ಗಣರಾಜ್ಯೋತ್ಸವ ಭದ್ರತೆಗೆ AI ಕಣ್ಗಾವಲು! ಅಪರಾಧಿಗಳ ಪತ್ತೆಗೆ ಸ್ಮಾರ್ಟ್ ಗ್ಲಾಸ್ ಧರಿಸಲಿರುವ ಪೊಲೀಸ್ ಸಿಬ್ಬಂದಿ
AI ಸ್ಮಾರ್ಟ್ ಗ್ಲಾಸ್ ಮೂಲಕ ಶಂಕಿತರನ್ನು ಸ್ಕ್ಯಾನ್ ಮಾಡಿದಾಗ ಗ್ಲಾಸನಲ್ಲಿ ಅವರು ಕೆಂಪು ಅಥವಾ ಹಸಿರು ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ
AI ಸ್ಮಾರ್ಟ್ ಗ್ಲಾಸ್‌ಗಳನ್ನು ಭಾರತೀಯ ಸ್ಟಾರ್ಟ್‌ಅಪ್ AznaLens ಸಂಸ್ಥೆಯು ಅಭಿವೃದ್ದಿಪಡಿಸಿದೆ
ಭಾರತದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಹೆಚ್ಚಿನ ಭದ್ರತೆಯನ್ನು ನೀಡುವ ಉದ್ದೇಶದಿಂದ ದೆಹಲಿ ಪೊಲೀಸರು AI ತಂತ್ರಜ್ಞಾನ ಅಳವಡಿಸಿಕೊಂಡಿಸಲು ಮುಂದಾಗಿದ್ದಾರೆ. ಹೌದು ಭದ್ರತೆಯ ದೃಷ್ಠಿಯಿಂದ ಹಾಗೂ ಅಪರಾಧಿಗಳನ್ನು ತಕ್ಷಣ ಗುರುತಿಸಲು ದೆಹಲಿ ಪೊಲೀಸ್ ಸಿಬ್ಬಂದಿ ಫೇಶಿಯಲ್ ರಿಕಗ್ನಿಷನ್ ಸಿಸ್ಟಮ್ (FRS) ಮತ್ತು ಥರ್ಮಲ್ ಇಮೇಜಿಂಗ್ ತಂತ್ರಜ್ಞಾನ ಹೊಂದಿರುವ AI ಆಧಾರಿತ ಸ್ಮಾರ್ಟ್ ಗ್ಲಾಸ್‌ಗಳನ್ನು ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.
SurveyAlso Read : Mark OTT Release: ಒಂದೇ ದಿನ OTTಯಲ್ಲಿ ರಿಲೀಸ್ ಆಗಲಿವೆ Mark ಮತ್ತು 45 ಸಿನಿಮಾ
AI ಸ್ಮಾರ್ಟ್ ಕನ್ನಡಕ ಹೇಗೆ ಕಾರ್ಯನಿರ್ವಹಿಸಲಿದೆ?
CCTV ಕ್ಯಾಮೆರಾಗಳಂತೆ ಈ AI ಸ್ಮಾರ್ಟ್ ಕನ್ನಡಕಗಳನ್ನು ಪೊಲೀಸರು ಧರಿಸಿರುತ್ತಾರೆ. ಈ ಕನ್ನಡಕಗಳು ಬ್ಲ್ಯಾಕ್ ಕಲರ್‌ನಲ್ಲಿ ಇರುತ್ತವೆ ಹಾಗೂ ಅವುಗಳು ಚಲಿಸಬಲ್ಲ ಲೆನ್ಸ್‌ಗಳಿದ್ದು ಮೇಲ್ಭಾಗಕ್ಕೆ ಅಥವಾ ಕೆಳಭಾಗಕ್ಕೆ ತಿರುಗಿಸಬಹುದು. ಭದ್ರತೆ ಗಮನಿಸಲು FRS ವ್ಯವಸ್ಥೆಯನ್ನು ಹೆಡ್‌ಸೆಟ್‌ಗಳಲ್ಲಿ ಅಳವಡಿಸಲಾಗಿರುತ್ತದೆ. AI ಸ್ಮಾರ್ಟ್ ಕನ್ನಡಕ ಮೂಲಕ ಶಂಕಿತರನ್ನು ಸ್ಕ್ಯಾನ್ ಮಾಡಿದಾಗ ಗ್ಲಾಸನಲ್ಲಿ ಅವರು ಕೆಂಪು ಅಥವಾ ಹಸಿರು ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಸಿರು ಬಾಕ್ಸ್‌ನಲ್ಲಿ ಕಾಣಿಸಿಕೊಂಡರೆ ಅಪರಾಧ ದಾಖಲೆ ಇಲ್ಲ ಎಂದು ಹಾಗೂ ಕೆಂಪು ಕಾಣಿಸಿದರೆ ಅಪರಾಧ ಹಿನ್ನಲೆಯುಳ್ಳ ವ್ಯಕ್ತಿ ಎಂದು ಸೂಚಿಸುತ್ತದೆ. ಈ ಸೌಲಭ್ಯದಿಂದಾಗಿ ಪೊಲೀಸ್ ಅಧಿಕಾರಿಗಳಿಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.

AI ಸ್ಮಾರ್ಟ್ ಗ್ಲಾಸ್‌ಗಳನ್ನು ಭಾರತೀಯ ಸ್ಟಾರ್ಟ್‌ಅಪ್ ಕಂಪನಿ ಅಭಿವೃದ್ದಿಪಡಿಸಿದೆ
ಅಂದಹಾಗೆ ಭಾರತೀಯ ಸ್ಟಾರ್ಟ್‌ಅಪ್ AznaLens ಸಂಸ್ಥೆಯು ಅಭಿವೃದ್ಧಿಪಡಿಸಿದ 100 AI ಚಾಲಿತ ಕನ್ನಡಕಗಳನ್ನು ಕಾರ್ಯಕ್ರಮದ ಸುತ್ತಮುತ್ತಲಿನ ಜನದಟ್ಟಣೆಯ ಪ್ರದೇಶಗಳಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗೆ ವಿತರಿಸಲಾಗಿದೆ. ಇನ್ನು ಸಶಸ್ತ್ರ ಪಡೆಗಳು ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಗೆ XR ತಂತ್ರಜ್ಞಾನ ಆಧಾರಿತ ಡಿವೈಸ್‌ಗಳನ್ನು ಸಹ AznaLens ಕಂಪನಿಯು ಪೂರೈಕೆ ಮಾಡುತ್ತದೆ.
ಈ AI ಚಾಲಿತ ಸ್ಮಾರ್ಟ್ ಕನ್ನಡಕಗಳು ನೇರವಾಗಿ ಪೊಲೀಸ್ ಡೇಟಾಬೇಸ್‌ಗೆ ಸಂಪರ್ಕಿಸಲಾಗಿದೆ. ಹೀಗಾಗಿ ಗಣರಾಜ್ಯೋತ್ಸವ ಕಾರ್ಯಕ್ರಮದ ಸ್ಥಳದಲ್ಲಿ ಅಥವಾ ಅದರ ಸುತ್ತಮುತ್ತ ಪೊಲೀಸ್ ಅಧಿಕಾರಿಗಳು ತಕ್ಷಣವೇ ಶಂಕಿತ ವ್ಯಕ್ತಿಯ ವಿವರಗಳನ್ನು ತ್ವರಿತವಾಗಿ ಪರಿಶೀಲಿಸಬಹುದು ಎಂದು ನವದೆಹಲಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ದೇವೇಶ್ ಕುಮಾರ್ ಮಹ್ಲಾ ಅವರು ಹೇಳಿದ್ದಾರೆ.
ಇನ್ನು ಗಣರಾಜ್ಯೋತ್ಸವದ ಭದ್ರತೆಗಾಗಿ AI ಚಾಲಿತ ಸ್ಮಾರ್ಟ್ ಕನ್ನಡಕಗಳ ವ್ಯವಸ್ಥೆ ಹೊರತುಪಡಿಸಿ ದೆಹಲಿ ಪೊಲೀಸರು ಅಗತ್ಯ ಸ್ಥಳಗಳಲ್ಲಿ CCTV ಕ್ಯಾಮೆರಾ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಡ್ರೋನ್ ಆಧಾರಿತ ಕಣ್ಗಾವಲು ಮತ್ತು ಫೇಸ್ ಐಡೆಂಟಿಟಿಯನ್ನು ಪತ್ತೆ ಮಾಡುವ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಸಹ ವಿಸ್ತರಿಸಿದ್ದಾರೆ. ಒಂದೇ ಪ್ರದೇಶದ ಸುತ್ತಲೂ ಪದೇ ಪದೇ ಸುತ್ತುವ ವಾಹನಗಳು ಸಹ ಗಸ್ತು ಸಿಬ್ಬಂದಿಯ ಗಮನದಲ್ಲಿರುತ್ತವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಾಗೆಯೇ ಭದ್ರತಾ ಯೋಜನೆಯ ಭಾಗವಾಗಿ 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಮೆರವಣಿಗೆ ಮಾರ್ಗದಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗುವುದು ಎಂದು ವರದಿಯಾಗಿದೆ.