Elon Musk ಬರೋಬ್ಬರಿ 97 ಶತಕೋಟಿಗೆ OpenAI ಖರೀದಿಸಲು ಸಿದ್ದ! ಆದರೆ X ಅನ್ನೇ ಬೋಣಿಗೆಳೆದ Sam Altman!

HIGHLIGHTS

ಟೆಸ್ಲಾ (Tesla), ಸ್ಪೇಸ್‌ಎಕ್ಸ್ (SpaceX) ಮತ್ತು ಟ್ವಿಟ್ಟರ್ (X) ಕಂಪನಿಯ ಮಾಲೀಕ Elon Musk.

ಜನಪ್ರಿಯ OpenAI ಕಂಪನಿಯ ಮಾಲೀಕರಾಗಿರುವ ಸ್ಯಾಮ್ ಆಲ್ಟ್​ಮ್ಯಾನ್ (Sam Altman).

Elon Musk ಬರೋಬ್ಬರಿ 97 ಶತಕೋಟಿಗೆ OpenAI ಖರೀದಿಸಲು ಸಿದ್ದ ಆದರೆ ಆಫರ್ ತಿರಸ್ಕರಿಸಿದ Sam Altman.

Elon Musk ಬರೋಬ್ಬರಿ 97 ಶತಕೋಟಿಗೆ OpenAI ಖರೀದಿಸಲು ಸಿದ್ದ! ಆದರೆ X ಅನ್ನೇ ಬೋಣಿಗೆಳೆದ Sam Altman!

Elon Musk vs Sam Altman: ಜಗತ್ತಿನ ಜನಪ್ರಿಯ ಮತ್ತು ಶ್ರೀಮಂತ ಬಿಸಿನೆಸ್ ಮೆನ್‌ಗಳ ಪೈಕಿ ಹೆಚ್ಚು ಹೆಸರುವಾಸಿಯಾಗಿರುವ ಟೆಸ್ಲಾ (Tesla), ಸ್ಪೇಸ್‌ಎಕ್ಸ್ (SpaceX) ಮತ್ತು ಟ್ವಿಟ್ಟರ್ (X) ಕಂಪನಿಯ ಮಾಲೀಕರಾಗಿರುವ ಎಲಾನ್ ಮಸ್ಕ (Elon Musk) ಪ್ರಸ್ತುತ ಭಾರಿ ಸುದ್ದಿಯಲ್ಲಿದ್ದಾರೆ. ಕಾರಣವೆಂದರೆ ಜನಪ್ರಿಯ OpenAI ಕಂಪನಿಯ ಮಾಲೀಕರಾಗಿರುವ ಸ್ಯಾಮ್ ಆಲ್ಟ್​ಮ್ಯಾನ್ (Sam Altman) ಅವರಿಗೆ ನೀಡಿದ ಆಫರ್ ಆಗಿದೆ.

Digit.in Survey
✅ Thank you for completing the survey!

Elon Musk vs Sam Altman News

ಇದರ ಮೂಲ ವಿಷಯವೆಂದರೆ Elon Musk ಬರೋಬ್ಬರಿ 97 ಶತಕೋಟಿಗೆ OpenAI ಖರೀದಿಸಲು ಸಿದ್ದರಾಗಿ ಜನಪ್ರಿಯ OpenAI ಕಂಪನಿಯ ಮಾಲೀಕರಾಗಿರುವ ಸ್ಯಾಮ್ ಆಲ್ಟ್​ಮ್ಯಾನ್ (Sam Altman) ಅವರಿಗೆ ಆಫರ್ ನೀಡಿದ್ದಾರೆ ಆದರೆ ಈ ಆಫರ್ ತಿರಸ್ಕರಿಸಿದ Sam Altman ಇದಕ್ಕೆ ವಿರುದ್ಧವಾಗಿ ನಾವು ಟ್ವಿಟ್ಟರ್ ಅನ್ನು 9.74 ಶತಕೋಟಿಗೆ ಖರೀದಿಸಲು ಸಿದ್ಧರಾಗಿದ್ದೇವೆ ನೀವು ಬಿಟ್ಟು ಕೊಡ್ತೀರಾ ಎಂದು ಕೇಳಿದ್ದಾರೆ. ಇದಕ್ಕಾಗಿ ಎಲಾನ್ ಮಸ್ಕ ಕೋಪಗೊಂಡು ನೀನು ಸ್ಯಾಮ್ ಆಲ್ಟ್​ಮ್ಯಾನ್ ಅಲ್ಲ ಸ್ಕ್ಯಾಮ್ ಆಲ್ಟ್​ಮ್ಯಾನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾರಿ ಬಿಟ್ಟಿದ್ದಾರೆ.

Also Read: OnePlus Red Rush Day ಅಡಿಯಲ್ಲಿ ಲೇಟೆಸ್ಟ್ ಸ್ಮಾರ್ಟ್‌ ಪ್ಯಾಡ್‌ಗಳ ಮೇಲೆ 5000 ರೂಗಳ ಡಿಸ್ಕೌಂಟ್ ಲಭ್ಯ!

Sam Altman ಬರೋಬ್ಬರಿ 9.74 ಶತಕೋಟಿಗೆ ಟ್ವಿಟ್ಟರ್ ಖರೀದಿಸಲು ಸಿದ್ಧ

ಸ್ಯಾಮ್ ಆಲ್ಬಮನ್ ಮತ್ತು ಪ್ರಸ್ತುತ ಮಂಡಳಿಯು ಓವನ್‌ಎಐ ಅನ್ನು ಸಂಪೂರ್ಣವಾಗಿ ಲಾಭದ ಕಂಪನಿಯಾಗಬೇಕೆಂದು ಬಯಸಿದರೆ ಅಂತಹ ಅಗಾಧ ತಂತ್ರಜ್ಞಾನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಕ್ಕಾಗಿ ದತ್ತಿ ಸಂಸ್ಥೆಗೆ ಸಮರ್ಪಕವಾಗಿ ಪರಿಹಾರ ನೀಡುವುದು ಅತ್ಯಗತ್ಯ” ಎಂದು ಮಸ್ಕ್ ಅವರ ವಕೀಲ ಮಾರ್ಕ್ ಟೊಬೆರಾಫ್ ಹೇಳಿದರು. ಮಸ್ಕ್ ಅವರ ಕೊಡುಗೆಗೆ ಪ್ರತಿಕ್ರಿಯೆಯಾಗಿ ಆಲ್ಬಮನ್ ನಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ‘ಇಲ್ಲ ಧನ್ಯವಾದಗಳು ಆದರೆ ನೀವು ಆಸಕ್ತಿ ಹೊಂದಿದ್ದರೆ ನಾವು ಟ್ವಿಟರ್ ಅನ್ನು $9.74 ಬಿಲಿಯನ್‌ ಗೆ ಖರೀದಿಸಲು ಸಿದ್ಧರಿದ್ದೇವೆ’ ಎಂದು ಬರೆದಿದ್ದಾರೆ.

ಕಳೆದ ವರ್ಷ ಮಸ್ಕ್ ವಿರುದ್ಧ ಎರಡು ಬಾರಿ ಮೊಕದ್ದಮೆ ಹೂಡಲಾಯಿತು

ಎಲಾನ್ ಮಸ್ಕ ಕಳೆದ ವರ್ಷದ ಎರಡು ಬಾರಿ ಓಪನ್‌ಎಐ (OpenAi) ವಿರುದ್ಧ ಮೊಕದ್ದಮೆ ಹೂಡಿದ ನಂತರ ಈ ಪ್ರಸ್ತಾಪವನ್ನು ಪ್ರಸ್ತಾಪಿಸಿದ್ದಾರೆ. ಜುಲೈ 2024 ರಲ್ಲಿ ಮೊದಲ ಬಾರಿಗೆ ಮತ್ತೊಮ್ಮೆ ಆಗಸ್ಟ್ ತಿಂಗಳಲ್ಲಿ ಎಲಾನ್ ಮಸ್ಕ ಕಂಪನಿಯು ಸ್ಥಾಪನಾ ತತ್ವಗಳಿಂದ ದೂರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ಬದಲಾವಣೆಯು ಓಪನ್‌ಐನ ಕೆಲಸವನ್ನು ಮಾನವೀಯತೆಯ ಹೆಚ್ಚಿನ ಪ್ರಯೋಜನದ ಮೇಲೆ ಕೇಂದ್ರೀಕರಿಸುವ ಬದಲು ಕಾರ್ಪೊರೇಟ್ ಹಿತಾಸಕ್ತಿಗಳಿಂದ ನಿಯಂತ್ರಿಸಲ್ಪಡುವ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಮನ್ಮ ನಂಬುತ್ತಾರೆ. ಈ ಕಾನೂನು ಹೋರಾಟವು ಎಲಾನ್ ಮಸ್ಕ ಅವರ Al ಅನ್ನು ಮುಕ್ತ, ಲಾಭರಹಿತ ಪ್ರಯತ್ನ ಎಂಬ ದೃಷ್ಟಿಕೋನ ಮತ್ತು OpenAl ಬೆಳವಣಿಗೆ ಮತ್ತು ಲಾಭದಾಯಕತೆಯ ಬಯಕೆಯ ನಡುವಿನ ನಡೆಯುತ್ತಿರುವ ಉದ್ವಿಗ್ನತೆಯನ್ನು ಬಹಿರಂಗಪಡಿಸಿತು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo