Jio ಟೆಲಿಕಾಂನ 198 ರೂ.ಗಳ ಪ್ಲಾನಿನಲ್ಲಿ ಏನುಂಟು ಏನಿಲ್ಲ! ಈ ಯೋಜನೆ ರೀಚಾರ್ಜ್‌ಗೆ ಉತ್ತಮವೇ?

HIGHLIGHTS

ಜಿಯೋ ಸಂಸ್ಥೆಯ 198 ರೂ.ಗಳ ಪ್ಲಾನ್ ಅಲ್ಪಾವಧಿ ಯೋಜನೆ ಆಗಿದೆ

ಜಿಯೋ ಟೆಲಿಕಾಂನ ಈ ರೀಚಾರ್ಜ್‌ ಯೋಜನೆಗಳಲ್ಲಿ 14 ದಿನಗಳ ವ್ಯಾಲಿಡಿಟಿ

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್‌ ಕರೆ ಸೌಲಭ್ಯ

Jio ಟೆಲಿಕಾಂನ 198 ರೂ.ಗಳ ಪ್ಲಾನಿನಲ್ಲಿ ಏನುಂಟು ಏನಿಲ್ಲ! ಈ ಯೋಜನೆ ರೀಚಾರ್ಜ್‌ಗೆ ಉತ್ತಮವೇ?

ಟೆಲಿಕಾಂ ದೊಡ್ಡಣ್ಣ ಎನಿಸಿಕೊಂಡಿರುವ Jio ಕಂಪನಿಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಏರ್‌ಟೆಲ್‌ ಟೆಲಿಕಾಂ ಹಾಗೂ ವಿ ಕಂಪನಿಗಳಿಗೆ ಪೈಪೋಟಿ ನೀಡುತ್ತಾ ಮುಂದೆ ಸಾಗಿದೆ. ಅಲ್ಲದೇ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಭಿನ್ನ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಆಯ್ಕೆಗಳನ್ನು ಒದಗಿಸಿದೆ. ಅದರಲ್ಲೂ ಕಂಪನಿಯ ಬಜೆಟ್ ಬೆಲೆಯಲ್ಲಿ ಹೆಚ್ಚಿನ ಡೇಟಾ ಅಥವಾ ದೀರ್ಘ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಕೆಲವು ಯೋಜನೆಗಳು ಅತ್ಯುತ್ತಮ ಆಯ್ಕೆ ಎನಿಸಿವೆ. ಅಂತಹ ಪ್ಲಾನ್‌ಗಳ ಲಿಸ್ಟ್‌ನಲ್ಲಿ 198 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌ ಸಹ ಗಮನ ಸೆಳೆಯುತ್ತದೆ. ವಿಶೇಷವಾಗಿ ಹೆಚ್ಚಿನ ದೈನಂದಿನ ಡೇಟಾ ಅಗತ್ಯವಿರುವವರಿಗೆ ಈ ಪ್ಲಾನ್‌ ಆಸಕ್ತಿದಾಯಕ ಆಯ್ಕೆಯಾಗಬಹುದು. ಹಾಗಾದರೆ ಜಿಯೋ ಟೆಲಿಕಾಂನ 198 ರೂ.ಗಳ ಪ್ಲಾನ್‌ನಲ್ಲಿ ಲಭ್ಯವಿರುವ ಡೇಟಾ ಮತ್ತು ಇತರ ಪ್ರಯೋಜನಗಳ ಮಾಹಿತಿ ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : Vivo ಕಂಪನಿಯ ಈ ಸ್ಟೈಲಿಶ್‌ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಜಬರ್ದಸ್ತ್‌ ಇಳಿಕೆ! ಟ್ರಿಪಲ್‌ ಕ್ಯಾಮೆರಾ ಸೌಲಭ್ಯ

Jio 198 ರೂ.ಗಳ ಪ್ಲಾನ್‌ ಮಾಹಿತಿ

ಜಿಯೋ ಟೆಲಿಕಾಂನ 198 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 14 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು.

jio (2)

ಜಿಯೋ ಸಂಸ್ಥೆಯ 450 ರೂ.ಗಳ ಪ್ಲಾನ್

ಜಿಯೋ ಟೆಲಿಕಾಂನ 450 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 36 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು.

ಜಿಯೋ ಸಂಸ್ಥೆಯ 399 ರೂ.ಗಳ ಯೋಜನೆ

ಜಿಯೋ ಟೆಲಿಕಾಂನ 399 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು.

ಜಿಯೋ ಸಂಸ್ಥೆಯ 349 ರೂ.ಗಳ ಪ್ಲಾನ್

ಜಿಯೋ ಸಂಸ್ಥೆಯ 349 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 SMS ಸೌಲಭ್ಯ ಕೂಡಾ ದೊರೆಯುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile