Jio 5G: ವಿಶ್ವದ ಅತ್ಯಂತ ಅಡ್ವಾನ್ಸ್ 5G ನೆಟ್‌ವರ್ಕ್ ಅನ್ನು ಭಾರತದಾದ್ಯಂತ ಹೊರತರಲು ಸಿದ್ಧವಾದ ಜಿಯೋ!

Jio 5G: ವಿಶ್ವದ ಅತ್ಯಂತ ಅಡ್ವಾನ್ಸ್ 5G ನೆಟ್‌ವರ್ಕ್ ಅನ್ನು ಭಾರತದಾದ್ಯಂತ ಹೊರತರಲು ಸಿದ್ಧವಾದ ಜಿಯೋ!
HIGHLIGHTS

ರಿಲಾಯನ್ಸ್‌ ಜಿಯೋ (Reliance Jio) ಅತಿ ಹೆಚ್ಚಿನ 5G ತರಂಗಾಂತರಗಳನ್ನು ಖರೀದಿಸಿದೆ.

ರಿಲಾಯನ್ಸ್‌ ಜಿಯೋ (Reliance Jio) ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಸಿದ್ಧವಾಗಿದೆ.

ನಾವು ಇಡೀ ಭಾರತದಲ್ಲಿ 5ಜಿ ಪರಿಚಯಿಸುವುದರೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ್ ಅನ್ನು ಆಚರಿಸುತ್ತೇದೆ.

Reliance Jio 5G: ಸೋಮವಾರ ಮುಕ್ತಾಯವಾದ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ರಿಲಾಯನ್ಸ್‌ ಜಿಯೋ (Reliance Jio) ಅತಿ ಹೆಚ್ಚಿನ 5G ತರಂಗಾಂತರಗಳನ್ನು ಖರೀದಿಸಿದೆ. ರಿಲಾಯನ್ಸ್‌ ಜಿಯೋ 5ಜಿ (Reliance Jio 5G) ಒಟ್ಟು 88078 ಕೋಟಿ ರೂ. ಮೌಲ್ಯದ 5ಜಿ ತರಂಗಾಂತರಗಳನ್ನು ರಿಲಾಯನ್ಸ್‌ ಜಿಯೋ ಖರೀದಿ ಮಾಡಿದೆ. 700 ಮೆಗಾಹರ್ಟ್ಸ್‌, 800 ಮೆಗಾಹರ್ಟ್ಸ್‌, 1800 ಮೆಗಾಹರ್ಟ್ಸ್‌, 3300 ಮೆಗಾಹರ್ಟ್ಸ್‌ ಮತ್ತು 26 ಗಿಗಾಹರ್ಟ್ಸ್‌ ಬ್ಯಾಂಡ್‌ಗಳನ್ನು ರಿಲಾಯನ್ಸ್‌ ಜಿಯೋ ಖರೀದಿ ಮಾಡಿದೆ.

ರಿಲಾಯನ್ಸ್‌ ಜಿಯೋ 5ಜಿ (Reliance Jio 5G)

ರಿಲಾಯನ್ಸ್‌ ಜಿಯೋ ಇನ್‌ಫೋಕಾಮ್‌ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ “ಭಾರತವು ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ. ಈ ಧ್ಯೇಯವನ್ನು ಇಟ್ಟುಕೊಂಡೇ ನಾವು ಜಿಯೋ ಸ್ಥಾಪಿಸಿದ್ದೇವೆ. ಜಿಯೋ 4ಜಿ ಮೂಲಕ ಹೊರಹೊಮ್ಮಿಸಿದ ಫಾಸ್ಟ್, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಈಗ ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಜಿಯೋ ಸಿದ್ಧವಾಗಿದೆ.

ನಾವು ಇಡೀ ಭಾರತದಲ್ಲಿ 5ಜಿ ಪರಿಚಯಿಸುವುದರೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ್ ಅನ್ನು ಆಚರಿಸುತ್ತೇವೆ. ವಿಶ್ವದರ್ಜೆಯ 5ಜಿ ನೆಟ್‌ವರ್ಕ್‌ ಅನ್ನು ಕೈಗೆಟಕುವ ದರದಲ್ಲಿ ಒದಗಿಸಲು ನಾವು ಸಿದ್ಧವಾಗಿದ್ದೇವೆ. ನಾವು ಭಾರತದ ಡಿಜಿಟಲ್ ಕ್ರಾಂತಿಯನ್ನು ವೇಗಗೊಳಿಸುವ ಸೇವೆಗಳು, ವೇದಿಕೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತೇವೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಮಿಷನ್‌ಗೆ ಮತ್ತೊಂದು ಹೆಮ್ಮೆಯ ಕೊಡುಗೆಯನ್ನು ನೀಡುತ್ತೇವೆ” ಎಂದಿದ್ದಾರೆ.

700 ಮೆಗಾಹರ್ಟ್ಸ್‌ ತರಂಗಾಂತರಗಳನ್ನು ಈ ಹರಾಜಿನಲ್ಲಿ ಜಿಯೋ ಪಡೆದಿದ್ದು ದೇಶದಲ್ಲಿ ನಿಜವಾದ 5ಜಿ ಸೇವೆಗಳನ್ನು ಜಿಯೋ ಮಾತ್ರ ಒದಗಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೆ ಈ ಹರಾಜಿನಲ್ಲಿ ಪಡೆದ ತರಂಗಾಂತರಗಳೂ ಸೇರಿದಂತೆ ಜಿಯೋ ಒಟ್ಟು 26,772 ಮೆಗಾಹರ್ಟ್ಸ್‌ (ಡೌನ್‌ಲಿಂಕ್‌ ಹಾಗೂ ಅಪ್‌ಲಿಂಕ್‌) ತರಂಗಾಂತರಗಳನ್ನು ಜಿಯೋ ಪಡೆದುಕೊಂಡಿರಲಿದೆ. ಇದು ದೇಶದಲ್ಲೇ ಅತಿ ಹೆಚ್ಚು ತರಂಗಾಂತರಗಳನ್ನು ಹೊಂದಿರುವ ಸಂಸ್ಥೆಯಾಗಿರಲಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo