Redmi Note 7 ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಮಾಡಿದೆ ರೆಕಾರ್ಡ್, 4 ವಾರಗಳಲ್ಲಿ 1 ಮಿಲಿಯನ್ ಮಾರಾಟ.

Redmi Note 7 ಭಾರತದಲ್ಲಿ ಬಿಡುಗಡೆಯಾಗುವ ಮುನ್ನವೇ ಮಾಡಿದೆ ರೆಕಾರ್ಡ್, 4 ವಾರಗಳಲ್ಲಿ 1 ಮಿಲಿಯನ್ ಮಾರಾಟ.
HIGHLIGHTS

Redmi Note 7 ಚೀನಾದಲ್ಲಿ 1 ಮಿಲಿಯನ್ ಯೂನಿಟ್ಗಳನ್ನು ರೆಡ್ಮಿ ಮಾರಾಟ ಮಾಡಿದೆ.

ಈ ಹೊಸ Redmi Note 7 ಅನ್ನು ಕಳೆದ ತಿಂಗಳು ಪ್ರಾರಂಭಿಸಲಾಯಿತು. ಇದು ಜನವರಿ 15 ರಂದು ಚೀನಾದಲ್ಲಿ ಮೊದಲ ಫ್ಲಾಶ್ ಸೇಲ್ ಆಗಿತ್ತು. ಚೀನಾದಲ್ಲಿ ಇದರ ಬೆಲೆ CNY 999 ಇದನ್ನು ಭಾರತೀಯ ರೂಗಳಲ್ಲಿ ಕೇವಲ 10,400 ರೂಗಲಗಲಿ ಮಾರ್ಪಡುತ್ತದೆ. ಈ ಸ್ಮಾರ್ಟ್ಫೋನ್ ಮಿಲಿಟರಿ ರಾಡ್ ಬಿಲ್ಡ್ ಗುಣಮಟ್ಟದೊಂದಿಗೆ ಹಿಂಭಾಗದಲ್ಲಿ 48MP ಕ್ಯಾಮೆರಾವನ್ನು ಹೊಂದಿದೆ. 

ಈ ರೆಡ್ಮಿ CEO ಆಗಿರುವ ವೆಯಿಬಿಂಗ್ ರೆಡ್ಮಿ ಒಂದು ತಿಂಗಳಲ್ಲಿ 1 ದಶಲಕ್ಷ ಘಟಕಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯ ನಂತರ ನಾಲ್ಕು ವಾರಗಳ ನಂತರ Redmi Note 7 ಚೀನಾದಲ್ಲಿ 1 ಮಿಲಿಯನ್ ಯೂನಿಟ್ಗಳನ್ನು ರೆಡ್ಮಿ ಮಾರಾಟ ಮಾಡಿದೆ. ಇದರ ಪೋಸ್ಟ್ ಅನ್ನು ಅವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

Xiaomi Redmi Note 7 ಈಗಾಗಲೇ ಭಾರತೀಯ ಸ್ಮಾರ್ಟ್ಫೋನ್ ಉದ್ಯಮದಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ಫೋನ್ ಒಂದಾಗಿದೆ. ಹಿಂದೆ ಹೇಳಿರುವಂತೆ ಈ ಫೋನ್ 7ನೇ ಫೆಬ್ರುವರಿ 2019 ರಂದು ಭಾರತದಲ್ಲಿ ಬಿಡುಗಡೆಯಾಗಬೇಕಿತ್ತು ಆದರೆ ಈ ವರ್ಷ ಮಾರ್ಚ್ನಲ್ಲಿ ಫೋನ್ ಬಿಡುಗಡೆಯಾಗಲಿದೆ ಎಂದು ವರದಿಗಳಿವೆ. 

Redmi Note 7ನೊಂದಿಗೆ ಕಂಪನಿಯು Xiaomi Redmi Note 7 Pro ಮತ್ತು Xiaomi Redmi Go ಅನ್ನು ಸಹ ಪ್ರಾರಂಭಿಸಬಹುದು. Redmi Go ಫಿಲಿಪೈನ್ಸ್ನಲ್ಲಿ ಕೇವಲ 5000 ರೂಪಾಯಿಗಳ ಬೆಲೆಗೆ ಲಭ್ಯವಾಗುವಂತೆ ಮಾಡುವ ನಿರೀಕ್ಷೆಯಿದೆ. ಇದರೊಂದಿಗೆ Redmi Note 7 Pro ಫೋನಿನ ಆರಂಭಿಕ ಬೆಲೆಯನ್ನು 13,999 ರೂಪದಲ್ಲಿ ಬಿಡುಗಡೆ ಮಾಡಬಹುದಾದ ನಿರೀಕ್ಷೆಯಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo