ಆಪಲ್‌ನ ಮಡಚುವ iPhone Duo ಮೊಬೈಲ್ ಈಗ ಪ್ರಿ-ಆರ್ಡರ್‌ಗೆ ಲಭ್ಯ; ಬೆಲೆ ಹಾಗೂ ಫೀಚರ್ಸ್‌ ನೋಡಿ

ಟೆಕ್ ದಿಗ್ಗಜ ಆಪಲ್‌ ಕಂಪನಿಯು ಇತ್ತೀಚಿಗಷ್ಟೆ ಮಾರುಕಟ್ಟೆಗೆ ಪರಿಚಯಿಸಿರುವ iPhone Duo ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಐಫೋನ್‌ ಪ್ರಿಯ ಗ್ರಾಹಕರ ಗಮನ ಸೆಳೆದಿದೆ. ಈ ನೂತನ ಐಫೋನ್ ಡ್ಯುಯೊ ಇಂದಿನಿಂದ (ಅಕ್ಟೋಬರ್ 16 ರಿಂದ) Pre-order ಗೆ ಲಭ್ಯವಿದೆ. ಅಂದಹಾಗೆ ಈ ಹೊಸ ಫೋಲ್ಡೆಬಲ್ ಐಫೋನ್‌ ಆಪಲ್‌ನ ಹೊಸ A20 ಪ್ರೊ ಚಿಪ್‌ಸೆಟ್‌ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, 48MP + 48MP ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಾಗೆಯೇ ಈ ಐಫೋನ್‌ ಆಕರ್ಷಕ ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿವೆ. ಹಾಗಾದರೆ ಐಫೋನ್ ಡ್ಯುಯೊ ಮೊಬೈಲ್‌ ಮಾರಾಟ ದಿನಾಂಕ, ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 32MP ಸೆಲ್ಫಿ ಕ್ಯಾಮೆರಾ ಜೊತೆಗೆ ಬಿಗ್ ಬ್ಯಾಟರಿ ಇರುವ iQOO Z11x 5G ಮೊಬೈಲ್‌ ಬೆಲೆಯಲ್ಲಿ ಇಳಿಕೆ!

iPhone Duo ಪ್ರಿ-ಆರ್ಡರ್‌ ಮಾಹಿತಿ

ಹೊಸ ಐಫೋನ್ ಡ್ಯುಯೊ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಇಂದಿನಿಂದ (ಅಕ್ಟೋಬರ್ 16 ರಿಂದ) ಪ್ರಿ-ಆರ್ಡರ್‌ಗೆ ಲಭ್ಯವಿದೆ. ಆಸಕ್ತ ಗ್ರಾಹಕರು ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌, ಆಪಲ್‌ ವೆಬ್‌ಸೈಟ್‌ ಮೂಲಕ ಪ್ರಿ-ಆರ್ಡರ್ ಮಾಡಬಹುದು. ಇನ್ನು ಈ ಫೋನ್‌ ಸ್ಟಾರ್‌ ವೈಟ್ ಹಾಗೂ ನೈಟ್ ಸ್ಕೈ ಬಣ್ಣಗಳ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಅಕ್ಟೋವರ್ 23 ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ.

ಐಫೋನ್ ಡ್ಯುಯೊ ಫೋನಿನ ಬೆಲೆ ಮಾಹಿತಿ

ಐಫೋನ್ ಡ್ಯುಯೊ – 256GB – 2,99,900 ರೂ.ಗಳು

ಐಫೋನ್ ಡ್ಯುಯೊ – 512GB – 3,24,900 ರೂ.ಗಳು

ಐಫೋನ್ ಡ್ಯುಯೊ – 1TB – 3,74,900 ರೂ.ಗಳು

ಐಫೋನ್ ಡ್ಯುಯೊ – 2TB – 4,49,900 ರೂ.ಗಳು

ಐಫೋನ್ ಡ್ಯುಯೊ ಫೋನ್‌ ಫೀಚರ್ಸ್‌

ಐಫೋನ್ ಡ್ಯುಯೊ ಫೋಲ್ಡೆಬಲ್‌ ಮೊಬೈಲ್‌ ಐಫೋನ್‌ ಪ್ರಿಯರ ಗಮನ ಸೆಳೆಯುತ್ತಿದೆ. ಈ ಫೋಲ್ಡೆಬಲ್ ಫೋನ್‌ ಡಿಸ್‌ಪ್ಲೇ 7.76 ಇಂಚಿನ ಗಾತ್ರದಲ್ಲಿ ಇದೆ. ಇದು 2713×1920 ಪಿಕ್ಸೆಲ್‌ ರೆಸಲ್ಯೂಶನ್‌ ಬೆಂಬಲ ಹೊಂದಿದೆ. ಹಾಗೆಯೇ ಇದರ ಕವರ್ ಡಿಸ್‌ಪ್ಲೇ 5.49 ಇಂಚಿನ ಗಾತ್ರದಲ್ಲಿ ಇದ್ದು, ಇದರ ಸ್ಕ್ರೀನ್‌ 1422 x 2088 ಪಿಕ್ಸೆಲ್‌ ರೆಸಲ್ಯೂಶನ್‌ ಸಪೋರ್ಟ್‌ ಪಡೆದಿದೆ. ಅಲ್ಲದೇ ಐಫೋನ್‌ 18 ಪ್ರೊ ಸರಣಿಯಂತೆ ಆಪಲ್‌ನ ಈ ಫೋಲ್ಡೆಬಲ್ ಫೋನ್‌ ಸಹ ಹೊಸ A20 ಪ್ರೊ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿವೆ. ಇದು 256GB, 512GB, 1TB ಮತ್ತು 2TB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

ಇನ್ನು ಐಫೋನ್ ಡ್ಯುಯೊ ಮೊಬೈಲ್‌ ಕ್ಯಾಮೆರಾ ವಿಭಾಗದಲ್ಲೂ ಗಮನಾರ್ಹ ಆಕರ್ಷಣೆ ಪಡೆದುಕೊಂಡಿದೆ. ಈ ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇವುಗಳು ಕ್ರಮವಾಗಿ 48MP ಸೆನ್ಸಾರ್‌ + 48MP ಸೆನ್ಸಾರ್‌ ಅನ್ನು ಹೊಂದಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 12MP ಸೆನ್ಸಾರ್‌ನ ಕ್ಯಾಮೆರಾ ರಚನೆ ನೀಡಲಾಗಿದೆ. ಅಂದಹಾಗೆ ಈ ಫೋನ್‌ ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :