ದೇಶೀಯ ಮಾರುಕಟ್ಟೆಗೆ ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟಿದೆ Lava Aura Curve ಸ್ಮಾರ್ಟ್‌ಫೋನ್‌!

HIGHLIGHTS

ಭಾರತದಲ್ಲಿ ಲಾವಾ ಔರಾ ಕರ್ವ್ ಮೊಬೈಲ್‌ ಬಿಡುಗಡೆ

ಲಾವಾದ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ

ಲಾವಾದ ಈ ಹೊಸ ಫೋನ್‌ ಹಿಮ್ ಸಿಲ್ವರ್ ಮತ್ತು ಅಂಬರ್ ಬ್ಲೂ ಕಲರ್‌ನಲ್ಲಿ ಲಭ್ಯ

ದೇಶೀಯ ಮಾರುಕಟ್ಟೆಗೆ ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟಿದೆ Lava Aura Curve ಸ್ಮಾರ್ಟ್‌ಫೋನ್‌!

ಅಗ್ಗದ ದರದಲ್ಲಿ ಹಲವು ಮೊಬೈಲ್‌ ಪರಿಚಯಿಸಿ ಸೈ ಎನಿಸಿಕೊಂಡಿರುವ ಲಾವಾ ಮೊಬೈಲ್‌ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ Lava Aura Curve ಸ್ಮಾರ್ಟ್‌ಫೋನ್‌ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್‌ MediaTek Dimensity 7100 SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಸೌಲಭ್ಯ ಒಳಗೊಂಡಿದೆ. ಇದರ ಡಿಸ್‌ಪ್ಲೇಯು ಕರ್ವ್ಡ್ AMOLED ಮಾದರಿಯಲ್ಲಿ ಇದೆ. ಅಲ್ಲದೇ ಈ ಮೊಬೈಲ್‌ ಎರಡು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಎಂಟ್ರಿ ಕೊಟ್ಟಿದೆ. ಹಾಗಾದರೆ ಲಾವಾ ಔರಾ ಕರ್ವ್ ಮೊಬೈಲ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಸ್ಯಾಮ್‌ಸಂಗ್‌ ಪ್ರಿಯರಿಗೆ ಸಿಹಿಸುದ್ದಿ! ಬಜೆಟ್‌ ಬೆಲೆಯಲ್ಲಿ ಲಾಂಚ್ ಆಯ್ತು ಹೊಸ Samsung Galaxy F70 5G

Lava Aura Curve ಬೆಲೆ ಹಾಗೂ ಲಭ್ಯತೆ

ಮಾರುಕಟ್ಟೆ ಪ್ರವೇಶಿಸಿರುವ ಲಾವಾ ಔರಾ ಕರ್ವ್ ಮೊಬೈಲ್‌ ಬಜೆಟ್‌ ದರದ ಪ್ರೈಸ್‌ಟ್ಯಾಗ್‌ ಪಡೆದಿದ್ದು ಈ ಮೂಲಕ ಗ್ರಾಹಕರ ಗಮನ ಸೆಳೆದಿವೆ. ಲಾವಾ ಔರಾ ಕರ್ವ್ ಮೊಬೈಲ್‌ನ ಆರಂಭಿಕ 6GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 23,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್‌ ಹಿಮ್ ಸಿಲ್ವರ್ ಮತ್ತು ಅಂಬರ್ ಬ್ಲೂ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

lava aura curve

ಲಾವಾ ಔರಾ ಕರ್ವ್ ಫೀಚರ್ಸ್‌ ಹೀಗಿವೆ

ಹೊಸ ಲಾವಾ ಔರಾ ಕರ್ವ್ ಮೊಬೈಲ್‌ 6.67-ಇಂಚಿನ ಫುಲ್ HD+ 3D ಕರ್ವ್ಡ್ ಹೊಂದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್‌ ಮತ್ತು ಇದರ ಸ್ಕ್ರೀನ್ 1,100 ನಿಟ್ಸ್‌ವರೆಗಿನ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದರೊಂದಿಗೆ MediaTek Dimensity 7100 SoC ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿದ್ದು, ಆಂಡ್ರಾಯ್ಡ್‌ ಓಎಸ್‌ ಸಪೋರ್ಟ್‌ ಪಡೆದಿದೆ. ಅಲ್ಲದೇ ಧೂಳು ಮತ್ತು ನೀರಿನ ಸಿಂಚನದಿಂದ ರಕ್ಷಣೆಗಾಗಿ ಈ ಮೊಬೈಲ್‌ IP64 ರೇಟಿಂಗ್ ಸೌಲಭ್ಯ ಪಡೆದುಕೊಂಡಿದೆ.

ಹಾಗೆಯೇ ಲಾವಾ ಔರಾ ಕರ್ವ್ ಫೋನ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್‌ ಪವರ್‌ನಲ್ಲಿ ಇದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್‌ 13 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile