Call Forwarding News: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏಪ್ರಿಲ್ 15 ರಿಂದ ಈ ಸೇವೆ ಸ್ಥಗಿತ!

Call Forwarding News: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏಪ್ರಿಲ್ 15 ರಿಂದ ಈ ಸೇವೆ ಸ್ಥಗಿತ!
HIGHLIGHTS

ದೂರಸಂಪರ್ಕ ಇಲಾಖೆ (DoT) ಹೊಸ ನಿಯಮದಿಂದ ಆನ್‌ಲೈನ್‌ ವಂಚನೆಗಳಿಗೆ ಬ್ರೇಕ್!

15ನೇ ಏಪ್ರಿಲ್ 2024 ರಿಂದ ಈವರೆಗೆ ಲಭ್ಯವಿರುವ USSD ಆಧಾರಿತ ಕಾಲ್ ಫಾರ್ವರ್ಡ್ (Call Forwarding) ಸ್ಥಗಿತ

ಇದಕ್ಕೆ ಪರಿಹಾರವಾಗಿ ಬೇರೆ ಮಾರ್ಗವನ್ನು ಆದಷ್ಟು ಬೇಗ ಸೂಚಿಸುವಂತೆ DoT ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ.

ಭಾರತದಲ್ಲಿ ದೂರಸಂಪರ್ಕ ಇಲಾಖೆ (Department of Telecommunications) ಆನ್‌ಲೈನ್‌ ಮೂಲಕ ನಡೆಯುತ್ತಿರುವ ವಂಚನೆಗಳಿಗೆ ಬ್ರೇಕ್ ಹಾಕಲು ಇದೆ 15ನೇ ಏಪ್ರಿಲ್ 2024 ರಿಂದ ಈವರೆಗೆ ಲಭ್ಯವಿರುವ USSD ಆಧಾರಿತ ಕಾಲ್ ಫಾರ್ವರ್ಡ್ (Call Forwarding) ಅನ್ನು ನಿಲ್ಲಿಸುವಂತೆ ದೇಶದ ಎಲ್ಲ ಟೆಲಿಕಾಂ ಕಂಪನಿಗಳಿಗೆ ಆದೇಶವನ್ನು ನೀಡಿದ್ದು ಮುಂದಿನ ಆದೇಶದವರೆಗೆ ಇದನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಮೂಲಕ ನೀವು ಯಾವುದೇ 2G, 3G, 4G ಅಥವಾ 5G ಸೇವೆಗಳನ್ನು ಬಳಸುತ್ತಿದ್ದರೂ ಈ ಸೇವೆ 15ನೇ ಏಪ್ರಿಲ್‍ನಿಂದ ಸ್ಥಗಿತಗೊಳ್ಳಲಿದೆ. ಇದಕ್ಕೆ ಪರಿಹಾರವಾಗಿ ಬೇರೆ ಮಾರ್ಗವನ್ನು ಆದಷ್ಟು ಬೇಗ ಸೂಚಿಸುವಂತೆ DoT ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ.

USSD ಆಧಾರಿತ ಕಾಲ್ ಫಾರ್ವರ್ಡ್ (Call Forwarding) ಸ್ಥಗಿತ

ದೂರಸಂಪರ್ಕ ಇಲಾಖೆ (DoT) USSD ಕೋಡ್‌ಗಳನ್ನು ಬಳಸಿಕೊಂಡು ಕಾಲ್ ಫಾರ್ವರ್ಡ್ ಮಾಡುವಿಕೆಯನ್ನು ಆಕ್ಟಿವೇಟ್ ಮಾಡಲು ಸಾಮರ್ಥ್ಯವನ್ನು ಅಮಾನತುಗೊಳಿಸುವಂತೆ ಟೆಲಿಕಾಂಗಳಿಗೆ ಕೇಳುವ ಆದೇಶವನ್ನು ಬಿಡುಗಡೆ ಮಾಡಿದೆ. USSD ಕೋಡ್‌ಗಳನ್ನು ಸಾಮಾನ್ಯವಾಗಿ ಫೋನ್‌ನ IMEI ಸಂಖ್ಯೆಯನ್ನು ಪರಿಶೀಲಿಸಲು ಮತ್ತು ಇತರ ಕೆಲಸಗಳನ್ನು ಮಾಡಲು ಬಳಸಲಾಗುತ್ತದೆ. ಪ್ರಸ್ತುತ *401# ಎಂಬ USSD ಕೋಡ್ ಅನ್ನು ಡಯಲ್ ಮಾಡುವ ಮೂಲಕ ಭಾರತದಲ್ಲಿ ಕಾಲ್ ಫಾರ್ವರ್ಡ್ ಮಾಡುವಿಕೆಯನ್ನು ಆಕ್ಟಿವೇಟ್ ಮಾಡಬಹುದು. ಆದರೆ ಈಗ ಈ ಜನಪ್ರಿಯ ಮತ್ತು ಅತಿದೊಡ್ಡ ಸೇವೆ ಇದೇ 15ನೇ ಏಪ್ರಿಲ್ 2024 ರಿಂದ ಈವರೆಗೆ ಲಭ್ಯವಿರುವ USSD ಆಧಾರಿತ ಕಾಲ್ ಫಾರ್ವರ್ಡ್ (Call Forwarding) ಸ್ಥಗಿತಗೊಳ್ಳಲಿದೆ.

DoT suspends call forwarding feature in India
DoT suspends call forwarding feature in India

Also Read: ಇನ್ಮೇಲೆ ಸಾಲುಗಳಲ್ಲಿ ನಿಲ್ಲದೆ ಫೋನ್‌ನಿಂದಲೇ IRCTC ಟ್ರೈನ್ ಟಿಕೆಟ್ ರದ್ದುಗೊಳಿಸಿ! ಪೂರ್ತಿ ಹಣ ವಾಪಾಸ್ ಬರುತ್ತೆ!

ಈ USSD ಆಧಾರಿತ ಕಾಲ್ ಫಾರ್ವರ್ಡ್ (Call Forwarding) ಸ್ಥಗಿತಗೊಳಿಸಲು ಕಾರಣ

ದಿನಗಳಲ್ಲಿ ನೀವು ನೋಡುತ್ತಿರುವಂತೆ ಪೇಪರ್ ಅಥವಾ ನ್ಯೂಸ್ಗಳಲ್ಲಿ ಆನ್‌ಲೈನ್‌ ವಂಚನೆ ಅಧಿಕವಾಗಿರುವುದನ್ನು ನೀವು ಕೇಳಿರಬಹುದು. ಸೈಬರ್ ಕ್ರೈಂ ವರದಿಯ ಪ್ರಕಾರ ಸಿಮ್ ಸ್ವಾಪ್ ಮತ್ತು ಕಾಲ್ ಫಾರ್ವರ್ಡ್ (Call Forwarding) ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆಯನ್ನು ಮುಂದಿಟ್ಟಿದೆ. ಸಾಮಾನ್ಯ ಭಾಷೆಯಲ್ಲಿ ವಂಚಕರು ಭಾರತದಲ್ಲಿ ನಿಮಗೆ ಅರಿವಿಲ್ಲದೆ ಆನ್‌ಲೈನ್‌ ವಂಚನೆ ಮಾಡಲು ಬಳಸಿಕೊಳ್ಳುತ್ತಿದ್ದಾರಂತೆ.

ಅದಕ್ಕೆ ಬ್ರೇಕ್ ಹಾಕಲು USSD ಮೂಲಕ ಮಾಡುವ ಕಾಲ್ ಫಾರ್ವರ್ಡ್ (Call Forwarding) ಫೀಚರ್ ಅನ್ನು ಅಮಾನತುಗೊಳಿಸುವಂತೆ ಟೆಲಿಕಾಂಗಳಿಗೆ DoT ಹೇಳಿದೆ. ಅಲ್ಲದೆ ಇದು ತಾತ್ಕಾಲಿಕ ಆದೇಶವಾಗಿದೆ ಎಂಬುದನ್ನು ಗಮನಿಸಬೇಕಿದ್ದು ಯಾವುದೇ ದಿನ ಸರ್ಕಾರವು ಈ ಸೇವೆಯನ್ನು ಬೇರೆ ಮಾದರಿಯಲ್ಲಿ ಹಿಂತಿರುಗಿಸಬಹುದು. ಅಂದ್ರೆ ಇದಕ್ಕೆ ಪರಿಹಾರವಾಗಿ ಬೇರೆ ಮಾರ್ಗವನ್ನು ಆದಷ್ಟು ಬೇಗ ಸೂಚಿಸುವಂತೆ DoT ಟೆಲಿಕಾಂ ಕಂಪನಿಗಳಿಗೆ ತಿಳಿಸಿದೆ.

DoT suspends call forwarding feature in India
DoT suspends call forwarding feature in India

ಈಗಾಗಲೇ USSD ಕಾಲ್ ಫಾರ್ವರ್ಡ್ ಹೊಂದಿರುವ ಬಳಕೆದಾರರು!

ಇದರರ್ಥ 15ನೇ ಏಪ್ರಿಲ್ 2024 ರಿಂದ ಗ್ರಾಹಕರು USSD ಮೂಲಕ ಕಾಲ್ ಫಾರ್ವರ್ಡ್ ಮಾಡುವಿಕೆಯನ್ನು ಆಕ್ಟಿವೇಟ್ ಮಾಡಲು ಸಾಧ್ಯವಾಗುವುದಿಲ್ಲ . ಇದಲ್ಲದೆ USSD ಮೂಲಕ ಕಾಲ್ ಫಾರ್ವರ್ಡ್ ಮಾಡುವಿಕೆಯನ್ನು ಆಕ್ಟಿವೇಟ್ ಮಾಡಿದ ಗ್ರಾಹಕರು ಪರ್ಯಾಯ ವಿಧಾನಗಳ ಮೂಲಕ ಪುನಃ ಆಕ್ಟಿವೇಟ್ ಮಾಡಲು ಕೇಳಲಾಗುತ್ತದೆ. USSD ಆಧಾರಿತ ಕಾಲ್ ಫಾರ್ವರ್ಡ್ ಮಾಡುವ ಸೇವೆಯನ್ನು ಆಕ್ಟಿವೇಟ್ ಮಾಡಿರುವ ಎಲ್ಲಾ ಅಸ್ತಿತ್ವದಲ್ಲಿರುವ ಚಂದಾದಾರರು ತಮ್ಮ ಸೂಚನೆಯಿಲ್ಲದೆ ಅಂತಹ ಸೇವೆಗಳನ್ನು ಆಕ್ಟಿವೇಟ್ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪರ್ಯಾಯ ವಿಧಾನಗಳ ಮೂಲಕ ಕಾಲ್ ಫಾರ್ವರ್ಡ್ ಮಾಡುವ ಸೇವೆಗಳನ್ನು ಪುನಃ ಆಕ್ಟಿವೇಟ್ ಮಾಡಲು ಕೇಳಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo