TikTok India ಮತ್ತೇ ಶುರುವಾಗಲಿದೆಯೇ? 5 ವರ್ಷದ ನಂತರ ಟಿಕ್‌ ಟಾಕ್‌ ವೆಬ್‌ಸೈಟ್ ತೆರೆಯುತ್ತಿದೆ!

HIGHLIGHTS

ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಟಿಕ್‌ ಟಾಕ್‌ (TikTok) ಮತ್ತೇ ಭಾರತಕ್ಕೆ ಬರಲಿದೆಯೇ?

ಭಾರತದಲ್ಲಿ 5 ವರ್ಷಗಳ ಹಿಂದೆ ಬಂದ್ ಆಗಿದ್ದ ಟಿಕ್‌ ಟಾಕ್‌ ವೆಬ್‌ಸೈಟ್ ಈಗ ತೆರೆಯುತ್ತಿದೆ.

ಆದರೆ ಟಿಕ್‌ಟಾಕ್ ಅಥವಾ ಭಾರತ ಸರ್ಕಾರ ಇದರ ಯಾವುದೇ ಅಧಿಕೃತ ಮಾಹಿತಿಯನ್ನು ದೃಢೀಕರಿಸಿಲ್ಲ.

TikTok India ಮತ್ತೇ ಶುರುವಾಗಲಿದೆಯೇ? 5 ವರ್ಷದ ನಂತರ ಟಿಕ್‌ ಟಾಕ್‌ ವೆಬ್‌ಸೈಟ್ ತೆರೆಯುತ್ತಿದೆ!

TikTok India: ಜನಪ್ರಿಯ ಮತ್ತು ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಟಿಕ್‌ ಟಾಕ್‌ (TikTok) ಮತ್ತೇ ಭಾರತಕ್ಕೆ ಬರಲಿದೆಯೇ ಎನ್ನುವ ಸುದ್ದಿ ಇಂದು ಇಂಟೆರ್ನೆಟ್ ದುನಿಯಾದಲ್ಲಿ ವೇಗವಾಗಿ ಹರಿದಾಡುತ್ತಿದೆ. ಇದಕ್ಕೆ ಉತ್ತರ ನೋಡುವುದಾದರೆ ಪ್ರಸ್ತುತ ಇದರ ಬಗ್ಗೆ ಟಿಕ್‌ಟಾಕ್ ಯಾವುದೇ ಅಧಿಕೃತವಾಗಿ ಮಾಹಿತಿ ನೀಡಲ್ಲ. ಆದರೆ ಭಾರತದಲ್ಲಿ 5 ವರ್ಷಗಳ ಹಿಂದೆ ಬಂದ್ ಆಗಿದ್ದ ಟಿಕ್‌ ಟಾಕ್‌ ವೆಬ್‌ಸೈಟ್ ಈಗ ತೆರೆಯುತ್ತಿದೆ. ಇದರಿಂದ ಅನೇಕ ಜನರು ಇದರ ಬಗ್ಗೆ ಹೆಚ್ಚು ಕುತೂಹಲ ತೋರಿ ಸರ್ಚ್ ಮಾಡಿ ಹುಡುಕಾಡುತ್ತಿದ್ದರೆ.

Digit.in Survey
✅ Thank you for completing the survey!

TikTok India ಭಾರತಕ್ಕೆ ಮತ್ತೇ ಬರಲಿದೆಯೇ?

ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್ ಮತ್ತು ಆಪ್ ಸ್ಟೋರ್ಗಳಲ್ಲಿ ಲಭ್ಯವಿಲ್ಲ ಪ್ರಸ್ತುತ ಕೇವಲ ವೆಬ್‌ಸೈಟ್ ಪೇಜ್ ಮಾತ್ರ ತೆರೆಯುತ್ತಿರುವುದು ಜನರಲ್ಲಿ ಕುತೂಹಲ ಕೆರಳಿಸಿದೆ. ಆದರೆ ಭಾರತಕ್ಕೆ ಈ ಅಪ್ಲಿಕೇಶನ್ ಪ್ರಸ್ತುತ ಹಿಂತಿರುಗುತ್ತಿಲ್ಲ ಯಾಕೆಂದರೆ ರಾಷ್ಟ್ರೀಯ ಭದ್ರತೆ ಮತ್ತು ಡೇಟಾ ಗೌಪ್ಯತೆಯ ಕಾಳಜಿಯಿಂದಾಗಿ (Section 69A of the Information Technology Act, 2000) ಇದನ್ನು ನಿಷೇಧಿಸಲಾಗಿದೆ.

Is TikTok coming back to india

ವೆಬ್‌ನಲ್ಲಿ ಕೆಲವು ಬಳಕೆದಾರರಿಗೆ ಇತ್ತೀಚಿನ ಪ್ರವೇಶವು ಮರಳುವಿಕೆಯ ವದಂತಿಗಳನ್ನು ಹುಟ್ಟುಹಾಕಿದ್ದರೂ ಸಹ ಬೈಟ್‌ಡ್ಯಾನ್ಸ್ (ByteDance) ಚೀನೀ ಒಡೆತನದ ಈ ಅಪ್ಲಿಕೇಶನ್ 29ನೇ ಜೂನ್ 2020 ರಲ್ಲಿ ನಿಷೇಧಿಸಲಾಗಿತ್ತು ಆದರೆ ಇತ್ತೀಚೆಗೆ ವೆಬ್‌ಸೈಟ್ ಪ್ರವೇಶ ನಿಡುತ್ತಿರುವುದು ಜನರ ತಲೆಗೆ ಹುಳ ಬಿಟ್ಟಂತಾಗಿದೆ. ಆದರೆ ಇದರ ಬಗ್ಗೆ ಟಿಕ್‌ಟಾಕ್ ಕಂಪನಿಯಾಗಲಿ ಅಥವಾ ಭಾರತ ಸರ್ಕಾರವಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ದೃಢೀಕರಣ ನೀಡಿಲ್ಲ.

Also Read: 65 Inch Smart TV: ಅಮೆಜಾನ್ ಸೇಲ್‌ನಲ್ಲಿ 65 ಇಂಚಿನ ONIDA ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್!

ಭಾರತದಲ್ಲಿ ಟಿಕ್‌ ಟಾಕ್‌ ನಿಷೇಧಕ್ಕೆ ಕಾರಣಗಳೇನು?

ಈ ಆ್ಯಪ್‌ನ ಚಟುವಟಿಕೆಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹಾನಿಕರ ಎಂದು ಭಾರತ ಸರ್ಕಾರ ಹೇಳಿದೆ. ಅಲ್ಲದೆ ಬಳಕೆದಾರರ ಟಿಕ್‌ಟಾಕ್‌ನ ಮಾಲೀಕರಾದ ಚೀನಾದ ಟೆಕ್ ದೈತ್ಯ ಬೈಟ್‌ಡ್ಯಾನ್ಸ್ ಬಳಕೆದಾರರ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಚೀನಾ ಸರ್ಕಾರವು ಅದನ್ನು ಪ್ರವೇಶಿಸಬಹುದು. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂಬ ಕಳವಳಗಳಿದ್ದವು ಈ ನಿಷೇಧಕ್ಕೆ ಕೆಲವೇ ವಾರಗಳ ಮೊದಲು ಭಾರತ ಮತ್ತು ಚೀನಾ ನಡುವಿನ ಮಾರಕ ಗಡಿ ಘರ್ಷಣೆಯ ಸಂದರ್ಭವನ್ನು ಗಮನಿಸಿದರೆ ಟಿಕ್‌ಟಾಕ್ ಬೇಹುಗಾರಿಕೆಗೆ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತಿತ್ತು.

ಭದ್ರತಾ ಕಾಳಜಿಗಳ ಜೊತೆಗೆ ವೇದಿಕೆಯಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದವು ವಿಮರ್ಶಕರು ಅದು ಅನುಚಿತ ಅಥವಾ ಹಾನಿಕಾರಕ ವಿಷಯವನ್ನು ಪ್ರಚಾರ ಮಾಡುತ್ತಾರೆ ಮತ್ತು ದ್ವೇಷವನ್ನು ಹರಡುವ ಸಾಧ್ಯತೆಯಿದೆ ಎಂದು ವಾದಿಸಿದರು. ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಭಾರತ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69A ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡಿತು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo