Amazon Great Republic Day Sale 2025: ಭಾರತದಲ್ಲಿ ಪ್ರಸಿದ್ಧ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಹೊಸ ವರ್ಷದಲ್ಲಿ ತನ್ನ ಮೊದಲ ಅದ್ದೂರಿಯ ಮಾರಾಟದ ಡೇಟ್ ಮುಂಬರುವ ವಾರಗಳಲ್ಲಿ ಖಚಿತಪಡಿಸಿದೆ. ಈ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Republic Sale 2025) ಅನ್ನು ಇದೆ 13ನೇ ಜನವರಿ 2025 ರಿಂದ ಪ್ರಾರಂಭವಾಗಲಿದೆ. ಅಲ್ಲದೆ ಈ ಸೇಲ್ ಸುಮಾರು ಒಂದು ವಾರ ಅಂದರೆ 19ನೇ ಜನವರಿವರೆಗೆ ಮುಂದುವರಿಯುವ ಸಾಧ್ಯತೆಯಿದೆ ಯಾಕೆಂದರೆ ಕೊನೆ ದಿನವನ್ನು ಇನ್ನೂ ದೃಢಪಡಿಸಿಲ್ಲ. ಈ ಅಮೆಜಾನ್ ಸೇಲ್‌ನಲ್ಲಿ ನೀವು ನಿಮ್ಮ ನೆಚ್ಚಿನ ಬಟ್ಟೆಗಳು, ಎಲೆಕ್ಟ್ರಾನಿಕ್ ಸ್ಮಾರ್ಟ್ ಡಿವೈಸ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಮೊಬೈಲ್ ಫೋನ್‌ಗಳನ್ನು ಖರೀದಿಸಬಹುದು.
Survey
✅ Thank you for completing the survey!
ಮೊದಲು ಅಮೆಜಾನ್ ಪ್ರೈಮ್ ಸದಸ್ಯರಿಗೆ (Prime Members) ಎಂಟ್ರಿ!
ಇದರಲ್ಲಿ ಜಬರದಸ್ತ್ ಆಫರ್‌ಗಳು ಮೊದಲು ಅಮೆಜಾನ್ ಪ್ರೈಮ್ ಸದಸ್ಯರಿಗೆ ಒಂದು ದಿನದ ಮುಂಚೆ 12ನೇ ಜನವರಿ 2025 ರಂದು ರಾತ್ರಿ 12:00am ಗಂಟೆಯಿಂದ ಎಂಟ್ರಿ ಲಭ್ಯವಿರುತ್ತದೆ. ನಂತರ ಜನಸಾಮಾನ್ಯರಿಗೆ ಈ ಮಾರಾಟವು (Amazon Republic Sale) ಲಭ್ಯವಾಗಲಿದೆ. ಅಮೆಜಾನ್ ಮಾರಾಟದ ಭಾಗವಾಗಿ SBI ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ಖರೀದಿಗಳೊಂದಿಗೆ ಖರೀದಿಗೆ ಶೇಕಡಾ 10% ರಷ್ಟು ರಿಯಾಯಿತಿಯನ್ನು ಸಹ ನೀಡುತ್ತಿದೆ.
ಅಮೆಜಾನ್ ರಿಪಬ್ಲಿಕ್ ಸೇಲ್ (Amazon Republic Sale 2025) ಆಫರ್ಗಳೇನು?
ಅಮೆಜಾನ್ ಈಗಾಗಲೇ ಮೈಕ್ರೋಸೈಟ್ ಅನ್ನು ಮಾರಾಟಕ್ಕೆ ಸಿದ್ಧಪಡಿಸಿದೆ. ಇದು ಕೆಲವು ಕೊಡುಗೆಗಳನ್ನು ಪ್ರಸ್ತುತಪಡಿಸಿತು. ಮುಖ್ಯವಾಗಿ ಈ ಸ್ಮಾರ್ಟ್‌ಫೋನ್‌ಗಳಿಗೆ Apple, OnePlus, Samsung, Realme Redmi ಮೊಬೈಲ್‌ಗಳಲ್ಲಿ ಡೀಲ್‌ಗಳು ನಡೆಯಲಿವೆ. ಅಲ್ಲದೆ ಅಮೆಜಾನ್ ಈ ಲೇಟೆಸ್ಟ್ OnePlus Nord4, CE4 ಮತ್ತು Nord CEd Litc ಫೋನ್‌ಗಳಲ್ಲಿ ಆಫರ್‌ಗಳು ಇರಲಿವೆ ಆದರೆ ಎಷ್ಟು ರಿಯಾಯಿತಿ ನೀಡಲಾಗುವುದು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಅಲ್ಲದೆ ನೆನ್ನೆ ಅಷ್ಟೇ ಬಿಡುಗಡೆಯಾದ OnePlus 13 ಮತ್ತು OnePlus 13R ಫೋನ್‌ಗಳ ಮೇಲೂ ಸಹ ಉತ್ತಮ ರಿಯಾಯಿತಿಯನ್ನು ಪಡೆಯಲಿದೆ.
Amazon Republic Sale Starting From 13 Jan 2025
ಅಮೆಜಾನ್ ಸ್ಮಾರ್ಟ್ ಡಿವೈಸ್ಗಳ ಮೇಲೆ ಭಾರಿ ಡಿಸ್ಕೌಂಟ್ ಲಭ್ಯ:
ಈ ಅಮೆಜಾನ್ ಸೇಲ್‌ನಲ್ಲಿ ಅಲೆಕ್ಸಾ ಮತ್ತು ಫೈರ್ ಟಿವಿ ಸಾಧನಗಳಲ್ಲಿ ಬೆಸ್ಟ್ ರಿಯಾಯಿತಿಯನ್ನು ನಿರೀಕ್ಷಿಯಬಹುದು. ಅಲ್ಲದೆ Stick Lite ಕೇವಲ 2599 ರೂಗಳಿಗೆ ಮತ್ತು Echo Pop ಕೇವಲ 3949 ರೂಗಳಿಗೆ ಮತ್ತು ಎಕೋ ಫೋರ್ಸ್ ಜನರೇಷನ್ ರೂ.7,549ಕ್ಕೆ ಮಾರಾಟವಾಗಲಿದೆ. ಸ್ಮಾರ್ಟ್ ಟಿವಿಗಳು, ಪ್ರೊಜೆಕ್ಟರ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಪರಿಕರಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ ಕೊಡುಗೆಗಳಿವೆ. ಅಲ್ಲದೆ ಈ ಆಫರ್‌ಗಳ ವಿವರಗಳನ್ನು ಮಾರಾಟಕ್ಕೆ ಕೆಲವು ದಿನಗಳ ಮೊದಲು ಬಹಿರಂಗಪಡಿಸಲಾಗುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile