ಭಾರತದಲ್ಲಿ 2020 ವತ್ತಿಗೆ ಬರಲಿದೆ 5G, ಇದರ ಸ್ಪೀಡ್ ಎಷ್ಟಿರಬವುದು ಗೊತ್ತ.

ಇವರಿಂದ Ravi Rao | ಪ್ರಕಟಿಸಲಾಗಿದೆ 05 Oct 2017
ಭಾರತದಲ್ಲಿ 2020 ವತ್ತಿಗೆ ಬರಲಿದೆ 5G, ಇದರ ಸ್ಪೀಡ್ ಎಷ್ಟಿರಬವುದು ಗೊತ್ತ.

ಭಾರತದಲ್ಲಿ 2020 ನ ವತ್ತಿಗೆ 5G ತಂತ್ರಜ್ಞಾನ ಸೇವೆ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಭಾರತೀಯ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯ ಕೈಗೊಂಡಿದೆ.

ಸದ್ಯಕ್ಕೆ ದೇಶದ್ಯಂತ 2G, 3G ಮತ್ತು 4G ಮಾನದಂಡವನ್ನು ನಿರ್ಧರಿಸುವ ಅವಕಾಶವನ್ನು ನಾವು ಕಳೆದುಕೊಂಡಿದ್ದೇವು. ಆದರೆ ವಿಶ್ವದಲ್ಲಿ 5G ತರುವುದರಲ್ಲಿ ಭಾರತ ಸಹ ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಇಂತ ಸುವರ್ಣ ಅವಕಾಶವನ್ನು ಕೈತಪ್ಪಲು ಬಿಡುವುದಿಲ್ಲ ಎಂದು ಉತ್ತರ ಪ್ರದೇಶ CM ಹಾಗು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

ಇದು ಸುಮಾರು 500 ಕೋಟಿ ಮೌಲ್ಯಾದೊಂದಿಗೆ 5G ಸಂಬಂಧಿತ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯಲಿದೆ. ಅಲ್ಲದೆ ಈ ಸಮಿತಿಯಲ್ಲಿ ಟೆಲಿಕಾಂ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಕಾರ್ಯ ಕೈ ಗೊಳ್ಳಲಿದ್ದಾರೆ.

ಈಗಾಗಲೇ ನಿಮಗೆ ತಿಳಿದಿರುವಂತೆಯೇ ಭಾರತವನ್ನು 'ಡಿಜಿಟಲ್ ಇಂಡಿಯಾ' ಮಾಡುವ ಉದ್ದೇಶದೊಂದಿಗೆ ಭಾರತೀಯ ಟೆಲಿಕಾಂ ಕಂಪನಿಗಳು ಹೆಚ್ಚಾದ ಡೇಟಾ ನೀಡಲು ತನ್ನದೇ ಮೊಬೈಲ್‌ಗಳನ್ನು ಹೊರತರಲು ಒಂದರ ಮೇಲೊಂದರಂತೆ ಮುಗಿಬಿದ್ದಿವೆ. ಅಲ್ಲದೆ ಜಿಯೋ ತನ್ನದೇ ಫೀಚರ್‌ ಫೋನ್ ಬಿಡುಗಡೆ ಮಾಡಲು ಮುಂದಾದ ನಂತರ ಈಗ Airtel, Idia, ಮತ್ತು BSNL ಕೂಡ ತಮ್ಮದೇಯಾದ ಸ್ಮಾರ್ಟ್‌ಫೋನ್ನು ತರಲಿವೆ.

ಶೀಘ್ರವೇ ಭಾರತದಲ್ಲಿ 5G ಬಂದರೆ ಮೊದಲು ನಗರ ಪ್ರದೇಶದಲ್ಲಿ 10GB/s ವೇಗದಲ್ಲಿ ನಡೆಯಲಿದೆ. ಗ್ರಾಮಾಂತರ ಪ್ರದೇಶದಲ್ಲಿ 1GB/s ಸಿಗಲಿದೆ. ಮೊದಲೇ ತಿಳಿದಂತೆ ಕೆಲ ದಿನಗಳ ಹಿಂದೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) 5G ಸೇವೆಗೆ 3300- 3400 Mhz ಮತ್ತು 3400- 3600 Mhz ಬ್ಯಾಂಡ್ ಬಳಸಬವುದೆಂದು ಸೂಚಿಸಿತ್ತು. ಈಗ ಕೇಂದ್ರ ಸರ್ಕಾರವು 5G ಸೇವೆಯನ್ನು ಆರಂಭಿಸಲು ಉತ್ಸುಕವಾಗಿದ್ದರೂ ಭಾರತೀಯ ಟೆಲಿಕಾಂ ಕಂಪೆನಿ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕಾರಣದಿಂದಾಗಿ ಇದು 2021-2022 ಮದ್ಯೆ ಭಾರತದಲ್ಲಿ ಆರಂಭವಾಗಬಹುದೆನ್ನಲಾಗಿದೆ.

ಇಂಟರ್‍ನ್ಯಾಷನಲ್ ಟೆಲಿಕಮ್ಯೂನಿಕೇಷನ್ ಯುನಿಯನ್ (ITU) 5G ಯನ್ನು ಸಿದ್ಧಪಡಿಸಲಿದ್ದು ಈಗಾಗಲೇ ಇದರ ಬಗೆಗಿನ ಪ್ರಸ್ತಾವನೆಯನ್ನು ಸಿದ್ದಪಡಿಸಿದೆ. ಇದು ಫೆಬ್ರವರಿಯಲ್ಲಿಯೇ  ಪ್ರಸ್ತಾಪಗೊಂಡ ಪ್ರಕಾರ 5G ಡೌನ್‍ಲಿಂಕ್ ಸ್ಪೀಡ್ 20GB/s ಇರಬವುದಾಗಿದೆ.

 

ಇಮೇಜ್ ಸೋರ್ಸ್

logo
Ravi Rao

email

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status