ಭಾರತದಲ್ಲಿ Vivo T5 5G ಸ್ಮಾರ್ಟ್‌ಫೋನ್ ಬಿಡುಗಡೆ; ಕರ್ವ್ಡ್ ಡಿಸ್‌ಪ್ಲೇ, ಬಿಗ್ ಬ್ಯಾಟರಿ ಹೈಲೈಟ್
ವಿವೋ T5 ಫೋನ್ 7,050mAh ಬ್ಯಾಟರಿ ಪಡೆದುಕೊಂಡಿದೆ
ವಿವೋ T5 ಸ್ಮಾರ್ಟ್‌ಫೋನ್ 50MP ಕ್ಯಾಮೆರಾ ಒಳಗೊಂಡಿದೆ
ಈ ಮೊಬೈಲ್ ರಾಯಲ್ ಬ್ರಾನ್ಜ್ ಮತ್ತು ಸಿಲ್ವರ್ ಗ್ರೀನ್ ಕಲರ್ ಆಯ್ಕೆ ಪಡೆದಿದೆ
ಜನಪ್ರಿಯ ವಿವೋ ಮೊಬೈಲ್ ಕಂಪನಿಯು ಹೊಸದಾಗಿ Vivo T5 ಸ್ಮಾರ್ಟ್‌ಫೋನ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಮೊಬೈಲ್ MediaTek Dimensity 7500 Turbo ಚಿಪ್‌ಸೆಟ್ ಪ್ರೊಸೆಸರ್ ಸಪೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 144Hz ರಿಫ್ರೆಶ್ ರೇಟ್ ಜೊತೆಗೆ 7,050mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಮುಂಭಾಗದಲ್ಲಿ ಇದು 50MP ಸೆನ್ಸಾರ್‌ನ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ ರಾಯಲ್ ಬ್ರಾನ್ಜ್ ಮತ್ತು ಸಿಲ್ವರ್ ಗ್ರೀನ್ ಕಲರ್ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಹಾಗಾದರೇ ವಿವೋ T5 ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Jio ಟೆಲಿಕಾಂನ 629 ರೂ.ಗಳ ಪ್ಲಾನಿನಲ್ಲಿ ಸಖತ್ ಪ್ರಯೋಜನ! ಓಟಿಟಿ, ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ
Vivo T5 ಮೊಬೈಲ್ ಬೆಲೆ ಹಾಗೂ ಲಭ್ಯತೆ
ವಿವೋ ಕಂಪನಿಯ ವಿವೋ T5 ಮೊಬೈಲ್ ಆಕರ್ಷಕ ಫೀಚರ್ಸ್‌ಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ 6GB + 128GB ಸ್ಟೋರೇಜ್ ವೇರಿಯಂಟ್ 34,999 ರೂ.ಗಳ ಬೆಲೆಯನ್ನು ಹೊಂದಿದೆ. ಇನ್ನು 8GB + 128GB ಸ್ಟೋರೇಜ್ ವೇರಿಯಂಟ್ 39,999 ರೂ.ಗಳ ಬೆಲೆ ಪಡೆದುಕೊಂಡಿದೆ. ಹಾಗೆಯೇ 8GB + 256GB ಸ್ಟೋರೇಜ್ ವೇರಿಯಂಟ್ 44,999 ರೂ.ಗಳ ಬೆಲೆ ಪಡೆದುಕೊಂಡಿದೆ. ಅದೇ ರೀತಿ ಟಾಪ್ ಎಂಡ್ 12GB + 256GB ವೇರಿಯಂಟ್ ಬೆಲೆಯು 49,999 ರೂ.ಗಳು ಆಗಿದೆ. ಈ ಫೋನ್ ರಾಯಲ್ ಬ್ರಾನ್ಜ್ ಮತ್ತು ಸಿಲ್ವರ್ ಗ್ರೀನ್ ಕಲರ್ ಆಯ್ಕೆ ಪಡೆದುಕೊಂಡಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 9 ರಂದು ಫ್ಲಿಪ್‌ಕಾರ್ಟ್ ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿದೆ.

ವಿವೋ T5 ಮೊಬೈಲ್ ಫೀಚರ್ಸ್
ವಿವೋ T5 ಮೊಬೈಲ್ 6.83 ಇಂಚಿನ 1.5K 3D ಕರ್ವ್ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಜೊತೆಗೆ 2,000 nits ಬ್ರೈಟ್ನೆಸ್ ಸೌಲಭ್ಯ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ MediaTek Dimensity 7500 Turbo ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಈ ಫೋನ್ ನಾಲ್ಕು ಭಿನ್ನ ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 16 ಆಧಾರಿತ ಒರಿಜಿನ್ OS 6 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾಗೆಯೇ ವಿವೋ T5 ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50MP ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 7,050mAh ಬ್ಯಾಟರಿ ಸಪೋರ್ಟ್ ಹೊಂದಿರುವ ಜೊತೆಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದುಕೊಂಡಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP68 + IP69 ರೇಟಿಂಗ್ ಪಡೆದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
