ನಾಳೆ ದೈತ್ಯ Vivo X300 Ultra ಮೊಬೈಲ್ ಬಿಡುಗಡೆ! ಹೈ ಎಂಡ್ ಕ್ಯಾಮೆರಾ ಫಿಕ್ಸ್
ನಾಳೆ (ಮೇ 6 ರಂದು) ಭಾರತದಲ್ಲಿ ವಿವೋ X300 ಅಲ್ಟ್ರಾ ಲಾಂಚ್
ವಿವೋ X300 ಅಲ್ಟ್ರಾ ಫೋನ್ 200MP ಸೆನ್ಸಾರ್‌ನ ಕ್ಯಾಮೆರಾ ಹೊಂದಿರಲಿದೆ
ವಿವೋ X300 ಅಲ್ಟ್ರಾ ಮೊಬೈಲ್ 6,600mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದೆ
ವಿವೋ ಕಂಪನಿಯ ಬಹುನಿರೀಕ್ಷಿತ Vivo X300 Ultra ದೈತ್ಯ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. ವಿವೋ ಸಂಸ್ಥೆಯ ನೂತನ ವಿವೋ X300 ಅಲ್ಟ್ರಾ ಮೊಬೈಲ್ ನಾಳೆ (ಮೇ 6 ರಂದು) ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಿಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಆಗಿದೆ. ಅಂದಹಾಗೆ ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಇದರೊಂದಿಗೆ 6,600mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಇದು ZEISS ಬೆಂಬಲಿತ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುವ ಸಾಧ್ಯತೆಗಳು ಇವೆ. ಹಾಗಾದರೇ ವಿವೋ X300 ಅಲ್ಟ್ರಾ ಮೊಬೈಲ್‌ನ ಸೇಲ್ ಡೇಟ್ ಹಾಗೂ ನಿರೀಕ್ಷಿತ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
SurveyAlso Read : ಟ್ರಿಪಲ್ ಕ್ಯಾಮೆರಾ ಇರುವ Google Pixel 10 ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ!
Vivo X300 Ultra ನಾಳೆ ಬಿಡುಗಡೆ
ವಿವೋ ಸಂಸ್ಥೆಯ ಮುಂಬರುವ ನೂತನ ವಿವೋ X300 ಅಲ್ಟ್ರಾ ಸ್ಮಾರ್ಟ್‌ಫೋನ್ ಪ್ರಿಮಿಯಂ ಫ್ಲ್ಯಾಗ್‌ಶಿಪ್ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್ ನಾಳೆ (ಮೇ 6 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಮೊಬೈಲ್ ಲಾಂಚ್ ಬಳಿಕ ಅಮೆಜಾನ್ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಸೇಲ್ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್ ಬ್ಲ್ಯಾಕ್ ಹಾಗೂ ವಿಕ್ಟರಿ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ.

ವಿವೋ X300 ಅಲ್ಟ್ರಾ ನಿರೀಕ್ಷಿತ ಫೀಚರ್ಸ್
ಮುಂಬರುವ ಹೊಸ ವಿವೋ X300 ಅಲ್ಟ್ರಾ ಸ್ಮಾರ್ಟ್‌ಫೋನ್ 6.82 ಇಂಚಿನ 1.5K LTPO AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಸಪೋರ್ಟ್ ಹೊಂದಿರಲಿದೆ. ಅಲ್ಲದೇ ಈ ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 200MP ಹಾಗೂ 50MP ಸೆನ್ಸಾರ್ ಬಲದಲ್ಲಿ ಇರಲಿವೆ.
ಇನ್ನು ವಿವೋ X300 ಅಲ್ಟ್ರಾ ಸ್ಮಾರ್ಟ್‌ಫೋನ್ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 200MP ಸೆನ್ಸಾರ್‌ನ ಕ್ಯಾಮೆರಾ ಪಡೆದಿರಲಿದೆ. ಈ ಮೊಬೈಲ್ 6,600mAh ಸಾಮರ್ಥ್ಯದ ಬ್ಯಾಟರಿ ಪವರ್ ಹೊಂದಿರಲಿದೆ. ಇದಕ್ಕೆ ಪೂರಕವಾಗಿ ಈ ಮೊಬೈಲ್ 100W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಸಹ ಒಳಗೊಂಡಿರಲಿದೆ ಎನ್ನಲಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile