Find My Device: ಇನ್ಮೇಲೆ ಸ್ವಿಚ್ ಆಫ್ ಆದ್ರೂ ನಿಮ್ಮ ಫೋನ್ ಟ್ರ್ಯಾಕ್ ಮಾಡಬಹುದು! ಗೂಗಲ್‌ನಿಂದ ಹೊಸ ಫೀಚರ್‌ಗೆ ಪರಿಚಯ!

Find My Device: ಇನ್ಮೇಲೆ ಸ್ವಿಚ್ ಆಫ್ ಆದ್ರೂ ನಿಮ್ಮ ಫೋನ್ ಟ್ರ್ಯಾಕ್ ಮಾಡಬಹುದು! ಗೂಗಲ್‌ನಿಂದ ಹೊಸ ಫೀಚರ್‌ಗೆ ಪರಿಚಯ!
HIGHLIGHTS

ನಿಮ್ಮ ಸ್ಮಾರ್ಟ್ಫೋನ್ ಕಳೆದೋದ್ರೆ ಅಥವಾ ಕಳ್ಳತನವಾದ್ರೆ ಸಾಮಾನ್ಯವಾಗಿ ಕಳವಳಗೊಳ್ಳುವುದು ಅನಿವಾರ್ಯವಾಗಿದೆ.

ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ನೆಟ್‌ವರ್ಕ್ ಫೀಚರ್ ಅಪ್ಡೇಟ್ ಅನ್ನು ಹೊರತರಲು ಪ್ರಾರಂಭಿಸಿದೆ.

ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ಕಳೆದುಹೋದ ಡಿವೈಸ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ಪತ್ತೆ ಮಾಡಲು ಅನುಮತಿಸುತ್ತದೆ.

Find My Device: ಸಾಮಾನ್ಯವಾಗಿ ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ ಕಳೆದೋದ್ರೆ ಅಥವಾ ಕಳ್ಳತನವಾದ್ರೆ ಸಾಮಾನ್ಯವಾಗಿ ಕಳವಳಗೊಳ್ಳುವುದು ಅನಿವಾರ್ಯವಾಗಿದೆ. ಆದರೆ ಈಗ ಗೂಗಲ್ ನಿಮಗೊಂದು ಸಿಹಿಸುದ್ದಿಯನ್ನು ನೀಡಿದೆ. ಐಫೋನ್ ಬಳಕೆದಾರರಂತೆ ಈಗ ಆಂಡ್ರಾಯ್ಡ್ ಬಳಕೆದಾರರು ಸಹ ತಮ್ಮ ಸ್ಮಾರ್ಟ್ಫೋನ್ ಸ್ವಿಚ್ ಆಫ್ (Switch Off) ಆಗಿದ್ದರೂ ಸಹ ನಿಮ್ಮ ಫೋನ್ ಅನ್ನು ಟ್ರ್ಯಾಕ್ ಮಾಡಬಹುದು.

ಯಾಕೆಂದರೆ ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ನೆಟ್‌ವರ್ಕ್ ಫೀಚರ್ ಅಪ್ಡೇಟ್ ಅನ್ನು ಹೊರತರಲು ಪ್ರಾರಂಭಿಸಿದೆ. ಇದು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದುಹೋದ ಡಿವೈಸ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ಪತ್ತೆ ಮಾಡಲು ಅನುಮತಿಸುತ್ತದೆ. ಪ್ರಸ್ತುತ ಈ ಅಪ್ಡೇಟ್ ಅಮೇರಿಕ ಮತ್ತು ಕೆನಡಾದಲ್ಲಿ ಬಳಕೆಗೆ ಲಭ್ಯವಿದ್ದು ಶೀಘ್ರದಲ್ಲೇ ಜಾಗತಿಕವಾಗಿ ಲಭ್ಯವಾಗುವುದಾಗಿ ಗೂಗಲ್ ಹೇಳಿದೆ.

Also Read: Realme P1 5G Series: ಮುಂಬರಲಿರುವ ರಿಯಲ್‌ಮಿ ಪಿ1 ಸರಣಿಯ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ಫೀಚರ್ ಅಪ್ಡೇಟ್ ಆಗಿದೆ

ಸಾಮಾನ್ಯವಾಗಿ ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ ಕಳೆದೋದ್ರೆ ಅಥವಾ ಕಳ್ಳತನವಾದ್ರೆ ಸಾಮಾನ್ಯವಾಗಿ ಕಳವಳಗೊಳ್ಳುವುದು ಅನಿವಾರ್ಯ. ಆ ಸಂದರ್ಭದಲ್ಲಿ ನಮ್ಮ ತಲೆ ಸಹ ಹೆಚ್ಚಾಗಿ ಕೆಲಸವೇ ಮಾಡೋಲ್ಲ ಸಮಯ ಕಳೆಯುತ್ತಿದ್ದಂತೆ ನಿಮ್ಮ ಯೋಚನೆ ಮತ್ತು ನೆನಪಿಗೆ ಬರುವ ಮೊದಲ ಅಂಶವೆಂದರೆ ಗೂಗಲ್ ನೀಡುತ್ತಿರುವ ಈ ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ಫೀಚರ್ ಆಗಿದೆ. ಆದರೆ ಒಂದು ವೇಳೆ ನಿಮ್ಮ ಫೋನ್ ಕಳ್ಳತನವೆ ಆಗಿದ್ದರೆ ಕಳ್ಳ ತಕ್ಷಣ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಅವನ ಮೊದಲ ಕೆಲಸವಾಗಿರುತ್ತದೆ.

Google find my device feature will track your phones
Google find my device feature will track your phones

ಇದರಿಂದ ನಿಮ್ಮ ಕರೆಗಳನ್ನು ಪಡೆಯಲು ಅವನಿಗೆ ಸಾಧ್ಯವಾಗುದಿಲ್ಲ ಇದ್ರಿಂದ ಬೇಸತ್ತು ನೀವು ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಬೇಕಾಗುತ್ತದೆ. ಮತ್ತೆ ಕೆಲವರು ಹೋದ್ರೆ ಹೋಯ್ತು ಅಂಥ ಬೇರೊಂದು ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಿ ಮತ್ತೆ ತಮ್ಮ ದಿನಚರಿಯಲ್ಲಿ ಬಿಸಿಯಾಗುವುದು ಹೆಚ್ಚು. ಆದರೆ ಈಗ ಇಂಥಹ ಸಮಸ್ಯೆಗಳಿಗೆ ಗೂಗಲ್ ಅಚ್ಚುಮೆಚ್ಚಿನ Pixel Hardware ಮೂಲಕ ಫೀಚರ್ ಅಪ್ಡೇಟ್ ಅನ್ನು ಹೊರ ತಂದಿದೆ. ಇದರಿಂದಾಗಿ ಕಳ್ಳ ಕದ್ದು Switch Off ಮಾಡಿದರೂ ನಿಮ್ಮ ಆಂಡ್ರಾಯ್ಡ್ ಫೋನ್ Track ಮಾಡಿ ಅವನನ್ನು ಹಿಡಿಯಬಹುದು. ಈ ಫೀಚರ್ ಪ್ರಸ್ತುತ ಆಂಡ್ರಾಯ್ಡ್ 9 ಮೇಲ್ಪಟ್ಟ ಆವೃತ್ತಿಗಳಲ್ಲಿ ಲಭ್ಯವಾಗಲಿದ್ದು ನಿಮ್ಮ ಹಳೆಯ ಆವೃತ್ತಿಯನ್ನು ಈಗಲೇ ಅಪ್ಡೇಟ್ ಮಾಡಿಕೊಳ್ಳಿ.

ಈ ಹೊಸ ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಮೊದಲಿಗೆ ಈ ಫೀಚರ್ Bluetooth Proximity ಎಂಬ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಸಮೀಪವಿರುವ ಸಾಧನಗಳನ್ನು ಪತ್ತೆಹಚ್ಚುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಅಂದ್ರೆ ಈಗಾಗಲೇ ಐಫೋನ್‌ನಲ್ಲಿರುವ ‘Find My’ ನೆಟ್‌ವರ್ಕ್ ಫೀಚರ್ನಂತೆಯೇ ಕಾರ್ಯನಿರ್ವಹಿಸುತ್ತದೆ.

ಪ್ರಪಂಚದಾದ್ಯಂತದ ಆಂಡ್ರಾಯ್ಡ್ ಬಳಕೆದಾರರ ಜನಪ್ರಿಯತೆಯನ್ನು ಗಮನಿಸಿದರೆ ಗೂಗಲ್‌ನ ನೆಟ್‌ವರ್ಕ್ ಆಪಲ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.

ಕಳೆದುಹೋದ ಅಥವಾ ಸ್ವಿಚ್ ಆಫ್ (Switch Off) ಆಗಿರುವ Pixel 8 ಮತ್ತು Pixel 8 Pro ಮಾಲೀಕರು ತಮ್ಮ ಸಾಧನವನ್ನು ಪತ್ತೆ ಮಾಡಬಹುದೆಂದು ಗೂಗಲ್ ಹೇಳಿಕೊಂಡಿದೆ.

ನೀವು ಸಮೀಪದಲ್ಲಿರುವ ಸಾಧನವನ್ನು ಹುಡುಕುತ್ತಿದ್ದರೆ ಗೂಗಲ್ ಫೈಂಡ್ ಮೈ ಡಿವೈಸ್‌ (Find My Device) ನೀವು ಸಮೀಪಿಸಿದಾಗ ನೆಟ್‌ವರ್ಕ್ ಅಪ್ಲಿಕೇಶನ್‌ನಲ್ಲಿ ಗೋಚರಿಸುವ ಚಿಹ್ನೆಯನ್ನು ತೋರಿಸುತ್ತದೆ.

ಮುಂದಿನ ತಿಂಗಳು ಅಂದ್ರೆ ಮೇ ತಿಂಗಳಿನಿಂದ ಆಂಡ್ರಾಯ್ಡ್ ಬಳಕೆದಾರರು ಕೀಗಳು, ಪೆಬಲ್‌ಬೀ ಜೊತೆಗೆ ಟ್ಯಾಗ್ ಮಾಡಲಾದ ವ್ಯಾಲೆಟ್‌ಗಳು ಮತ್ತು ಚಿಪೋಲೋ ಬ್ಲೂಟೂತ್ ಟ್ರ್ಯಾಕರ್‌ಗಳಂತಹ ವಿಷಯಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ನಿಮಗೊತ್ತಾ ಈ ವರ್ಷದ ನಂತರ Eufy, Jio, Motorola ಮತ್ತು ಇತರ ಸ್ಮಾರ್ಟ್ಫೋನ್ ಕಂಪನಿಗಳು ಹೊಸ Find My Device ನೆಟ್‌ವರ್ಕ್ ಅನ್ನು ಬೆಂಬಲಿಸುವ ತಮ್ಮದೇಯಾದ ಬ್ಲೂಟೂತ್ ಟ್ರ್ಯಾಕರ್‌ಗಳನ್ನು ಸಹ ಪ್ರಾರಂಭಿಸುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo