ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (Vodafone Idea) ಈಗ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಇದನ್ನು ಏರ್ಟೆಲ್ (Airtel) ಮತ್ತು ಜಿಯೋ (Jio) ಕಂಪನಿಗಳಿಗೆ ಟಕ್ಕರ್ ನೀಡಿ ತಮ್ಮ ಬಳಕೆದಾರರಿಗೆ ಹೆಚ್ಚು ಪ್ರಯೋಜನಗಳನ್ನು ನೀಡುವ ಗುರಿಯನ್ನು Vi ಕಂಪನಿ ಹೊಂದಿದೆ. ಇದೊಂದು ಡೇಟಾ ಪ್ಯಾಕ್ ಆಗಿದ್ದು ಉಚಿತವಾಗಿ ಜನಪ್ರಿಯ OTT ಅಪ್ಲಿಕೇಶನ್‌ಗಳನ್ನು ಬಳಸಲು ಅವಕಾಶ ನೀಡುತ್ತದೆ. ನೀವು ಹೆಚ್ಚು ಸೋಶಿಯಲ್ ಮೀಡಿಯಾವನ್ನು ಬಳಸುವವರಾಗಿದ್ದರೆ ಈ ಪ್ಲಾನ್ ನಿಮಗೆ ಉತ್ತಮ ಆಯ್ಕೆಯಾಗಲಿದೆ.
Disney+ Hotstar ಸೇರಿ ಬರೋಬ್ಬರಿ 13 ಉಚಿತ OTT ಅಪ್ಲಿಕೇಶನ್‌ಗಳು:
ಪ್ರಸ್ತುತ ಈ ಪ್ರಿಪೇಯ್ಡ್ ಯೋಜನೆಯ ಬೆಲೆ 202 ರೂಗಳಾಗಿದ್ದು ಇದರಲ್ಲಿ Disney+ Hotstar ಮತ್ತು SonyLIV ಸೇರಿ ಬರೋಬ್ಬರಿ 13 ಕ್ಕೂ ಅಧಿಕ OTT ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇದರ ಕ್ರಮವಾಗಿ ನಿಮಗೆ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಈ ಪ್ಲಾನ್ ₹199 ರೂಗಳಾಗಿದೆ. ಆದರೆ ಈ ಲೇಖನದಲ್ಲಿ ನಾವು ಕೇವಲ ವೊಡಾಫೋನ್ ಐಡಿಯಾ (Vodafone Idea) ನೀಡುತ್ತಿರುವ ಬೆಸ್ಟ್ ಬಂಡಲ್ ಪ್ರಿಪೇಯ್ಡ್ ಯೋಜನೆಯನ್ನು ಅಂದ್ರೆ ₹202 ರೂಗಳ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Vodafone Idea launched new OTT subscription bundle plans
ಈಗ ವೊಡಾಫೋನ್ ಐಡಿಯಾ ಬಳಕೆದಾರರು ಉಚಿತವಾಗಿ Disney+ Hotstar ಮತ್ತು SonyLIV ಸೇರಿ T20 Cricket ಟೂರ್ನಮೆಂಟ್ ಮತ್ತು SonyLIV ಅಪ್ಲಿಕೇಶನ್ಗಳಲ್ಲಿ ಭಾರತ ಟೂರ್ ಆಫ್ ಜಿಂಬಾಬ್ವೆ ಮತ್ತು ಫ್ಯಾನ್ ಕೋಡ್‌ನಲ್ಲಿ ಇಂಡಿಯಾ ಟೂರ್ ಮತ್ತು ಕೊಪಾ ಅಮೇರಿಕಾವನ್ನು ಫ್ಯಾನ್ ಕೋಡ್‌ನಲ್ಲಿ ಆನಂದಿಸಬಹುದು. Vi Movies ಮತ್ತು TV Android/Google TV, Samsung TV, Amazon Firestick TV, Android ಮೊಬೈಲ್, iOS ಮೊಬೈಲ್ ಮತ್ತು ವೆಬ್ ಸೇರಿದಂತೆ ಸಂಪರ್ಕಿತ ಟಿವಿಗಳೊಂದಿಗೆ ಬರುತ್ತದೆ.
Vodafone Idea launched new OTT subscription bundle plans
ಈಗಾಗಲೇ ಮೇಲೆ ತಿಳಿಸಿರುವಂತೆ ವೊಡಾಫೋನ್ ಐಡಿಯಾದ ಈ ₹202 ರೂಗಳ ಪ್ರಿಪೇಯ್ಡ್ ಯೋಜನೆ ಕೇವಲ 5GB ಡೇಟಾವನ್ನು ಮಾತ್ರ ಸಪೋರ್ಟ್ ಮಾಡುವುದರೊಂದಿಗೆ ಬರುತ್ತದೆ. ಇದರಲ್ಲಿ ಯಾವುದೇ ರೀತಿಯ ಕರೆಗಳು ಮತ್ತು SMS ಜೊತೆಗೆ ಯಾವುದೇ ಅನ್ಯ ವಿಶೇಷ ಪ್ರಯೋಜನಗಳಿಲ್ಲ. ಅಲ್ಲದೆ ಈ ಡೇಟಾ ಪ್ಯಾಕ್ ತನ್ನದೆಯಾದ ಒಂದು ತಿಂಗಳ ವ್ಯಾಲಿಡಿಟಿಯನ್ನು ಸಹ ಹೊಂದಿರುತ್ತದೆ. ಇದೊಂದು ಸರ್ವಿಸ್ ಯೋಜನೆಯಾಗಿದ್ದು ಈಗಾಗಲೇ ನಿಮ್ಮ ಪ್ರೈಮರಿ ಯೋಜನೆಯ ಪ್ರಯೋಜನಗಳು ಬಳಸಬಹುದು ಎನ್ನುವುದನ್ನು ಗಮನದಲ್ಲಿರುವುದು ಮುಖ್ಯವಾಗಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile