ಜಿಯೋದ 500 ರೂಗಳ ಮತ್ತು 1029 ರೂಗಳ ಪ್ಲಾನ್ ಅತ್ಯುತ್ತಮವಾಗಿದೆ.
ಇದರಿಂದ ರಿಪಬ್ಲಿಕ್ ಡೇಲ್‌ನಲ್ಲಿ ಅತ್ಯುತ್ತಮ ರಿಯಾಯಿತಿಗಳನ್ನು ನೀವು ಸುಲಭವಾಗಿ ಪಡೆಯಬಹುದು.
ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ಗಾಗಿ ಜಿಯೋ (Jio) ವಿಶೇಷವಾದ ಎಂಟರ್‌ಟೈನ್‌ಮೆಂಟ್ ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ.
Amazon’s Republic Day Sale: ಪ್ರಸ್ತುತ ಈ 2026 ಹೊಸ ವರ್ಷದ ಮೊದಲ ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ಗಾಗಿ ಜಿಯೋ (Jio) ವಿಶೇಷವಾದ ಎಂಟರ್‌ಟೈನ್‌ಮೆಂಟ್ ಪ್ಲಾನ್‌ಗಳನ್ನು ಪರಿಚಯಿಸಲಾಗಿದೆ. ನೀವು ಈ ಸೇಲ್‌ನಲ್ಲಿ ಬೇಗನೆ ಡೀಲ್‌ಗಳನ್ನು ಪಡೆಯಲು ಅಮೆಜಾನ್ ಪ್ರೈಮ್ ಸಬ್‌ಸ್ಕ್ರಿಪ್ಷನ್ ಬಗ್ಗೆ. ಇದಕ್ಕಾಗಿ ಜಿಯೋದ 500 ರೂಗಳ ಮತ್ತು 1029 ರೂಗಳ ಪ್ಲಾನ್ ಅತ್ಯುತ್ತಮವಾಗಿದೆ. ಅಮೆಜಾನ್ ಪ್ರೈಮ್ ಲೈಟ್ ಸೌಲಭ್ಯ ಸಿಗಲಿದೆ. ಇನ್ನು ಒಂದು ವರ್ಷದ ದೀರ್ಘಾವಧಿಯ ಯೋಜನೆ ಬೇಕೆನ್ನುವವರಿಗೆ ಮತ್ತೊಂದು ವಾರ್ಷಿಕ ಪ್ಲಾನ್ ₹3599 ಆನ್ಯುವಲ್ ಪ್ಲಾನ್ ಅತ್ಯುತ್ತಮವಾಗಿದೆ. ಕೇವಲ ಅಮೆಜಾನ್ ಪ್ರೈಮ್ ಮಾತ್ರವಲ್ಲದೆ ಇದರಲ್ಲಿ 18 ತಿಂಗಳವರೆಗೆ ಗೂಗಲ್ ಜೆಮಿನಿ ಪ್ರೊ ಸೌಲಭ್ಯ ಕೂಡ ಉಚಿತವಾಗಿ ಸಿಗುತ್ತದೆ. ಇದರಿಂದ ರಿಪಬ್ಲಿಕ್ ಡೇಲ್‌ನಲ್ಲಿ ಅತ್ಯುತ್ತಮ ರಿಯಾಯಿತಿಗಳನ್ನು ನೀವು ಸುಲಭವಾಗಿ ಪಡೆಯಬಹುದು.
SurveyAlso Read: ಅಮೆಜಾನ್‌ನಲ್ಲಿ JBL Dolby Soundbar ಇಂದು ಭಾರಿ ಡಿಸ್ಕೌಂಟ್ಗಳೊಂದಿಗೆ ಕೈಗೆಟಕುವ ಬೆಲೆಗೆ ಲಭ್ಯ!
ಜಿಯೋ ₹500 ಪ್ಲಾನ್ ವಿವರಗಳು:
ಜಿಯೋ ಸಂಸ್ಥೆಯು 2026ರ ಸೀಸನ್‌ಗಾಗಿ ₹500ರ “ಸೂಪರ್ ಸೆಲೆಬ್ರೇಷನ್” ಎಂಬ ಮಾಸಿಕ ಯೋಜನೆ ತಂದಿದೆ. ಈ ಯೋಜನೆಯ ವ್ಯಾಲಿಡಿಟಿ ಬಗ್ಗೆ ಹೇಳುವುದಾದರೆ ಕೇವಲ 28 ದಿನಗಳನ್ನು ಮಾತ್ರ ಹೊಂದಿದೆ ಅಂದರೆ ಈ ತಿಂಗಳ ಅಮೆಜಾನ್ ಮಾರಾಟಕ್ಕಾಗಿ ಉತ್ತಮ ಆಯ್ಕೆಯಾಗಲಿದೆ. ಇದರಲ್ಲಿ ಪ್ರತಿದಿನ 2 GB ಹೈ-ಸ್ಪೀಡ್ ಡೇಟಾ ಸಿಗುತ್ತದೆ ಮತ್ತು ನಿಮ್ಮ ಫೋನ್ 5G ಆಗಿದ್ದರೆ ನೀವು ಅನ್‌ಲಿಮಿಟೆಡ್ 5G ಲಭ್ಯವಿರುತ್ತದೆ. ಈ ಪ್ಲಾನ್‌ನ ವಿಶೇಷತೆ ಎಂದರೆ ಇದರೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ, ಯೂಟ್ಯೂಬ್ ಪ್ರೀಮಿಯಂ, ಜಿಯೋ ಹಾಟ್‌ಸ್ಟಾರ್, ಸೋನಿ ಲೈವ್ (Sony LIV) ಹಲವಾರು ಒಟಿಟಿ (OTT) ಅಪ್ಲಿಕೇಶನ್‌ಗಳು ಉಚಿತವಾಗಿ ಸಿಗುತ್ತವೆ. ಜೊತೆಗೆ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯವೂ ಇದೆ.

ಜಿಯೋ ₹1029 ಪ್ಲಾನ್ ವಿವರಗಳು:
ನೀವು ಅಮೆಜಾನ್ ಸೇಲ್ ಸಮಯದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬೇಕೆಂದರೆ ₹1029 ರೂಗಳಾಗಿದೆ. ಈ ಯೋಜನೆಯ ಅವಧಿ 84 ದಿನಗಳು . ಇದರಲ್ಲಿ ಪ್ರತಿದಿನ 2GB ಡೇಟಾ ಸಿಗಲಿದೆ. ಅಂದರೆ ಒಟ್ಟಾರೆಯಾಗಿ 168GB ಡೇಟಾ ವೇಗದ 5G ಫೋನ್ ಇರುವವರಿಗೆ ಉಚಿತ ಅನ್‌ಲಿಮಿಟೆಡ್ ಡೇಟಾ ಸೌಲಭ್ಯವಿದೆ. ಈ ಪ್ಲಾನ್ ಮುಖ್ಯ ಆಕರ್ಷಣೆಯೇ ಅಮೆಜಾನ್ ಪ್ರೈಮ್ ಲೈಟ್ ಸಬ್‌ಸ್ಕ್ರಿಪ್ಷನ್. ಇದು ಇಡೀ 84 ದಿನಗಳ ಕಾಲ ಲಭ್ಯವಿರುತ್ತದೆ. ಇದರ ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್, ದಿನಕ್ಕೆ 100 ಎಸ್‌ಎಂಎಸ್ ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಜಿಯೋ ಕ್ಲೌಡ್‌ನಂತಹ ಜಿಯೋ ಆಯಪ್ಗಳ ಸೌಲಭ್ಯವೂ ನಿಮಗೆ ಸಿಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile