Meta Muse Voice Transcribe ಬಿಡುಗಡೆ: 70ಕ್ಕೂ ಹೆಚ್ಚು ಭಾಷೆಗಳಲ್ಲಿ ತರಬೇತಿ, ಕನ್ನಡಕ್ಕೂ ಬೆಂಬಲ
ಟೆಕ್ ದಿಗ್ಗಜ ಮೆಟಾ ಸಂಸ್ಥೆಯು ತನ್ನ Meta Superintelligence Labs ಮೂಲಕ Muse Voice Transcribe ಎಂಬ ಹೊಸ AI ಆಧಾರಿತ ಆಡಿಯೊ ಗ್ರಹಿಕೆ ಮಾದರಿಯನ್ನು ಬಿಡುಗಡೆ ಮಾಡಿದೆ. ಮಾತನಾಡುತ್ತಿರುವಾಗಲೇ ವಾಯ್ಸ್ ಅನ್ನು ಟೆಕ್ಸ್ಟ್ ಪರಿವರ್ತಿಸುವ ಈ ಮಾದರಿ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು ಮತ್ತು ಬೆಂಗಾಲಿ ಸೇರಿದಂತೆ ಕೆಲವು ಪ್ರಮುಖ ಭಾರತೀಯ ಭಾಷೆಗಳಿಗೆ ಸ್ಥಳೀಯ ಬೆಂಬಲ ನೀಡುತ್ತದೆ. ಮ್ಯೂಸ್ ವಾಯ್ಸ್ ಟ್ರಾನ್ಸ್‌ಕ್ರೈಬ್ ಸಂಭಾಷಣೆ ನಡೆಯುತ್ತಿರುವಾಗಲೇ ಮಾತನ್ನು ಟೆಕ್ಸ್ಟ್ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಇದರಲ್ಲಿ ಒಂದೇ ಸಂಭಾಷಣೆಯಲ್ಲಿ ಭಾಷೆಗಳು ಬದಲಾಗುವ code-switching ಸಂದರ್ಭವನ್ನೂ ಗುರುತಿಸಬಹುದು. ಭಾರತದಲ್ಲಿ ಪ್ರಾದೇಶಿಕ ಭಾಷೆಯ ಜೊತೆಗೆ ಇಂಗ್ಲಿಷ್ ಪದಗಳನ್ನು ಬಳಸುವುದು ಸಾಮಾನ್ಯವಾಗಿರುವುದರಿಂದ ಈ ಆಯ್ಕೆಗಳು ಉಪಯುಕ್ತವಾಗಬಹುದು.
SurveyAlso Read : Jio ಟೆಲಿಕಾಂನ 629 ರೂ.ಗಳ ಪ್ಲಾನಿನಲ್ಲಿ ಸಖತ್ ಪ್ರಯೋಜನ! ಓಟಿಟಿ, ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ
Muse Voice Transcribe: 25 ಭಾಷೆಗಳ ಬೆಂಬಲ
ಮೆಟಾ ಪ್ರಕಾರ ಮಾದರಿಯನ್ನು 70ಕ್ಕೂ ಹೆಚ್ಚು ಭಾಷೆಗಳಲ್ಲಿ ತರಬೇತುಗೊಳಿಸಲಾಗಿದ್ದು, ಆರಂಭಿಕ ಹಂತದಲ್ಲಿ 25 ಭಾಷೆಗಳನ್ನು ಮೌಲ್ಯೀಕರಿಸಲಾಗಿದೆ. ಡೆವಲಪರ್‌ಗಳು ತಮ್ಮ ಅಪ್ಲಿಕೇಶನ್‌ಗಳಲ್ಲಿ ಸ್ಪೀಚ್-ಟು-ಟೆಕ್ಸ್ಟ್ ಸೌಲಭ್ಯವನ್ನು ಸೇರಿಸಲು Meta Model API ಮೂಲಕ ಇದನ್ನು ಬಳಸಬಹುದು. ಈ ತಂತ್ರಜ್ಞಾನವನ್ನು ಈಗಾಗಲೇ Mac ಮತ್ತು Meta AI for Muse Code ನಲ್ಲಿ ಡಿಕ್ಟೇಶನ್‌ಗಾಗಿ ಬಳಸಲಾಗುತ್ತಿದೆ.

ಪ್ರಮುಖ ಹೈಲೈಟ್ಸ್
ಮ್ಯೂಸ್ ವಾಯ್ಸ್ ಟ್ರಾನ್ಸ್‌ಕ್ರೈಬ್ ನೈಜ-ಸಮಯದ ಪ್ರತಿಲೇಖನ ಸ್ಪೀಕರ್ ಬೇರ್ಪಡಿಕೆ ಮತ್ತು endpointing ಅನ್ನು ಒಂದೇ ವ್ಯವಸ್ಥೆಯಲ್ಲಿ ಸಂಯೋಜಿಸುತ್ತದೆ. ಒಬ್ಬ ವ್ಯಕ್ತಿ ಯಾವಾಗ ಮಾತನಾಡಲು ಆರಂಭಿಸುತ್ತಾರೆ ಅಥವಾ ನಿಲ್ಲಿಸುತ್ತಾರೆ ಎಂಬುದನ್ನೂ ಇದು ಗುರುತಿಸಬಹುದು. ಮಾದರಿ 20ಕ್ಕೂ ಹೆಚ್ಚು ಸ್ಪೀಕರ್‌ಗಳನ್ನು ಪ್ರತ್ಯೇಕವಾಗಿ ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಒಂದು ಗಂಟೆಗೂ ಹೆಚ್ಚು ಅವಧಿಯ ಆಡಿಯೊ ರೆಕಾರ್ಡಿಂಗ್‌ಗಳನ್ನೂ ಪ್ರಕ್ರಿಯೆಗೊಳಿಸಬಹುದು.
ಮೆಟಾ ಪ್ರಕಾರ, ಮಾದರಿ ಧ್ವನಿಯನ್ನು ಸುಮಾರು 80 ಮಿಲಿಸೆಕೆಂಡ್‌ಗಳ ಸಣ್ಣ ಭಾಗಗಳಲ್ಲಿ ವಿಶ್ಲೇಷಿಸುತ್ತದೆ. ಸುಲಭವಾಗಿ ಗುರುತಿಸಬಹುದಾದ ಪದಗಳನ್ನು ತ್ವರಿತವಾಗಿ ಪ್ರತಿಲೇಖನ ಮಾಡಲಾಗುತ್ತದೆ. ಸಂಕೀರ್ಣ ಪದಗಳ ಸಂದರ್ಭದಲ್ಲಿ ಹೆಚ್ಚುವರಿ ಆಡಿಯೊ ಮಾಹಿತಿಯನ್ನು ಪಡೆದು ಬಳಿಕ ನಿರ್ಧಾರಕ್ಕೆ ಬರುತ್ತದೆ.
ಪ್ರತಿಲೇಖನದ ವೇಗ ಮತ್ತು ನಿಖರತೆಯ ನಡುವೆ ಸಮತೋಲನ ಸಾಧಿಸಲು Reinforcement Learning ಬಳಸಲಾಗಿದೆ. ಜೊತೆಗೆ ಭಾಷೆ, ಕೀವರ್ಡ್ ಮತ್ತು ಸಂದರ್ಭದ ಮಾಹಿತಿಯನ್ನು ಬಳಸಿಕೊಂಡು ಪದಗಳನ್ನು ಹೆಚ್ಚು ನಿಖರವಾಗಿ ಗುರುತಿಸಲು ಮಾದರಿ ನೆರವಾಗುತ್ತದೆ. ಒಟ್ಟಿನಲ್ಲಿ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ನೈಜ-ಸಮಯದ ಧ್ವನಿ ಪ್ರತಿಲೇಖನಕ್ಕೆ ಮ್ಯೂಸ್ ವಾಯ್ಸ್ ಟ್ರಾನ್ಸ್‌ಕ್ರೈಬ್ ಹೊಸ ಅವಕಾಶಗಳನ್ನು ತೆರೆದಿಡುವ ಸಾಧ್ಯತೆಯಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
