Reliance Jio rs 2999 prepaid plan explained: ರಿಲಯನ್ಸ್ ಜಿಯೋ ಅನೇಕ ರೀತಿಯ ವಾರ್ಷಿಕ ರೀಚಾರ್ಜ್ (Jio Annual Plans) ಯೋಜನೆಗಳನ್ನು ನೀಡುತ್ತದೆ. ಭಾರತದ ಅತಿದೊಡ್ಡ ಟೆಲಿಕಾಂ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಅತ್ಯುತ್ತಮವಾದ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದ್ದಿದೆ. ರಿಲಯನ್ಸ್ ಜಿಯೋ (Reliance Jio) ನಿಮಗೆ ಪ್ರಮುಖವಾಗಿ ವಾರ್ಷಿಕ ಯೋಜನೆಯಲ್ಲಿ ಪ್ರಸ್ತುತ 8 ವಿವಿಧ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದ್ದು ಅವುಗಳಲ್ಲಿ ಅತಿ ಕಡಿಮೆ ಬೆಲೆಗೆ ಹೆಚ್ಚು ಅನುಕೂಲವನ್ನು ನೀಡುತ್ತಿರುವ ಜನಪ್ರಿಯ ರಿಲಯನ್ಸ್ ಜಿಯೋ (Reliance Jio) ರೂ. 2999 ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.
Survey
✅ Thank you for completing the survey!
Reliance Jio ವಾರ್ಷಿಕ ರೀಚಾರ್ಜ್ ಯೋಜನೆ
ರಿಲಯನ್ಸ್ ಜಿಯೋ (Reliance Jio) ಅನೇಕ ರೀತಿಯ ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಇವುಗಳಲ್ಲಿ ಕೆಲವು ರೀಚಾರ್ಜ್ ಯೋಜನೆಗಳು 336 ದಿನಗಳವರೆಗೆ ಇವೆ. ಇವುಗಳನ್ನು ವಾರ್ಷಿಕ ರೀಚಾರ್ಜ್ ಯೋಜನೆಯ ಹೆಸರಿನಲ್ಲಿ ನೀಡಲಾಗುತ್ತದೆ. ಇದರಲ್ಲಿ ಪ್ರತಿ ತಿಂಗಳು 28 ದಿನಗಳವರೆಗೆ 336 ದಿನಗಳವರೆಗೆ ಕರೆ ಮತ್ತು ಡೇಟಾ ಸೌಲಭ್ಯ ಲಭ್ಯವಿದೆ. ಇಂತಹ ಪರಿಸ್ಥಿತಿಯಲ್ಲಿ ಇದು 12 ಅಲ್ಲ ಸುಮಾರು 11 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಆದರೆ ಇಂದು ನಾವು 365 ದಿನಗಳ ವ್ಯಾಲಿಡಿಟಿಯ ಯೋಜನೆಯನ್ನು ತಂದಿದ್ದೇವೆ. ಇದು ನಿಮಗೆ 12 ತಿಂಗಳವರೆಗೆ ಉಚಿತ ಕರೆ, ಮೆಸೇಜ್ ಮತ್ತು ಅನಿಯಮಿತ ಡೇಟಾ ಸೌಲಭ್ಯವನ್ನು ನೀಡುತ್ತದೆ.
ರಿಲಯನ್ಸ್ ಜಿಯೋದ ರೂ 2999 ವಾರ್ಷಿಕ ಯೋಜನೆಯಲ್ಲಿ ನಿಮ್ಮ ಮಾಸಿಕ ವೆಚ್ಚವು ಸುಮಾರು ರೂ 230 ಕ್ಕೆ ಬರುತ್ತದೆ. ಈ ವಾರ್ಷಿಕ ಯೋಜನೆಯಲ್ಲಿ ದೈನಂದಿನ 2.5GB ಡೇಟಾದಂತೆ ಬಳಕೆದಾರರಿಗೆ ಒಟ್ಟು 912.5 GB ಡೇಟಾವನ್ನು ನೀಡಲಾಗುತ್ತದೆ. ನಿಮ್ಮ ದೈನಂದಿನ ಡೇಟಾ ಖಾಲಿಯಾದರೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಜಿಯೋದ ರೂ 2999 ಯೋಜನೆಯೊಂದಿಗೆ ಜಿಯೋ ಅನಿಯಮಿತ ದೈನಂದಿನ ಡೇಟಾವನ್ನು ಪೂರಕ ಆಯ್ಕೆಯಾಗಿ ನೀಡುತ್ತದೆ.
ಇದಲ್ಲದೇ ಉಚಿತ ಸಂದೇಶ ಕಳುಹಿಸುವ ಸೌಲಭ್ಯ ದೊರೆಯಲಿದೆ. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ವಾಯ್ಸ್ ಕರೆ ಸೌಲಭ್ಯವನ್ನು ಪಡೆಯುತ್ತಾರೆ. ಇದು ಮಾತ್ರವಲ್ಲದೆ ಈ ಯೋಜನೆಯು ಪ್ರತಿದಿನ 100 ಉಚಿತ SMS ನೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ನೀವು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಸೇವೆಗಳನ್ನು ಪಡೆಯುತ್ತೀರಿ.
ಒಂದು ವೇಳೆ ನೀವು ಮತ್ತಷ್ಟು ಹಣವನ್ನು ಅಂದ್ರೆ ಕೇವಲ 179 ರೂಗಳನ್ನು ಹೆಚ್ಚುವರಿಯಾಗಿ ನೀಡಿದರೆ ಈ ಮತ್ತೊಂದು ಅತ್ಯುತ್ತಮವಾದ ರಿಲಯನ್ಸ್ ಜಿಯೋ (Reliance Jio) ರೂ. 3178 ಯೋಜನೆಯನ್ನು ಪಡೆಯಬಹುದು. ಈಗ ನೀವು ಕೇಳುವ ಪ್ರಶ್ನೆ ಅಂದ್ರೆ ಇದರಲ್ಲಿ ಏನು ಪ್ರಯೋಜನ ಅಂಥ ಇದಕ್ಕೆ ಉತ್ತರ ಕೇವಲ 179 ರೂಗಳಿಗೆ ನಿಮಗೆ ಮೇಲಿನ ಎಲ್ಲ ಪ್ರಯೋಜನಗಳೊಂದಿಗೆ ಪೂರ್ತಿ 1 ವರ್ಷಕ್ಕೆ ಉಚಿತ DISNEY+ HOTSTAR ಚಂದಾದಾರಿಕೆಯನ್ನು ಪಡೆಯಬಹುದು. ಇದರೊಂದಿಗೆ ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ವಾಯ್ಸ್ ಕರೆ ಸೌಲಭ್ಯವನ್ನು ಪಡೆಯುತ್ತಾರೆ. ಇದು ಮಾತ್ರವಲ್ಲದೆ ಈ ಯೋಜನೆಯು ಪ್ರತಿದಿನ 100 ಉಚಿತ SMS ನೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ನೀವು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಸೇವೆಗಳನ್ನು ಸಹ ಪಡೆಯುತ್ತೀರಿ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile