ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಿಕ್ಕಾಪಟ್ಟೆ ಕಡಿಮೆ ಬೆಲೆಯ ಯೋಜನೆಗಳಿಗೆ ಹೆಸರುವಾಸಿಯಾಗಿದೆ.
BSNL ಹೊಂದಿರುವ ಈ 997 ರೂಗಳ ಜಬರ್ದಸ್ತ್ ಪ್ಲಾನ್ ಇಂದು ಭಾರತದಲ್ಲಿ ಅತ್ಯುತ್ತಮ ಆರ್ಥಿಕ ಆಯ್ಕೆಗಳಲ್ಲಿ ಒಂದಾಗಿದೆ.
ಇದು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಗ್ರಾಮೀಣ ಬಳಕೆದಾರರು ಮತ್ತು ಡೈಲಿ ಡೇಟಾ ಮತ್ತು ಕರೆ ಬಯಸುವವರಿಗೆ ಬೆಸ್ಟ್ ಆಗಿದೆ.
BSNL 5 Month Plan: ಟೆಲಿಕಾಂ ಆಪರೇಟರ್‌ಗಳು ಮೊಬೈಲ್ ರೀಚಾರ್ಜ್ ದರಗಳನ್ನು ಏರಿಸುತ್ತಿರುವ ಸಂಧರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಿಕ್ಕಾಪಟ್ಟೆ ಕಡಿಮೆ ಬೆಲೆಯ ಪರ್ಯಾಯ ಮಾರ್ಗವನ್ನು ತೆರೆಯುತ್ತಿದೆ. ಯಾಕೆಂದರೆ ದಿನಗಳ ಲೆಕ್ಕದಲ್ಲಿ ರಿಚಾರ್ಜ್ ಯೋಜನಗಳ ಹೆಚ್ಚುತ್ತಿರುವ ಈಗ ಬಿಎಸ್ಎನ್ಎಲ್ ಮಾತ್ರ ಹೆಚ್ಚು ಹಣ ಖರ್ಚು ಮಾಡದೆ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತಿದೆ. BSNL ಬಳಕೆದಾರರಿಗೆ ತಮ್ಮ ಈ 997 ರೂಗಳ ಜಬರ್ದಸ್ತ್ ಪ್ರಿಪೇಯ್ಡ್ ಯೋಜನೆ ಪ್ರಸ್ತುತ ಭಾರತದಲ್ಲೇ ಲಭ್ಯವಿರುವ ಅತ್ಯುತ್ತಮ ಆರ್ಥಿಕ ಆಯ್ಕೆಗಳಲ್ಲಿ ಒಂದಾಗಿದೆ. ಇದು ಮೂಲತಃ ಇದು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಗ್ರಾಮೀಣ ಬಳಕೆದಾರರು ಅಥವಾ ಇತರರಿಗೆ ದೈನಂದಿನ ಡೇಟಾ ಮತ್ತು ಕರೆ ಪ್ರಯೋಜನಗಳೊಂದಿಗೆ ತಿಂಗಳುಗಟ್ಟಲೆ ತಮ್ಮ ಸಂಖ್ಯೆಗಳನ್ನು ಸಕ್ರಿಯವಾಗಿರಿಸಿಕೊಳ್ಳಲು ಸಾಕಷ್ಟು ಆಸಕ್ತಿದಾಯಕ ಯೋಜನೆಯಾಗಿದೆ.
SurveyAlso Read: ಅಮೆಜಾನ್‌ನಲ್ಲಿ ಇಂದು boAt Dolby Audio Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
BSNL ಅತಿ ಕಡಿಮೆ ಬೆಲೆಗೆ ಪೂರ್ತಿ 5 ತಿಂಗಳ ವ್ಯಾಲಿಡಿಟಿ:
ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ದೀರ್ಘಾವಧಿಯ ಸೇವೆಯನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯ ನಡುವೆ ಬಿಎಸ್‌ಎನ್‌ಎಲ್ ಅತಿ ಕಡಿಮೆ ಬೆಲೆಗೆ ಪೂರ್ತಿ 5 ತಿಂಗಳ ಅಂದರೆ ಬರೋಬ್ಬರಿ 150 ದಿನಗಳ ವ್ಯಾಲಿಡಿಟಿ ನೀಡುವ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಯು ಪ್ರಮುಖವಾಗಿ ದ್ವಿತೀಯ ಸಿಮ್ ಬಳಸುವವರಿಗೆ ಅಥವಾ ಕಡಿಮೆ ಖರ್ಚಿನಲ್ಲಿ ದೀರ್ಘಕಾಲದವರೆಗೆ ಫೋನ್ ಕರೆ ಮತ್ತು ಡೇಟಾ ಸೌಲಭ್ಯ ಬಯಸುವವರಿಗೆ ವರದಾನವಾಗಿದೆ.

ಇದರಲ್ಲಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದು ಮತ್ತು ಪ್ರತಿದಿನ ನಿಗದಿತ ಪ್ರಮಾಣದ 4G ಡೇಟಾವನ್ನು ಪಡೆಯುತ್ತಾರೆ. ಬಜೆಟ್ ಸ್ನೇಹಿ ಬೆಲೆಯಲ್ಲಿ ಸತತ ಐದು ತಿಂಗಳ ಕಾಲ ರೀಚಾರ್ಜ್ ಚಿಂತೆಯಿಲ್ಲದೆ ಇರಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಈ ಬೆಲೆಗೆ ಇಷ್ಟು ವ್ಯಾಲಿಡಿಟಿಯನ್ನು ಬೇರೆ ಯಾವುದೇ ಟೆಲಿಕಾಂ Jio, Airtel ಅಥವಾ Vi ಕಂಪನಿಗಳು ಸದ್ಯಕ್ಕೆ ನೀಡುತ್ತಿಲ್ಲ ಅನ್ನುವದನ್ನು ಗಮನಿಸಬೇಕಾದ ಮಾಹಿತಿಯಾಗಿದೆ.
ಬಿಎಸ್ಎನ್ಎಲ್ ರೂ.997 ರೀಛಾರ್ಜ್ ಪ್ಲಾನ್ ವಿವರಣೆಗಳು:
ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ ಈ 997 ರೂಗಳ ರಿಚಾರ್ಜ್ ಯೋಜನೆಯಲ್ಲಿ ನಿಮಗೆ ಅನಿಯಮಿತ ಕರೆಗಳು ಅಂದ್ರೆ ಯಾವುದೇ ನೆಟ್‌ವರ್ಕ್‌ಗೆ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಇದರಲ್ಲಿ ಸೇರಿ ಅನಿಯಮಿತ ಕರೆಗಳನ್ನು ಮಾಡಬಹುದು. ಇದರಲ್ಲಿ ಪ್ರತಿದಿನ 2GB ಹೈ-ಸ್ಪೀಡ್ 4G ಡೇಟಾವನ್ನು ನೀಡಲಾಗುತ್ತದೆ. ದಿನದ ಮಿತಿ ಮುಗಿದ ನಂತರವೂ 40Kbps ವೇಗದಲ್ಲಿ ಇಂಟರ್ನೆಟ್ ಬಳಸಲು ಅವಕಾಶವಿದೆ. ಅಲ್ಲದೆ ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 100 ಉಚಿತ SMS ಗಳನ್ನು ಕಳುಹಿಸಬಹುದು.
ಇದರಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೆ ಬಿಎಸ್‌ಎನ್‌ಎಲ್ ಟ್ಯೂನ್ಸ್ (Caller Tune) ಮತ್ತು ಹಾರ್ಡಿ ಗೇಮ್ಸ್‌ನಂತಹ ಮೌಲ್ಯವರ್ಧಿತ ಸೇವೆಗಳು ಉಚಿತವಾಗಿ ದೊರೆಯುತ್ತವೆ. ಇದು ಮಾರುಕಟ್ಟೆಯಲ್ಲಿರುವ ಇತರ ಕಂಪನಿಗಳ ಪ್ಲಾನ್‌ಗಳಿಗೆ ಹೋಲಿಸಿದರೆ ಅತ್ಯಂತ ಮಿತವ್ಯಯಕಾರಿಯಾಗಿದೆ. ಕೆಲಸದ ಒತ್ತಡದಲ್ಲಿ ಪದೇ ಪದೇ ರೀಚಾರ್ಜ್ ಮರೆಯುವವರಿಗೆ ಮತ್ತು ಹೆಚ್ಚಿನ ಡೇಟಾ ಅವಶ್ಯಕತೆ ಇರುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile