ಜುಲೈ 2 ರಂದು Oppo Reno 16 Series ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ನೋಡಿ

HIGHLIGHTS

ಇದೇ ಜುಲೈ 2 ರಂದು ಒಪ್ಪೋ ರೆನೋ 16 ಸರಣಿ ಬಿಡುಗಡೆ ಆಗಲಿದೆ

ಒಪ್ಪೋ ರೆನೋ 16 ಸರಣಿಯು ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿರಲಿದೆ

ಈ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಕಲರ್‌ ಆಯ್ಕೆಯಲ್ಲಿ ಬರಲಿದೆ

ಜುಲೈ 2 ರಂದು Oppo Reno 16 Series ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ನೋಡಿ

ಒಪ್ಪೋ ಮೊಬೈಲ್‌ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಗೆ ನೂತನವಾಗಿ Oppo Reno 16 Series ಅನ್ನು ಪರಿಚಯಿಸಲು ತಯಾರಿ ನಡೆಸಿದೆ. ಮುಂಬರುವ ಈ ಮೊಬೈಲ್‌ ಸರಣಿಯ ಲಾಂಚ್ ಕುರಿತಾಗಿ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆಯಲಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಸರಣಿಯು ಒಪ್ಪೋ ರೆನೋ 16 ಹಾಗೂ ಒಪ್ಪೋ ರೆನೋ 16c ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗೆಯೇ ಫೋನ್‌ಗಳೊಂದಿಗೆ ಎನ್‌ಕೋ ಏರ್ 5 ಟಿಡಬ್ಲ್ಯೂಎಸ್ ಇಯರ್‌ಬಡ್ಸ್‌ ಡಿವೈಸ್‌ ಅನ್ನು ಲಾಂಚ್ ಮಾಡುವ ಬಗ್ಗೆ ಸುಳಿವುಗಳಿವೆ. ಇನ್ನು ಒಪ್ಪೋ ರೆನೋ 16 ಮೊಬೈಲ್‌ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ಬಣ್ಣಗಳ ಆಯ್ಕೆಗಳೊಂದಿಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಹಾಗಾದರೆ ಒಪ್ಪೋ ರೆನೋ 16 ಸರಣಿಯ ಫೋನ್‌ಗಳ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 50MP ಕ್ಯಾಮೆರಾ ಇರುವ POCO C85 5G ಫೋನ್‌ ಭರ್ಜರಿ ಡಿಸ್ಕೌಂಟ್‌!

Oppo Reno 16 Series ಲಾಂಚ್‌ ದಿನಾಂಕ

ಒಪ್ಪೋ ರೆನೋ 16 ಮೊಬೈಲ್‌ ಸರಣಿಯು ಇದೇ ಜುಲೈ 2, 2026 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಲೈನ್‌ಅಪ್ ಅಮೆಜಾನ್ ಇ ಕಾಮರ್ಸ್‌ ತಾಣದ ಮೂಲಕ ಮಾರಾಟವಾಗುವುದನ್ನು ದೃಢಪಡಿಸಲಾಗಿದೆ. ಇನ್ನು ಈ ಫೋನ್‌ ಒಪ್ಪೋ ರೆನೋ 16 ಹಾಗೂ ಒಪ್ಪೋ ರೆನೋ 16c ಮಾಡೆಲ್‌ಗಳಲ್ಲಿ ಎಂಟ್ರಿ ಕೊಡಲಿದೆ. ಅಂದಹಾಗೆ ಈ ಸರಣಿಯು ಸ್ಟಾರಿ ವೈಟ್, ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಫೋನ್‌ಗಳ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

Oppo Reno 16 Series

ಒಪ್ಪೋ ರೆನೋ 16 ಫೋನಿನ ನಿರೀಕ್ಷಿತ ಫೀಚರ್ಸ್‌

ಮುಂಬರುವ ಹೊಸ ಒಪ್ಪೋ ರೆನೋ 16 ಸರಣಿಯು ಎರಡು ಸ್ಮಾರ್ಟ್‌ಫೋನ್‌ ಮಾಡೆಲ್‌ ಹೊಂದಿರಲಿದೆ. ಆ ಪೈಕಿ ಒಪ್ಪೋ ರೆನೋ 16 ಫೋನ್‌ 6.32 ಇಂಚಿನ 120Hz AMOLED ಡಿಸ್‌ಪ್ಲೇ ಹೊಂದಿರಲಿದ್ದು, 3D ಪಾಪ್ ಪ್ಲಾನೆಟ್ ಡಿಸೈನ್ ಪಡೆದಿರಲಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 7 ಜೆನ್ 4 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಈ ಫೋನ್‌ 6,700mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್ ಪಡೆದುಕೊಂಡಿರಲಿದೆ. ಅಲ್ಲದೇ ಇದು ಟ್ರಿಪಲ್‌ 50MP ಕ್ಯಾಮೆರಾ ರಚನೆ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.

ಒಪ್ಪೋ ರೆನೋ 16c ಫೋನಿನ ನಿರೀಕ್ಷಿತ ಫೀಚರ್ಸ್‌

ಒಪ್ಪೋ ರೆನೋ 16c ಫೋನ್‌ 6.57 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಹೊಂದಿರಲಿದ್ದು, 3D ಪಾಪ್ ಪ್ಲಾನೆಟ್ ಡಿಸೈನ್ ಪಡೆದಿರಲಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಈ ಫೋನ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲ ಪಡೆದುಕೊಂಡಿರಲಿದೆ. ಅಲ್ಲದೇ ಇದು ಟ್ರಿಪಲ್‌ 50MP ಕ್ಯಾಮೆರಾ ರಚನೆ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile