ಬಿಡುಗಡೆಗೆ 2 ದಿನ ಬಾಕಿ! Dolby Atmos ಫೀಚರ್‌ನೊಂದಿಗೆ ಮೋಟೋದ ಅತಿ ಕಡಿಮೆ ಬೆಲೆಗೆ Moto G04 ಸ್ಮಾರ್ಟ್ಫೋನ್!
Moto G04 ಸ್ಮಾರ್ಟ್ಫೋನ್ Dolby Atmos ಆಡಿಯೋ, 5000mAh ಬ್ಯಾಟರಿಯೊಂದಿಗೆ ಬರುವ ನಿರೀಕ್ಷೆ
Moto G04 ಸ್ಮಾರ್ಟ್ಫೋನ್ ಇನ್ನೆರಡು ದಿನ 15ನೇ ಫೆಬ್ರವರಿ 2024 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ
Moto G04 ಸ್ಮಾರ್ಟ್ಫೋನ್ 6.6 HD+ ಇಂಚಿನ ದೊಡ್ಡ ಡಿಸ್ಪ್ಲೇಯನ್ನು 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ.
ಮೋಟೊರೋಲದ ಮುಂಬರುವ ಸ್ಮಾರ್ಟ್‌ಫೋನ್ ಇನ್ನೆರಡು ದಿನಗಳಲ್ಲಿ ಅಂದ್ರೆ 15ನೇ ಫೆಬ್ರವರಿ 2024 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ Moto G04 ಸ್ಮಾರ್ಟ್ಫೋನ್ ಮೋಟೋದ G ಸರಣಿಯೊಂದಿಗೆ ಬರುವ ಬಜೆಟ್ ಫೋನ್ ಆಗಿದ್ದು ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಯಾಗಲಿದೆ. ನಿಮ್ಮ ಬಜೆಟ್ ಕಡಿಮೆಯಿದ್ದು ಬೆಸ್ಟ್ ಫೋನ್ ಖರೀದಿಸಲು ಬಯಸಿದರೆ ಈ Moto G04 ನಿಮಗೆ ಉತ್ತಮ ಆಯ್ಕೆಗಳಲ್ಲಿ ಒಂದಾಗಲಿದೆ. Moto G04 ಸ್ಮಾರ್ಟ್ಫೋನ್ Dolby Atmos ಆಡಿಯೋ, 5000mAh ಬ್ಯಾಟರಿ ಮತ್ತು 16MP ಪ್ರೈಮರಿ ಕ್ಯಾಮೆರಾದೊಂದಿಗೆ ಹಲವಾರು ಡಿಸೆಂಟ್ ಫೀಚರ್ಗಳನ್ನು ಒಳಗೊಂಡಿದೆ.
SurveyAlso Read: OnePlus 12R ಮುಂದಿನ ಸೇಲ್ ಇಂದು ಅಮೆಜಾನ್‌ನಲ್ಲಿ ಭಾರಿ ಆಫರ್‌ಗಳೊಂದಿಗೆ ಲಭ್ಯ! ಖರೀದಿಗೆ ನೀವು ರೆಡಿನಾ?
Moto G04 ನಿರೀಕ್ಷಿತ ವಿಶೇಷಣಗಳು
Moto G04 ಸ್ಮಾರ್ಟ್ಫೋನ್ 6.6 HD+ ಇಂಚಿನ ದೊಡ್ಡ ಡಿಸ್ಪ್ಲೇಯನ್ನು 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಫೋನ್ Unisoc T606 ಚಿಪ್‌ಸೆಟ್ ಬೆಂಬಲವನ್ನು Mali G57 GPU ಜೊತೆಗೆ ಫೋನ್‌ನಲ್ಲಿ ಒದಗಿಸಲಾಗಿದೆ. ಫೋನ್ 16MP ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಫೋನ್‌ನ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗುವುದು. ಫೋನ್ Dolby Atmos ಅನ್ನು ಬೆಂಬಲಿಸುತ್ತದೆ. Moto G04 ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಬೆಂಬಲದೊಂದಿಗೆ ಒದಗಿಸಲಾಗುತ್ತದೆ. ಫೋನ್‌ನಲ್ಲಿ RAM ಬೂಸ್ಟ್ ತಂತ್ರಜ್ಞಾನವನ್ನು ಬಳಸಲಾಗಿದೆ. ಫೋನ್ 4GB RAM ಮತ್ತು 8GB ವರ್ಚುವಲ್ RAM ಒಳಗೊಳ್ಳಲಿದೆ.
We have an exciting news for you!
— Motorola India (@motorolaindia) February 12, 2024
You can make the brand new #MotoG04 yours. Wanna know how?
Stay tuned! pic.twitter.com/DJ5tKtJGpA
Moto G04 ಫೋನ್ Dolby Atmos ಬೆಂಬಲದೊಂದಿಗೆ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ IP52 ರೇಟಿಂಗ್ ನೀಡಲಿದ್ದು ಇದರಿಂದಾಗಿ ನೀರು ಮತ್ತು ಧೂಳಿನಲ್ಲಿ ಫೋನ್ ಬೇಗ ಹಾಳಾಗುವುದಿಲ್ಲ. Moto G04 ಸ್ಮಾರ್ಟ್ಫೋನ್ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಸಾಕಷ್ಟು ಹಗುರ ಮತ್ತು ತೆಳ್ಳಗಿರುತ್ತದೆ. Moto G04 ಸ್ಮಾರ್ಟ್ಫೋನ್ ಕೇವಲ 7.99mm ದಪ್ಪವಾಗಿದ್ದು ನಿಮಗೆ ಈಗಾಗಲೇ ಹೇಳಿರುವಂತೆ 5000mAh ಬ್ಯಾಟರಿಯೊಂದಿಗೆ ನೀಡಲಾಗುವುದು. ಅಲ್ಲದೆ ಫೋನ್‌ನಲ್ಲಿ 10W ಚಾರ್ಜಿಂಗ್ ಅನ್ನು ಬೆಂಬಲಿಸಲಾಗುತ್ತದೆ.
ಮೋಟೊ G04 ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
Moto G04 ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಮತ್ತು motorola.com ಜೊತೆಗೆ ಆಫ್‌ಲೈನ್ ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು. ಅಲ್ಲದೆ ಬಿಡುಗಡೆಗೂ ಮುಂಚೆ ಇದರ ಫೀಚರ್ ಮತ್ತು ವಿಶೇಷಣಗಳೊಂದಿಗೆ ಭಾರತದಲ್ಲಿ ಈ ಫೋನ್ ಅನ್ನು ಬ್ಯಾಂಕ್ ಆಫರ್ ಮತ್ತು ಬಿಡುಗಡೆಯ ಕೊಡುಗೆಯೊಂದಿಗೆ ಸುಮಾರು 10,000 ರೂಗಳೊಳಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. Moto G04 ಎರಡು ರೂಪಾಂತರಗಳಲ್ಲಿ ನಿರೀಕ್ಷಿಸಲಾಗಿದ್ದು 4GB RAM ಮತ್ತು 64GB ಸ್ಟೋರೇಜ್ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಬರುವುದಾಗಿ ನಿರೀಕ್ಷಿಸಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile