65 Inch 4K Google TV on Amazon
ಪ್ರಸ್ತುತ ಈ 2025 ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಮಾತ್ರ ಉಳಿದಿವೆ ಆದ್ದರಿಂದ ನಿಮ್ಮ ಹಳೆ ಟಿವಿಯನ್ನು ಹೊಸ ಫೀಚರ್ಗಳೊಂದಿಗೆ ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದು ಒಳ್ಳೆ ಸಮಯವಾಗಿದೆ. ಹೊಸ 2026 ವರ್ಷಕ್ಕೂ ಮುಂಚೆ ನಿಮ್ಮ ಮನೆಗೊಂದು ಅತ್ಯುತ್ತಮ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಎಲ್ಲ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಸದ್ದಿಲ್ಲದೇ ಅತ್ಯುತ್ತಮ ಡೀಲ್ ಡಿಸ್ಕೌಂಟ್ಗಳನ್ನು ನೀಡಲು ಮುಂದಾಗಿವೆ. ಅವುಗಳಲ್ಲಿ ಈ TOSHIBA 65 inches E350RP Series 4K Google Smart TV (65E350RP) ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಜಬರ್ದಸ್ತ್ ಡೀಲ್ ನೀಡುತ್ತಿದೆ. ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಹಾಗಾದ್ರೆ ಇದರ ಸಂಪೂರ್ಣ ಫೀಚರ್ಗಳೊಂದಿಗೆ ಆಫರ್ ಬೆಲೆ ಎಲ್ಲವನ್ನು ತಿಳಿಯಿರಿ.
Also Read: Jio Happy New Year 2026 Plans: ರಿಲಯನ್ಸ್ ಜಿಯೋ 3 ಹೊಸ ಹ್ಯಾಪಿ ನ್ಯೂ ಇಯರ್ ಪ್ಲಾನ್‌ಗಳನ್ನು ಪರಿಚಯಿಸಿದೆ!
ಮೊದಲಿಗೆ ಈ ಸ್ಮಾರ್ಟ್ ಟಿವಿಯನ್ನು ಯಾಕೆ ಖರೀದಿಸುವುದು ಉತ್ತಮ ಮತ್ತು ಇದಕ್ಕೆ ಮುಖ್ಯ ಕಾರಣಗಳೇನು ಎಂದು ನೋಡುವುದಾದರೆ ಇದರಲ್ಲಿ ನಿಮಗೆ ದೊಡ್ಡ 65 ಇಂಚಿನ ಸ್ಕ್ರೀನ್ ಜೊತೆಗೆ ಬರುತ್ತದೆ. ಈ ಬೆಲೆಗೆ ತುಂಬ ಕಡಿಮೆ ಆಯ್ಕೆಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ ಅಂದರೆ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಳೊಂದಿಗೆ ನೀಡಲಾಗಿದೆ. ಇದರಲ್ಲಿ 4K ಅಲ್ಟ್ರಾ HD ಸ್ಕ್ರೀನ್ ಅತ್ಯಂತ ಸ್ಪಷ್ಟವಾದ ಮತ್ತು ಪ್ರಕಾಶಮಾನವಾದ ಚಿತ್ರಗಳನ್ನು ತೋರಿಸುತ್ತದೆ. ಅಲ್ಲದೆ Dolby Atmos ಸೌಂಡ್ ಸಿಸ್ಟಮ್ ಬರೋಬ್ಬರಿ 30W ಸ್ಪೀಕರ್‌ಗಳ ಮೂಲಕ ಉತ್ತಮ ಧ್ವನಿಗಾಗಿ ಇರಿಸಲಾಗಿದೆ.
ಇದರಲ್ಲಿ ತೋಷಿಬಾದ REGZA Engine ZR ಎಂಬ ಪವರ್ಫುಲ್ ಟೆಕ್ನಾಲಜಿಯನ್ನು ಇದರಲ್ಲಿ ಅಳವಡಿಸಿದೆ. ಇದರಿಂದ ನೀವು ಸಿನಿಮಾ ನೋಡುವಾಗ ಉತ್ತಮ ಅನುಭವ ಪಡೆಯಲು ಮತ್ತು Dolby Vision HDR ಇದು ಉತ್ತಮ ಕಾಂಟ್ರಾಸ್ಟ್ ಮತ್ತು ಬಣ್ಣಗಳಿಗಾಗಿ ನೀಡಲಾಗಿದೆ. ಇದು ಗೂಗಲ್ ಟಿವಿಯ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುವುದರಿಂದ ನಿಮಗೆ ಬೇಕಾದ ಎಲ್ಲಾ ಅಪ್ಲಿಕೇಷನ್, ವಾಯ್ಸ್ ಕಮಾಂಡ್‌ಗಾಗಿ ಗೂಗಲ್ ಅಸಿಸ್ಟೆಂಟ್ ಮತ್ತು ಫೋನ್‌ನಿಂದ ನೇರವಾಗಿ ಟಿವಿಗೆ ಕಳುಹಿಸಲು ಕ್ರೋಮ್‌ಕಾಸ್ಟ್ ಸೌಲಭ್ಯ ಲಭ್ಯವಿದೆ.
ಇದರ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದದರೆ ಪ್ರಸ್ತುತ ಅಮೆಜಾನ್ ಮೂಲಕ ₹42,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ಈ ಸ್ಮಾರ್ಟ್ ಟಿವಿಯ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ನೀಡುತ್ತಿದೆ. ಈ ಟಿವಿಯನ್ನು ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 6,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: Fake or Safe: ಇನ್ಮೇಲೆ ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಅಸಲಿನಾ? ನಕಲಿನಾ ಈ ರೀತಿ ಪರಿಶೀಲಿಸಬಹುದು!
ಇದು 65 ಇಂಚಿನ ದೊಡ್ಡ ಸ್ಕ್ರೀನ್ ಮತ್ತು 4K ಅಲ್ಟ್ರಾ HD (3840 x 2160) ರೆಸಲ್ಯೂಶನ್ ಹೊಂದಿದೆ. ಇದರಲ್ಲಿನ ಗುಣಮಟ್ಟ ಚಿತ್ರವನ್ನು ಹೆಚ್ಚಿಸಲು ವಿಶೇಷವಾದ REGZA Engine ZR ಪ್ರೊಸೆಸರ್ ಅನ್ನು ಬಳಸಲಾಗಿದೆ. ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತ ನಿಮ್ಮ ವಾಯ್ಸ್ ಕಮಾಂಡ್ ಮೂಲಕ ಟಿವಿಯನ್ನು ನಿಯಂತ್ರಿಸಬಹುದು. ಗೂಗಲ್ ಅಸಿಸ್ಟೆಂಟ್ ಮತ್ತು ಸುಲಭವಾಗಿ ಫೋಟೋ ವಿಡಿಯೋಗಳನ್ನು ಟಿವಿಗೆ ಕಳುಹಿಸಲು ಕ್ರೋಮ್ಕಾಸ್ಟ್ ಅನ್ನು ಒಳಗೊಂಡಿದೆ. ಸಂಪರ್ಕಕ್ಕಾಗಿ 3 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ (Wi-Fi) ಮತ್ತು ಬ್ಲೂಟೂತ್ 5.0 ಸೌಲಭ್ಯಗಳಿವೆ. ಹೆಚ್ಚುವರಿಯಾಗಿ ಇದು Netflix, YouTube, Prime Video, Hotstar, SonyLiv, Hungama, JioCinema, Zee5, Eros Now ಅಪ್ಲಿಕೇಷನ್ ಸಪೋರ್ಟ್ ಮಾಡುತ್ತದೆ.