ಈ ಬೆಲೆಗೆ ಇದಕ್ಕಿಂತ ಇನ್ನು ಒಳ್ಳೆ ಫೋನ್ ಸಿಗೋದು ಕಷ್ಟನೇ...OnePlus 7 Pro ಸ್ಮಾರ್ಟ್ಫೋನ್ ರಿವ್ಯೂ

ಈ ಬೆಲೆಗೆ ಇದಕ್ಕಿಂತ ಇನ್ನು ಒಳ್ಳೆ ಫೋನ್ ಸಿಗೋದು ಕಷ್ಟನೇ...OnePlus 7 Pro ಸ್ಮಾರ್ಟ್ಫೋನ್ ರಿವ್ಯೂ

Ravi Rao | 05 Aug 2019

ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಒಂದಕ್ಕಿಂತ ಒಂದು ಕಂಪನಿ ತನ್ನದೇಯಾದ ಅದ್ದೂರಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿವೆ. ಅದರಲ್ಲೂ Samsung, Xiaomi, Oppo Vivo ಮತ್ತು OnePlus ಬ್ರ್ಯಾಂಡ್ಗಳು ಅತಿ ಹೆಚ್ಚು ಚರ್ಚೆಗೆ ಗುರಿಯಾಗಿವೆ. ಇವತ್ತು ನಾವು ಕೊಡುವ ಹಣಕ್ಕೆ ಅಥವಾ ಬೆಲೆಗೆ ಯಾವ ಸ್ಮಾರ್ಟ್ಫೋನ್ ಉತ್ತಮ ತಗೊಂಡರೆ 2-3 ವರ್ಷ ಆರಾಮಾಗಿ ಬಳಸಲು ಸೂಕ್ತವಾಗುವ OnePlus 7Pro ಸ್ಮಾರ್ಟ್ಫೋನ್ ಬಗ್ಗೆ ಮಾತನಾಡೋಣ. 

ಮೊದಲಿಗೆ ಈ ಸ್ಮಾರ್ಟ್ಫೋನಿನ ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕೆಂದರೆ ಇದರ ಫ್ರಂಟ್ ಮತ್ತು ಬ್ಯಾಕ್ ಎರಡು ಕಡೆಗಳಲ್ಲಿ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಅಲ್ಯೂಮಿಯಂ ಫ್ರೇಮ್ ನೀಡಲಾಗಿದ್ದು ಫ್ರಂಟಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v6 ಕೊಟ್ರೆ ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ನೀಡಲಾಗಿದೆ. ಅಂದ್ರೆ ಈ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸಾಮಾನ್ಯ ಸ್ಮಾರ್ಟ್ಫೋನ್ಗಳಂತೆ ಅಷ್ಟು ಬೇಗ ಸ್ಕರ್ಚ್ ಅಥವಾ ಹಾಳೋಗಲ್ಲ. ಈ ಸ್ಮಾರ್ಟ್ಫೋನಿನ ಫ್ರಂಟ್ ಮತ್ತು ಬ್ಯಾಕ್ ಗ್ಲಾಸ್ ಫಿನಿಷ್ ಮತ್ತು 8.8mm ಥಿಕ್ನೆಸ್ಸ್ ಹೊಂದಿರುವುದರಿಂದ ಇದರ ಒಟ್ಟಾರೆಯ ತೂಕ ಸುಮಾರು 206gಗಳಿಗೆ ಬರಬವುದು. ಇದಲ್ಲದೆ ಈ ಸ್ಮಾರ್ಟ್ಫೋನ್ DCI-P3 ಸರ್ಟಿಫೈಡ್ ಅಂದ್ರೆ ವಾಟರ್ ಮತ್ತು ಡಸ್ಟ್ ಪ್ರೂಫ್ ಆಗಿದೆ. 

ಇದರ ನಂತರ ಇದರ ಡಿಸ್ಪ್ಲೇಯಲ್ಲಿ OnePlus 7Pro ಸ್ಮಾರ್ಟ್ಫೋನ್ 6.67 ಇಂಚಿನ ಫ್ಲೂಯಿಡ್ ಅಮೋಲೆಡ್ QHD+ ಹೊಂದಿರುವ ಮೊಟ್ಟ ಮೊದಲ ಡಿಸ್ಪ್ಲೇ ಹೊಂದಿದ್ದು ಇದು HDR10+ ಟೆಕ್ನಾಲಜಿಯನ್ನು ಸಹ ಬೆಂಬಲಿಸುತ್ತದೆ. ಇದಷ್ಟೇ ಅಲ್ಲದೆ OnePlus 7 Pro ಸ್ಮಾರ್ಟ್ಫೋನಿನ   ಡಿಸ್ಪ್ಲೇ 90Hz ರೆಸೊಲ್ಯೂಷನ್ ರಿಫ್ರೆಶ್ ರೇಟ್ ನೀಡುತ್ತದೆ. ಅಂದ್ರೆ ನೀವು 90 ಫ್ರೆಮ್ ಪರ್ ಸಕೆಂಡಲ್ಲಿ ಹೈ ಗ್ರಾಫಿಕ್ ಮೊಬೈಲ್ ಗೇಮ್ ಅಥವಾ ವಿಡಿಯೋಗಳನ್ನು ನೋಡಬವುದು. ಇಷ್ಟೆಲ್ಲ ಇರೋ ಫೋನಲ್ಲಿ ಗೇಮ್ ಆಡಲೇಬೇಕು ಅಲ್ವೇ...ಇದರಲ್ಲಿ PUBG ಆಡುವಾಗ ನಿಮಗೆ ಸಿಗೋ ಆ ಅನುಭವ ಆ ಹೊಸ ರೀತಿಯ ಫೀಲ್ ಒಂದ್ ತಾರಾ ಚೆನ್ನಾಗಿರುತ್ತೆ. 90FPS ರೆಸೊಲ್ಯೂಷನಲ್ಲಿ ಆಡಿದ್ರೆ ಇದು ಸ್ವಲ್ಪ ಬ್ಯಾಟರಿ ಜಾಸ್ತಿ ತಗೊಳುತ್ತೆ. ಹಾಗಾದ್ರೆ ಏನಪ್ಪಾ ಮಾಡೋದು ಅಂದ್ರೆ ನೀವು 60FPS ರೆಸುಲ್ಯೂಷನ್ಗೆ ಹಾಕೊಂಡು ಬ್ಯಾಟರಿ ಉಳಿಸಿಕೊಳ್ಳಬವುದು.   

ಈ ಸ್ಮಾರ್ಟ್ಫೋನಿನ ಸಿಸ್ಟಮ್ ಮಾಹಿತಿ ನೋಡಬೇಕೆಂದರೆ ಇದರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸದಕ್ಕೆ ಲಭ್ಯವಿರುವ ಅತಿ ಶ್ರೇಷ್ಠ ಮತ್ತು ಅತ್ಯುತ್ತಮವಾದ ಕ್ವಾಲ್ಕಾಮ್ SD855 ಚಿಪ್ ಪ್ರೊಸೆಸರ್ ಹೊಂದಿದ್ದು ಅಡ್ರಿನೊ 640 GPU ಜೊತೆಗೆ ಓಕ್ಟಾ ಕೋರ್ 2.84GHz ಜೊತೆಗೆ  ಬರುತ್ತದೆ. ಅಲ್ಲದೆ ಇದು ಆಂಡ್ರಾಯ್ಡ್ 9.0 ಆಧಾರಿತ OxygenOS 9.5 ಒಳಗೊಂಡು ಅದ್ದೂರಿಯ ಸ್ಮಾರ್ಟ್ಫೋನ್ಗೆ ಭರ್ಜರಿಯ ಪ್ರೊಸೆಸರ್ ನೀಡಲಾಗಿದೆ. ಅಂದ್ರೆ ಇದರಲ್ಲಿ ನೀವು ಒಂದು ಸ್ಮಾರ್ಟ್ಫೋನಲ್ಲಿ ಏನೇಲ್ಲ ಮಾಡೋಕೆ ಸಾಧ್ಯನೋ ಅದೇಲ್ಲ ಮಾಡಬವುದು. ಯಾವುದೇ ಗೇಮನ್ನ ಯಾವುದೇ ಅಪ್ಲಿಕೇಶನ್ಗಳನ್ನು ಆರಾಮಾಗಿ ಇದ್ರಲ್ಲಿ ಬಳಸಬವುದು. 

ಈ ಸ್ಮಾರ್ಟ್ಫೋನಿನ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದರ ಹಿಂಭಾಗದಲ್ಲಿ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿರುವುದನ್ನು ನೋಡಬವುದು. ಇದರ ಮೊದಲ ಪ್ರೈಮರಿ ಕ್ಯಾಮೆರಾ 48MP f/1.6 ಅಪರ್ಚರ್ ವೈಡ್ ಆಂಗಲ್ ಲೆನ್ಸ್ ಇರುವಂತಹದ್ದು ಇದರಲ್ಲಿ ಲೈಟ್ ಮತ್ತು ಬೆಳಕು ಹೆಚ್ಚು ಆಕರ್ಷಿಸಿ ಅದ್ದೂರಿಯ ಬೊಖೆ ಎಫೆಕ್ಟ್ ಇಮೇಜ್ ಮತ್ತು ವಿಡಿಯೋಗಳನ್ನು ನೀಡುತ್ತದೆ. ಇದಲ್ಲದೆ ಇದರಲ್ಲಿ ಲೇಸರ್ ಆಟೋ ಫೋಕಸ್ ಮತ್ತು OISಅಂದ್ರೆ ಆಪ್ಟಿಕಲ್ ಇಮೇಜ್ ಸ್ಟಬಿಲೈಝಷನ್ ಹೊಂದಿದೆ. ಅಂದ್ರೆ ನೀವು ನಡಿಯುತ್ತ ಫೋಟೋ ಅಥವಾ ವಿಡಿಯೋ ಮಾಡಿದಾಗ ಶೇಕ್ ಆದ್ರೂ ಸ್ಟಬಿಲೈಝಷನ್ ಮಾಡಿ ಪ್ರೊಫೆಶನ್ ಶೂಟ್ ರೀತಿಯ ಶಾರ್ಪ್ ಮತ್ತು ಕ್ರಿಸ್ಪಿ ಶಾಟ್ಗಳನ್ನು ನೀಡುತ್ತದೆ. ಎರಡನೇಯದಾಗಿ 16MP f/2.2 ಅಪರ್ಚರ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಕೊನೆಯದಾಗಿ 8MP f/2.4 ಅಪರ್ಚರ್ ಟೆಲಿಫೋಟೋ ಲೆನ್ಸ್ ಅಂದರೆ 3X ಜೂಮ್ ಸಪೋರ್ಟ್ ಮಾಡುತ್ತದೆ. ಇದಲ್ಲದೇ 720 ಫ್ರೆಮಲ್ಲಿ 480 ಪಿಕ್ಸೆಲ್ ರೆಸೊಲ್ಯೂಷನಲ್ಲಿ ಸ್ಲೋ ಮೋಶನ್ ವಿಡಿಯೋ ರೆಕಾರ್ಡ್ ಮಾಡುತ್ತದೆ. ಇದರ ಮುಂಭಾಗದಲ್ಲಿ ಮೋಟೋರೈಸ್ಡ್ ಪಾಪ್ ಅಪ್ 16MP f/2.0 ಅಪರ್ಚರ್ ವೈಡ್ ಆಂಗಲ್ ಲೆನ್ಸ್ ಕ್ಯಾಮೆರಾ ನೀಡಲಾಗಿದೆ. 

ಕೊನೆಯದಾಗಿ ಇದರ ಬ್ಯಾಟರಿ ಬಗ್ಗೆ ಹೇಳಬೇಕೆಂದರೆ ಇದರಲ್ಲಿ 4000mAh ಬ್ಯಾಟರಿ ಹೊಂದಿರುತ್ತೆ ಈಗಲೇ ನಾನು ಮೊದಲೇ ಹೇಳಿರುವಂತೆ    
OnePlus 7 Pro ಸ್ಮಾರ್ಟ್ಫೋನಿನ ಡಿಸ್ಪ್ಲೇ 90Hz ರೆಸೊಲ್ಯೂಷನ್ ರಿಫ್ರೆಶ್ ರೇಟ್ ನೀಡುವುದರಿಂದ 60FPS ರೆಸುಲ್ಯೂಷನ್ಗೆ ಹಾಕೊಂಡು ಫುಲ್ ಡೇ ಬ್ಯಾಟರಿ ಉಳಿಸಿಕೊಳ್ಳಬವುದು. ಅಲ್ಲದೆ ಕಂಪನಿಯ ವೆಬ್ಸೈಟಲ್ಲಿ ಈ ಸ್ಮಾರ್ಟ್ಫೋನ್ ಬಾಕ್ಸ್ ಜೊತೆಗೆ 30w ಸೂಪರ್ ಫಾಸ್ಟ್ Warp ಚಾರ್ಜ್ ಟೆಕ್ನಾಲಜಿಯನ್ನು ಸೇರಿಸಿರುವುದರಿಂದ ಕೇವಲ 20 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತೆ ಅಂತ ಹೇಳಲಾಗಿದೆ. ಅಂದ್ರೆ ನಾನು ಚಾರ್ಜ್ ಮಾಡಿ ನೋಡಿದಾಗ 20 ನಿಮಿಷಕ್ಕೆ 52% ಚಾರ್ಜ್ ಆಗಿತ್ತು. ಇದರ ಸೆಕ್ಯುಟಿರಿ ಪ್ರೊಟೆಕ್ಷನ್ ಬಗ್ಗೆ ಹೇಳಬೇಕೆಂದರೆ ಇನ್ ಡಿಸ್ಪ್ಲೇ ಅಥವಾ ಇನ್ ಸ್ಕ್ರೀನ್ ಫಿಂಗರ್ಪ್ರಿಂಟ್ ಸೆನ್ಸರ್ ಒಳಗೊಂಡಿದೆ.

ಇದರ ಬೆಲೆ ಬಗ್ಗೆ ಹೇಳಬೇಕೆಂದರೆ ಈ ಸ್ಮಾರ್ಟ್ಫೋನ್ ನಿಮಗೆ ಒಟ್ಟು ಮೂರು ವೆರಿಯಂಟ್ಗಳಲ್ಲಿ ಲಭ್ಯವಿರುತ್ತದೆ. 6GB+128GB 48,999 ಮತ್ತು 8GB+256GB 52,999 ಆದ್ರೆ 12GB+256GB 57,999 ರೂಗಳಲ್ಲಿ ಮಿರರ್ ಗ್ರೇ, ನೆಬುಲಾ ಬ್ಲೂ ಮತ್ತು ಅಲ್ಮೊನ್ಡ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈಗ ನಮಗೆ ಬರೋ ಪ್ರಶ್ನೆ ಏನಪ್ಪಾ ಅಂದ್ರೆ ಇದನ್ನು ತಗೋಬವುದು ಬೇಡ್ವಾ ಅಂದ್ರೆ... ನಾನು ನಿಮಗೆ ಸಲಹೆ ನೀಡುತ್ತೇನೆ ತಗೋಳಿ ಅಂಥ ಏಕೆಂದರೆ ಇದರಲ್ಲಿರುವ ಸ್ಪೆಕ್ಸ್ ಮತ್ತು ಕಾನ್ಫ್ರಿಗ್ರೇಷನ್ ಈ ರೇಂಜಲ್ಲಿ ಸಿಗೋಲ್ಲ. ಈ ಎಲ್ಲಾ ಸ್ಪೆಕ್ಸ್ ಮತ್ತು ಕಾನ್ಫ್ರಿಗ್ರೇಷನ್ ಬೇರೆ ಬ್ರ್ಯಾಂಡ್ಗಳಿಗೆ ಹೋಲಿಸದರೆ 70-80 ಸಾವಿರ ರೂಪಾಯಿಗಳಲ್ಲಿ ಸಿಗುತ್ತೇ ಈಗ ನಿರ್ಧಾರ ನಿಮ್ಮ ಕೈಯಲ್ಲಿದೆ.

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status