Chhaava OTT Release: ‘ಸಂಗುಳ್ಳಿ ರಾಯಣ್ಣ’ ಸಿನಿಮಾದಂತಿರೋ ‘ಛಾವ’ ನೆಟ್‌ಫ್ಲಿಕ್ಸ್‌ನಲ್ಲಿ ಯಾವಾಗ ಸ್ಟ್ರೀಮಿಂಗ್?
ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅಭಿನಯದ 'ಛಾವ (Chhaava)' ಸಿನಿಮಾ
ಈ ಹೊಸ 'ಛಾವ (Chhaava)' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ (in Netflix) ಸ್ಟೀಮ್ ಆಗಲಿದೆ.
'ಛಾವ (Chhaava)' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟೀಮ್ ಡೇಟ್ ಮಾತ್ರ ಇನ್ನೂ ಕಂಫಾರ್ಮ್ ಆಗಿಲ್ಲ.
Chhaava OTT Release: ಮೃತ್ಯುಂಜಯ್ಕಾರ್ (Mrutyunjaykaar) ಎಂದು ಕರೆಯಲ್ಪಡುವ ಭಾರತೀಯ ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ (Shivaji Sawant) ಅವರ ಸ್ಪರ್ತಿಯ ಕಾದಂಬರಿಯಿಂದ ತಯಾರಿಸಲ್ಪಟ್ಟಿರುವ ಈ ಛಾವ (Chhaava) ಹಿಂದಿ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅಭಿನಯದೊಂದಿಗೆ 14ನೇ ಫೆಬ್ರವರಿಯಂದು ಅದ್ದೂರಿಯಾಗಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಈ ‘ಛಾವ (Chhaava)’ ಸಿನಿಮಾದಲ್ಲಿ ಮರಾಠರ ಮಹಾರಾಜನಾ ಮತ್ತು ಛತ್ರಪತಿ ಶಿವಾಜಿಯ ಹಿರಿಯ ಮಗನಾಗಿದ್ದ ಛತ್ರಪತಿ ಸಂಬಾಜಿಯ (Sambhaji / Shambhuraje) ಜೀವನಚರಿತ್ರೆಯನ್ನು ಕುರಿತಾಗಿ ವಿವರಿಸಲಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅಭಿನಯದ ‘Chhaava’
‘ಛಾವ (Chhaava)’ ಸಿನಿಮಾದಲ್ಲಿ ನಿಮಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಕ್ಕಿ ಕೌಶಲ್ (Vicky Kaushal) ಅನ್ನು ಮುಖ್ಯ ಮಾತ್ರಗಳಲ್ಲಿ ಕಾಣಬಹುದು. ಅಲ್ಲದೆ ಸಿನಿಮಾದಲ್ಲಿ ಮತ್ತಷ್ಟು ಉತ್ಸಹವನ್ನು ಹೆಚ್ಚಿಸಲು ಅಕ್ಷಯ್ ಕನ್ನ ಅವರ ಪಾತ್ರವು ಹೆಚ್ಚು ಇಂಟಸ್ಟಿಂಗ್ ಅಂದ್ರೆ ತಪ್ಪಿಲ್ಲ ಬಿಡಿ. ಛತ್ರಪತಿ ಸಾಂಬಾಜಿ ಮಹಾರಾಜನ ಪಾತ್ರದಲ್ಲಿ ವಿಕ್ಕಿ ಕೌಶಲ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಹಾಗೇ ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಗೆ (Akshaye Khanna) ಹೆಚ್ಚಿನ ಮಾರ್ಕ್ಸ್ ಕೊಟ್ಟಿದ್ದಾರೆ. ಸಾಂಬಾಜಿ ಪತ್ನಿಯಾಗಿ ರಶ್ಮಿಕಾ ಮಂದಣ್ಣ ಕೂಡ ಜನರ ಮನಗೆದಿದ್ದಾರೆ.
ಈ ‘ಛಾವ (Chhaava)’ ಸಿನಿಮಾವನ್ನು ಪ್ರಸ್ತುತ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಳಿಸಿದೆ. ಅಲ್ಲದೆ ಈವರೆಗೆ ‘ಛಾವ (Chhaava)’ ಸಿನಿಮಾದ ಬಗ್ಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮವಾಗಿರುವುದು ಬಾಲಿವುಡ್ ಸಿನಿ ಪ್ರಕ್ಷಕರಿಗೆ ಸಂತಸ ನೀಡುತ್ತಿದೆ. ಅಲ್ಲದೆ ಛಾವಾ’ ಮೊದಲ ದಿನವೇ ಉತ್ತಮ ಕಲೆಕ್ಷನ್ ಮಾಡಿತ್ತು. ಇದು ವಿಕ್ಕಿ ಕೌಶಲ್ ಸಿನಿಮಾ ವೃತ್ತಿ ಬದುಕಿನಲ್ಲೇ ಈವರೆಗೆ ಅತ್ಯುತ್ತಮ ಓಪನಿಂಗ್ ಪಡೆದುಕೊಂಡ ಸಿನಿಮಾವಾಗಿದೆ. ಯಾಕೆಂದರೆ ಇಂತಹ ಇತಿಹಾಸದ ಆಧಾರಿತ ಸಿನಿಮಾಗಳು ಉತ್ತಮವಾಗಿ ನಡೆಯೋದು ತುಂಬ ಕಡಿಮೆ ಅಂದ್ರೆ ತಪ್ಪಿಲ್ಲ.
Also Read: Max OTT Release: ಕನ್ನಡದ ಸೂಪರ್ ಹಿಟ್ ಮ್ಯಾಕ್ಸ್ (Max) ಸಿನಿಮಾ ಜೀ ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ!
When is ‘Chhaava’ OTT Release:
ಪ್ರಸ್ತುತ ಈ ಸಿನಿಮಾ ಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೂ ಸಮಯವಿಲ್ಲದೆ ಅನೇಕ ಕಾರಣಗಳಿಂದ ಈ ಸಿನಿಮಾವನ್ನು ವೀಕ್ಷಿಸಲು ಸಮಯವಿಲ್ಲದವರಿಗೆ ಮನೆಯಲ್ಲೇ ಕುಳಿತು ಫ್ಯಾಮಿಲಿಯೊಂದಿಗೆ ಆನಂದಿಸಲು ‘ಛಾವ (Chhaava)’ ಸಿನಿಮಾ OTT ಪ್ಲಾಟ್ಫಾರ್ಮ್ಗೆ ಕಾಲಿಡಲಿದೆ. OTTPlay ವರದಿಗಳ ಪ್ರಕಾರ ಇದರ ಬಗ್ಗೆ ಈಗಾಗಲೇ ಮಾಹಿತಿಯನ್ನು ನೀಡಿದ್ದು ನೆಟ್‌ಫ್ಲಿಕ್ಸ್ (Netflix) ಈ ಸಿನಿಮಾದ ರೈಟ್ಸ್ ಖರೀದಿಸಿದೆಯಂತೆ. ಅಲ್ಲದೆ ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಸಹ ನೀಡಿದ್ದು ‘ಛಾವ (Chhaava)’ ಸಿನಿಮಾ ಬಿಡುಗಡೆಯಾದ 45 ರಿಂದ 60 ದಿನಗಳ ನಂತರ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವುದಾಗಿ ನಿರೀಕ್ಷಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile