಿಂದ ಫೋನ್ ಅನ್ನು ಒರೆಸಿ. ನಿಮ್ಮ ಫೋನ್ ಕೇಸ್ ಅನ್ನು ತಣ್ಣೀರಿನಲ್ಲಿ ತೊಳೆಯಿರಿ. ಗಮನದಲ್ಲಿರಲಿ ಇದೆಲ್ಲವನ್ನು ಆರಾಮಾಗಿ ಮಾಡಬೇಕು ಅವಸರದಲ್ಲಿ ಫೋನ್ ಕವರ್‌ನ ಯಾವುದೇ ಭಾಗ ಹಾಳಾಗದಿರುವಂತೆ ಗಮನ ನೀಡುವುದು ಅತಿ ಮುಖ್ಯವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo