ನೀವು ಸಹ ಈ ಸರಳವಾದ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದರೇ ತಕ್ಷಣವೇ ಬದಲಾಯಿಸಿಕೊಳ್ಳಿ!

ನೀವು ಸಹ ಈ ಸರಳವಾದ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದರೇ ತಕ್ಷಣವೇ ಬದಲಾಯಿಸಿಕೊಳ್ಳಿ!
HIGHLIGHTS

ಭಾರತದಲ್ಲಿ ಪಾಸ್ವರ್ಡ್ (Password) ಎಂಬುದನ್ನು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ.

ಭಾರತದಲ್ಲಿ ಪಾಸ್ವರ್ಡ್ (Password) ಎಂಬುದನ್ನು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ.

ಈ ಬಗ್ಗೆ ಭದ್ರತಾ ಪರಿಹಾರಗಳ ಕಂಪನಿ ನಾರ್ಡ್‌ಪಾಸ್‌ (NordPass) ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಮತ್ತೆ ಅದೇ ತಪ್ಪುಗಳನ್ನು ಅನೇಕರು ಮಾಡುತ್ತಿದ್ದಾರೆ.

ಭಾರತದಲ್ಲಿ ಪಾಸ್ವರ್ಡ್ (Password) ಎಂಬುದನ್ನು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ. ಪದೇ ಪದೇ ಬದಲಾಯಿಸುತ್ತಿರುವುದು, ನಿಮ್ಮದೇ ಹೆಸರಿನ ಪಾಸ್ವರ್ಡ್ ಬಳಕೆ ಮಾಡುವುದು ಅಥವಾ ನಿಮ್ಮ ಜನ್ಮ ದಿನಾಂಕವನ್ನು ಪಾಸ್ವರ್ಡ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದುರ್ಬಲ, ಮರುಬಳಕೆ ಅಥವಾ ಸ್ಪಷ್ಟವಾಗಿ ಕೆಟ್ಟ ಪಾಸ್ವವರ್ಡ್​ಗಳಿಂದ ಹ್ಯಾಕರ್‌ಗಳು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಭೇದಿಸುತ್ತಿದ್ದಾರೆ. ಈ ಬಗ್ಗೆ ಭದ್ರತಾ ಪರಿಹಾರಗಳ ಕಂಪನಿ ನಾರ್ಡ್‌ಪಾಸ್‌ (NordPass) ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಮತ್ತೆ ಅದೇ ತಪ್ಪುಗಳನ್ನು ಅನೇಕರು ಮಾಡುತ್ತಿದ್ದಾರೆ.

ಇದೀಗ ಬಹುತೇಕ ಜನರ ಪಾಸ್‌ವರ್ಡ್‌ಗಳು ಅತ್ಯಂತ ಸಾಮಾನ್ಯ ಆಗಿರುವ ಬಗ್ಗೆ ನಾರ್ಡ್‌ಪಾಸ್‌ ವರದಿ ಮಾಡಿದೆ. ತನ್ನ ವಾರ್ಷಿಕ ‘ಟಾಪ್ 200 ಅತ್ಯಂತ ಸಾಮಾನ್ಯ ಪಾಸ್‌ವರ್ಡ್‌ಗಳ’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಹ್ಯಾಕರ್‌ಗಳು ಮತ್ತು ಸೈಬರ್ ಅಪರಾಧಿಗಳು ನಿಮಿಷಗಳಲ್ಲಿ ಭೇದಿಸಲು ಸಾಧ್ಯವಾಗುವ ಅತ್ಯಂತ ಸರಳ ಪಾಸ್‌ವರ್ಡ್‌ಗಳನ್ನು ಹೆಸರಿಸುತ್ತದೆ. ಸೈಬರ್‌ ಭದ್ರತೆಗೆ ಸಂಬಂಧಿಸಿದ ಘಟನೆಗಳ ಮೇಲೆ ಅಧ್ಯಯನ ನಡೆಸುವ ಸ್ವತಂತ್ರ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ನಾರ್ಡ್‌ಪಾಸ್ ಈ ಪಟ್ಟಿ ಸಿದ್ಧಪಡಿಸಿದೆ. ವಾಸ್ತವವಾಗಿ ಹಲವು ಸೆಕೆಂಡುಗಳಲ್ಲಿ. ನಿರ್ದಿಷ್ಟ ಪಾಸ್‌ವರ್ಡ್ ಅನ್ನು ಎಷ್ಟು ಬಾರಿ ಬಳಸಲಾಗಿದೆ ಮತ್ತು ಅದನ್ನು ಭೇದಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಪಟ್ಟಿ ವಿವರಿಸುತ್ತದೆ.

ಸಾಮಾನ್ಯ ಪಾಸ್ವರ್ಡ್ (Common Passwords)

ಅಭಿಷೇಕ್- ಆದಿತ್ಯ – ಆಶಿಷ್ – ಅಂಜಲಿ- ಅರ್ಚನಾ – ಅನುರಾಧಾ – ದೀಪಕ್ – ದಿನೇಶ್- ಗಣೇಶ್- ಗೌರವ್- ಗಾಯತ್ರಿ- ಹನುಮಾನ್- ಹರಿಓಂ- ಹರ್ಷ- ಕೃಷ್ಣ- ಖುಷಿ- ಕಾರ್ತಿಕ್-  ಲಕ್ಷ್ಮಿ- ಸುಂದರ- ಮನೀಶ್- ಮನಿಷಾ- ಮಹೇಶ್- ನವೀನ್- ನಿಖಿಲ್- ಪ್ರಿಯಾಂಕಾ- ಪ್ರಕಾಶ್- ಪೂನಂ- ಪ್ರಶಾಂತ್- ಪ್ರಸಾದ್- ಪಂಕಜ್- ಪ್ರದೀಪ್- ಪ್ರವೀಣ್- ರಶ್ಮಿ- ರಾಹುಲ್- ರಾಜಕುಮಾರ್- ರಾಕೇಶ್- ರಮೇಶ್ 

ಇದಿಷ್ಟೇ ಅಲ್ಲದೆ ಇನ್ನೂ ಅನೇಕ ಹೆಸರುಗಳು ಈ ಪಟ್ಟಿಯಲ್ಲಿದೆ. ಕಳೆದ ವರ್ಷ ವರ್ಷದಪಟ್ಟಿಯಲ್ಲಿ “123456” ಮತ್ತು “password” ನಂತಹ ಒಂದೇ ರೀತಿಯ ಪಾಸ್ವರ್ಡ್​ಗಳು ಹೆಚ್ಚು ಬಳಕೆಯಾಗಿದ್ದವು. ಹೆಚ್ಚಿನ ಜನರ ಪಾಸ್ವರ್ಡ್ಗಳನ್ನು 24 ಗುಂಪುಗಳಾಗಿ ವಿಂಗಡಿಸಬಹುದು. ಹಾಗೆ, ಶೇ. 49 ರಷ್ಟು ಬಳಕೆದಾರರು ತಮ್ಮ ಪಾಸ್ವರ್ಡ್​ಗಳನ್ನು ಬದಲಾಯಿಸಲು ಅಗತ್ಯವಿದ್ದಾಗ ಕೇವಲ ಒಂದು ಅಕ್ಷರ ಅಥವಾ ಅಂಕಿಗಳನ್ನು ತಮ್ಮ ಆದ್ಯತೆಯ ಪಾಸ್ವರ್ಡ್​ಗಳಲ್ಲಿ ಬದಲಾಯಿಸುತ್ತಾರಂತೆ ಸದ್ಯ ನಾರ್ಡ್‌ಪಾಸ್‌ ಹೆಸರಿಸಿರುವ ಸಾಮಾನ್ಯ ಪಾಸ್‌ವರ್ಡ್‌ಗಳು ಯಾವುವು ಎನ್ನುವುದನ್ನು ನೋಡೋಣ. ಆದರೆ, ಈ ರೀತಿ ದುರ್ಬಲ ಪಾಸ್‌ವರ್ಡ್‌ ನೀವು ಇಟ್ಟಿದ್ದರೆ, ಕೂಡಲೇ ಕಠಿಣ ಪಾಸ್‌ವರ್ಡ್‌ಗೆ ಬದಲಾಯಿಸುವುದು ಉತ್ತಮ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo