Amazon Prime day 2026
ಅಮೆಜಾನ್ ತನ್ನ ಬಹುನಿರೀಕ್ಷಿತ Prime Day Sale ಪ್ರಾರಂಭಕ್ಕೂ ಮುನ್ನ ಟೀಸರ್ ಪೇಜ್ ಅನ್ನು ಬಿಡುಗಡೆ ಮಾಡಿದೆ. ಈ ಬಾರಿ ಸ್ಮಾರ್ಟ್ ಟಿವಿಗಳ ಮೇಲೆ ಲಭ್ಯವಾಗಲಿರುವ ಆಕರ್ಷಕ ಡೀಲ್ಗಳ ಕುರಿತು ಸುಳಿವು ನೀಡಿದೆ. ಟೀಸರ್ ಮಾಹಿತಿಯಂತೆ ಸೋನಿ, ಎಲ್ಜಿ, ಸ್ಯಾಮ್ಸಂಗ್ ಸೇರಿದಂತೆ ಹಲವು ಜನಪ್ರಿಯ ಬ್ರ್ಯಾಂಡ್ಗಳ ಸ್ಮಾರ್ಟ್ ಟಿವಿಗಳ ಮೇಲೆ 65% ವರೆಗೆ ರಿಯಾಯಿತಿ ದೊರೆಯುವ ಸೂಚನೆಗಳಿವೆ. ಅಂದಹಾಗೆ ಕಂಪನಿಯು ಇದೇ ಜುಲೈ 4 ರಿಂದ ಜುಲೈ 6 ರ ವರೆಗೆ Amazon Prime Day Sale ನಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಹೀಗಾಗಿ ಹೊಸ ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿರುವವರಿಗೆ ಈ ಸೇಲ್ ಉತ್ತಮ ಅವಕಾಶವಾಗಲಿದೆ. ಹಾಗಾದರೆ ಸ್ಮಾರ್ಟ್ಟಿವಿಗಳ ಆಫರ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಜುಲೈ 2 ರಂದು Oppo Reno 16 Series ಬಿಡುಗಡೆ! ನಿರೀಕ್ಷಿತ ಫೀಚರ್ಸ್ ಹಾಗೂ ಬೆಲೆ ನೋಡಿ
ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ ಸೋನಿ ಬ್ರಾವಿಯಾ 2 ಸ್ಮಾರ್ಟ್ ಟಿವಿಯು ಪ್ರಮುಖ ಆಕರ್ಷಣೆಯಾಗಲಿದೆ. ಇದರ 55 ಇಂಚಿನ ಮಾದರಿ ಮೇಲೆ ಭಾರೀ ಬೆಲೆ ಇಳಿಕೆ ಹಾಗೂ ವಿವಿಧ ಬ್ಯಾಂಕ್ ಆಫರ್ಗಳು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಇದರ ಜೊತೆಗೆ ಪ್ರಸ್ತುತ 85,990 ರೂ.ಗಳ ಬೆಲೆ ಹೊಂದಿರುವ LG Nano 4K UHD 55 ಇಂಚಿನ ಸ್ಮಾರ್ಟ್ ಟಿವಿ ಕೂಡ ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಟೀಸರ್ನಲ್ಲಿ ಸ್ಯಾಮ್ಸಂಗ್ 55 ಇಂಚಿನ Mini LED Smart TV ಮೇಲೂ ಭಾರಿ ರಿಯಾಯಿತಿ ದೊರೆಯಲಿದೆ ಎಂದು ಸೂಚಿಸಲಾಗಿದೆ. ಆದರೆ, ನಿಖರವಾದ ಆಫರ್ ಬೆಲೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದಲ್ಲದೆ TCL, Philips, Vu, Toshiba, Hisense ಮತ್ತು Acer ಬ್ರ್ಯಾಂಡ್ಗಳ ಹಲವು ಸ್ಮಾರ್ಟ್ ಟಿವಿಗಳ ಮೇಲೂ ವಿಶೇಷ ರಿಯಾಯಿತಿಗಳು ದೊರೆಯಲಿವೆ. ಕೆಲವು ಟಿವಿಗಳ ಅಂದಾಜು ಸೇಲ್ ಬೆಲೆಗಳ ವಿವರಗಳು ಈಗಾಗಲೇ ಬಹಿರಂಗವಾಗಿವೆ.
– ಸೋನಿ ಬ್ರಾವಿಯಾ 2 (55 ಇಂಚು) – ಪ್ರಸ್ತುತ ಬೆಲೆ 63,990 ರೂ. ಬೆಲೆಯ ಈ ಟಿವಿಯು ಸೇಲ್ನಲ್ಲಿ ಸುಮಾರು 55,990 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.
– TCL 75 ಇಂಚಿನ 75Q6C QD-Mini LED – ಪ್ರಸ್ತುತ 99,990 ರೂ. ಬೆಲೆಯ ಈ ಸ್ಮಾರ್ಟ್ ಟಿವಿಯು ಪ್ರೈಮ್ ಡೇ ಸೇಲ್ನಲ್ಲಿ ಸುಮಾರು 66,990 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.
– ತೋಶಿಬಾ 50 ಇಂಚಿನ 4K Ultra HD Smart QLED TV M450RP (2025) – ಪ್ರಸ್ತುತ 32,999 ರೂ. ಬೆಲೆಯ ಈ ಟಿವಿಯು ಸೇಲ್ನಲ್ಲಿ ಸುಮಾರು 28,499 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.
– ಫಿಲಿಪ್ಸ್ 55 ಇಂಚಿನ 4K Ultra HD QLED 55MLED610/94 – ಪ್ರಸ್ತುತ 45,999 ರೂ. ಬೆಲೆಯ ಈ ಟಿವಿಯು ಸೇಲ್ನಲ್ಲಿ ಸುಮಾರು 39,999 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.
– Hisense 43 ಇಂಚಿನ 4K Ultra HD Smart QLED TV 43E75Q – ಪ್ರಸ್ತುತ 29,990 ರೂ. ಬೆಲೆಯ ಈ ಟಿವಿಯು ಸೇಲ್ನಲ್ಲಿ ಸುಮಾರು 24,999 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.
– Vu 55 ಇಂಚಿನ Vibe Series 4K QLED – ಪ್ರಸ್ತುತ 36,490 ರೂ. ಬೆಲೆಯ ಈ ಟಿವಿಯು ಸೇಲ್ನಲ್ಲಿ ಸುಮಾರು 31,990 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.
– ಏಸರ್ 50 ಇಂಚಿನ Ultra I Series 4K AR50UDGGU2875BD – ಪ್ರಸ್ತುತ 23,299 ರೂ. ಬೆಲೆಯ ಈ ಟಿವಿಯು ಸೇಲ್ನಲ್ಲಿ ಸುಮಾರು 22,999 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ.