Samsung ಕಂಪನಿಯ 55 ಇಂಚಿನ ಸ್ಮಾರ್ಟ್‌ಟಿವಿ ಈಗ ಡಿಸ್ಕೌಂಟ್ ಬೆಲೆಗೆ ಲಭ್ಯ!
ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ ಆಫರ್‌ನಲ್ಲಿ ಲಭ್ಯ
ಈ ಸ್ಮಾರ್ಟ್‌ಟಿವಿ ಮೂರು HDMI ಪೋರ್ಟ್ ಆಯ್ಕೆಗಳನ್ನು ಪಡೆದುಕೊಂಡಿದೆ
Samsungನ ಈ ಟಿವಿ 20W ಸೌಂಡ್ ಔಟ್‌ಪುಟ್ ಸೌಲಭ್ಯ ಒಳಗೊಂಡಿದೆ
ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ಕಂಪನಿಯ ಟಿವಿಗಳಿಗೆ ಡಿಮ್ಯಾಂಡ್ ಇವೆ. ಆ ಪೈಕಿ 138 ಸೆಂ.ಮೀ (55 ಇಂಚು) Crystal 4K Vista Ultra HD Smart LED TV ಇದೀಗ Amazon Great Summer Sale ನಲ್ಲಿ ಭಾರೀ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಸ್ಲಿಮ್ ಲುಕ್ ರಚನೆ ಇರುವ ಈ ಸ್ಮಾರ್ಟ್ ಟಿವಿಯು ಕ್ರಿಸ್ಟಲ್ ಪ್ರೊಸೆಸರ್ 4K, ಶಕ್ತಿಯುತ 20W ಸೌಂಡ್ ಔಟ್‌ಪುಟ್ ಸೇರಿದಂತೆ ವೈ-ಫೈ 5 ಹಾಗೂ ಬ್ಲೂಟೂತ್ 5.2 ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ಸಮ್ಮರ್ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್ ಟಿವಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Amazon ಸೇಲ್: ಬಜೆಟ್ ದರದ ಈ ಮೊಬೈಲ್ ಈಗ ಸಸ್ತಾ ಬೆಲೆಯಲ್ಲಿ ಲಭ್ಯ!
Samsung: 55 ಇಂಚಿನ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಇಳಿಕೆ
Samsung ಸಂಸ್ಥೆಯ 55 ಇಂಚಿನ Crystal 4K Vista Ultra HD Smart LED ಸ್ಮಾರ್ಟ್ ಟಿವಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. Amazon ತಾಣದಲ್ಲಿ ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 55,200 ರೂ.ಗಳು ಆಗಿದ್ದು ಸದ್ಯ 39,490 ರೂ.ಗಳ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಸ್ಮಾರ್ಟ್‌ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿರಿ.

ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್
Samsung ಸಂಸ್ಥೆಯ ಈ ಸ್ಮಾರ್ಟ್‌ಟಿವಿಯು 55 ಇಂಚಿನ (138 ಸೆಂ.ಮೀ) ಕ್ರಿಸ್ಟಲ್ 4K ಅಲ್ಟ್ರಾ HD ಸ್ಕ್ರೀನ್ ಅನ್ನು ಪಡೆದಿದೆ. ಈ ಟಿವಿ ಸ್ಕ್ರೀನ್ 3840 x 2160 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 4K Ultra HD ಸಪೋರ್ಟ್ ಹೊಂದಿದೆ. ಹಾಗೆಯೇ ಇದು HDR10+ ಸಪೋರ್ಟ್, 4K ಅಪ್‌ಸ್ಕೇಲಿಂಗ್, ಫಿಲ್ಮ್‌ಮೇಕರ್ ಮೋಡ್ ಗಳಂತಹ ಆಯ್ಕೆಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್ ಟಿವಿಯು ಕ್ರಿಸ್ಟಲ್ ಪ್ರೊಸೆಸರ್ 4K ಸೌಲಭ್ಯ ಒಳಗೊಂಡಿರುವ ಜೊತೆಗೆ ಸ್ಯಾಮ್‌ಸಂಗ್ ಟಿವಿ ಪ್ಲಸ್ ಬೆಂಬಲ ಪಡೆದಿದೆ. ಇದರೊಂದಿಗೆ ಮೊಬೈಲ್-ಟು-ಟಿವಿ ಮಿರರಿಂಗ್, ಸೌಂಡ್ ಮಿರರಿಂಗ್ ಹಾಗೂ ವೈರ್‌ಲೆಸ್ ಟಿವಿ ಆನ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಅಲೆಕ್ಸಾ/ಗೂಗಲ್ ಅಸಿಸ್ಟೆಂಟ್ ಸಪೋರ್ಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್ ಟಿವಿಯು ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಜಿಯೋಹಾಟ್‌ಸ್ಟಾರ್, ಸನ್‌ನೆಕ್ಸ್ಟ್, Zee5 ಸೇರಿದಂತೆ ಮ್ಯೂಸಿಕ್ ಚಾನೆಲ್‌ಗಳ ಸಪೋರ್ಟ್ ಸಹ ಹೊಂದಿದೆ. ಇನ್ನು ಈ ಟಿವಿಯ ಸೌಂಡ್ ಸಹ ಉತ್ತಮವಾಗಿದ್ದು, ಇದು 20 W ಸೌಂಡ್ ಔಟ್‌ಪುಟ್ ಒಳಗೊಂಡಿದೆ. ಹಾಗೆಯೇ ಸೆಟ್-ಟಾಪ್ ಬಾಕ್ಸ್/DTH, ಸೌಂಡ್‌ಬಾರ್, ಹೋಮ್ ಥಿಯೇಟರ್, ಗೇಮಿಂಗ್ ಕನ್ಸೋಲ್ ಕನೆಕ್ಟ್ ಮಾಡಲು 3 HDMI ಪೋರ್ಟ್‌ಗಳ ಆಯ್ಕೆ ಇದೆ. ಅಲ್ಲದೇ Wi-Fi 5, ಬ್ಲೂಟೂತ್ 5.2, ಮತ್ತು HDMI eARC ಆಯ್ಕೆಗಳು ಇವೆ.
Disclosure: This Article Contains Affiliate Links
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile