Motorola Edge 70 Pro Plus ಮೊಬೈಲ್‌ ಬೆಲೆಯಲ್ಲಿ ಜಬರ್ದಸ್ತ್‌ ಇಳಿಕೆ! ಟ್ರಿಪಲ್ ಕ್ಯಾಮೆರಾ ಸೌಲಭ್ಯ

HIGHLIGHTS

ಮೊಟೊರೊಲಾ ಎಡ್ಜ್ 70 ಪ್ರೊ+ ಫೋನಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಕೊಡುಗೆ

ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ

ಮೊಟೊರೊಲಾ ಎಡ್ಜ್ 70 ಪ್ರೊ+ ಸ್ಮಾರ್ಟ್‌ಫೋನ್‌ ಮೂರು ಆಕರ್ಷಕ ಕಲರ್‌ನಲ್ಲಿ ಲಭ್ಯ

Motorola Edge 70 Pro Plus ಮೊಬೈಲ್‌ ಬೆಲೆಯಲ್ಲಿ ಜಬರ್ದಸ್ತ್‌ ಇಳಿಕೆ! ಟ್ರಿಪಲ್ ಕ್ಯಾಮೆರಾ ಸೌಲಭ್ಯ

ದಸರಾ ಹಬ್ಬದ ಪ್ರಯುಕ್ತ Flipkart ಆಯೋಜಿಸಿರುವ ವಿಶೇಷ ಸೇಲ್‌ನಲ್ಲಿ ಆಯ್ದ ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದೆ. ಆ ಪೈಕಿ ಮೊಟೊರೊಲಾ ಕಂಪನಿಯ Motorola Edge 70 Pro Plus ಮೊಬೈಲ್‌ ಸ್ಪೆಷಲ್ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಎಕ್ಸ್‌ಟ್ರೀಮ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ 6,500mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಮೊಟೊರೊಲಾ ಎಡ್ಜ್ 70 ಪ್ರೊ+ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ದೇಶೀಯ ಮಾರುಕಟ್ಟೆಗೆ ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟಿದೆ Lava Aura Curve ಸ್ಮಾರ್ಟ್‌ಫೋನ್‌!

Motorola Edge 70 Pro+ ಫೋನಿಗೆ ಭಾರೀ ರಿಯಾಯಿತಿ

ಪ್ರಿಮಿಯಂ ಬೆಲೆ ಹಾಗೂ ಆಕರ್ಷಕ ಫೀಚರ್ಸ್‌ ಮೂಲಕ ಗ್ರಾಹಕರ ಗಮನ ಸೆಳೆದಿರುವ ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೊಬೈಲ್‌ 12GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 84,999 ರೂ.ಗಳು ಆಗಿದ್ದು, ಆದರೆ ಆಫರ್‌ನಲ್ಲಿ ಪ್ರಸ್ತುತ ಈ ಮೊಬೈಲ್‌ ಬ್ಯಾಂಕ್‌ ಆಫರ್‌ಗಳ ಮೂಲಕ 47,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಅನ್ನು ಗ್ರಾಹಕರು ಪ್ಯಾಂಟೋನ್ ಚಿಕೋರಿ ಕಾಫಿ, ಪ್ಯಾಂಟೋನ್ ಸ್ಟಾರ್ಮಿ ಸೀ ಮತ್ತು ಪ್ಯಾಂಟೋನ್ ಜಿನ್‌ಫ್ಯಾಂಡೆಲ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು.

Motorola Edge 70 Pro Plus

ಮೊಟೊರೊಲಾ ಎಡ್ಜ್ 70 ಪ್ರೊ+ ಫೀಚರ್ಸ್‌ ಹೀಗಿವೆ

ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್‌ 6.8 ಇಂಚಿನ 1.5K ಎಕ್ಸ್‌ಟ್ರೀಮ್ AMOLED ಡಿಸ್‌ಪ್ಲೇ ಹೊಂದಿದ್ದು ಇದರ ಜೊತೆಗೆ ಇದರ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಎಕ್ಸ್‌ಟ್ರೀಮ್ ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 12GB RAM + 256GB ಸ್ಟೋರೇಜ್‌ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್‌ IP68 + IP69 ರೇಟಿಂಗ್‌ ಸೌಲಭ್ಯ ಪಡೆದುಕೊಂಡಿದೆ.

ಮೊಟೊರೊಲಾ ಎಡ್ಜ್ 70 ಪ್ರೊ+ ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಆಗಿದ್ದು, ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50MP ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 90W (ವೈರ್ಡ್) ಮತ್ತು 15W (ವೈರ್‌ಲೆಸ್) ವೇಗದ ಚಾರ್ಜಿಂಗ್ ಜೊತೆಗೆ 5W ವೈರ್ಡ್ ಮತ್ತು ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile