ಡ್ಯೂಯಲ್ ಕ್ಯಾಮೆರಾದೊಂದಿಗೆ Vivo V30e ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಡ್ಯೂಯಲ್ ಕ್ಯಾಮೆರಾದೊಂದಿಗೆ Vivo V30e ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಭಾರತದಲ್ಲಿ ವಿವೋ (Vivo) ಕಂಪನಿ ತನ್ನ ಮುಂಬರಲಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ.

Vivo V30e ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮುಂದಿನ ತಿಂಗಳು ಅಂದ್ರೆ 2ನೇ ಮೇ 2024 ರಂದು ಬಿಡುಗಡೆಯಾಗಲಿದೆ

Vivo V30e ಟ್ವಿಟ್ಟರ್ ಖಾತೆಯ ಮೂಲಕ ಒಂದಿಷ್ಟು ಮಾಹಿತಿಯನ್ನು ಬಿಡುಗಡೆಗೂ ಮುಂಚೆ ಅನಾವರಣಗೊಳಿಸಿರುವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಭಾರತದಲ್ಲಿ ವಿವೋ (Vivo) ಕಂಪನಿ ತನ್ನ ಮುಂಬರಲಿರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದನ್ನು ಕಂಪನಿ ತನ್ನ ಹೊಸ V ಸರಣಿ ಸ್ಮಾರ್ಟ್‌ಫೋನ್‌ಗಳನ್ನು ವಿಸ್ತರಿಸಲು ಸಿದ್ಧವಾಗಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಶೀಘ್ರದಲ್ಲೇ Vivo V30e ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಮುಂದಿನ ತಿಂಗಳು ಅಂದ್ರೆ 2ನೇ ಮೇ 2024 ರಂದು ಬಿಡುಗಡೆಯಾಗಲಿದೆ.

ಈ ಮುಂಬರುವ Vivo V30e ಸ್ಮಾರ್ಟ್‌ಫೋನ್ ಫ್ಲಿಪ್ಕಾರ್ಟ್‌ನಲ್ಲಿ ಆನ್‌ಲೈನ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆನ್‌ಲೈನ್ ಪಟ್ಟಿಯು ಮುಂಬರುವ Vivo ಸ್ಮಾರ್ಟ್‌ಫೋನ್ ಕುರಿತು ಕೆಲವು ವಿವರಗಳನ್ನು ಬಹಿರಂಗಪಡಿಸುತ್ತದೆ. ಅಲ್ಲದೆ ಕಂಪನಿ ಈಗಾಗಲೇ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಒಂದಿಷ್ಟು ಮಾಹಿತಿಯನ್ನು ಬಿಡುಗಡೆಗೂ ಮುಂಚೆ ಅನಾವರಣಗೊಳಿಸಿದ್ದು ಈವರಗೆ ನಮಗೆ ತಿಳಿದಿರುವ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Also Read: Lok Sabha Election: ನಿಮ್ಮ QR ವೋಟರ್ ಇನ್ಫರ್ಮೇಷನ್ ಸ್ಲಿಪ್ ಪರಿಶೀಸಿ ಡೌನ್ಲೋಡ್ ಮಾಡೋದು ಹೇಗೆ?

ವಿವೋ V30e ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು

ಮೊದಲಿಗೆ Vivo V30e ಸ್ಮಾರ್ಟ್ಫೋನ್ 6.78 ಇಂಚಿನ FHD+ ಬಾಗಿದ ಡಿಸ್‌ಪ್ಲೇಯನ್ನು ಹೊಂದಿರಬಹುದು ಎಂದು ಆನ್‌ಲೈನ್ ವದಂತಿಗಳು ಸೂಚಿಸುತ್ತವೆ. ಡಿಸ್ಪ್ಲೇ 120Hz ರಿಡ್ರೆಸ್ ದರವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಮು೦ಬರುವ ಸ್ಮಾರ್ಟ್‌ ಫೋನ್ ಆಕ್ಷಾ-ಕೋರ್ ಕ್ವಾಲ್‌ಕಾಮ್ ಸ್ವಾಡ್‌ಡ್ರಾಗನ್ 6 ಜನ್ 1 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ.

Vivo V30e to launch in India next month
Vivo V30e to launch in India next month

ಇನ್ನೂ ಪ್ರಾರ೦ಭವಾಗದ Vivo V30e ಸ್ಮಾರ್ಟ್‌ಫೋನ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಇರಿಸಲಾದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು ಔರ ರಿಂಗ್ ಎಲ್‌ಇಡಿ ಫ್ಲ್ಯಾಷ್‌ ಅನ್ನು ಸಹ ಹೊ೦ದಿದೆ. Vivo V30e ಸ್ಮಾರ್ಟ್‌ಫೋನ್ ನಿಮಗೆ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಇರಿಸಲಾದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದಾಗಿ ಟೀಸರ್ ಮತ್ತು ಇಮೇಜ್ ಖಚಿತಪಡಿಸಿವೆ.

ಸ್ಮಾರ್ಟ್ಫೋನ್ 8GB RAM ಮತ್ತು 128GB ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಬರುವುದಾಗಿ ನಿರೀಕ್ಷೆಯಿದೆ. ಈ Vivo V30e ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡಲಿದ್ದು IP54 ರೇಟಿಂಗ್‌ನೊಂದಿಗೆ ಡಸ್ಟ್ ಮತ್ತು ವಾಟರ್ ನಿರೋಧಕವಾಗಿದೆ.

Vivo V30e to launch in India next month
Vivo V30e to launch in India next month

Vivo V30e ಸ್ಮಾರ್ಟ್‌ಫೋನ್ ಜೆಮ್ ಹಟ್ ವಿನ್ಯಾಸವನ್ನು ಹೊಂದಿದೆ ಮತ್ತು ವೆಲ್ವೆಟ್ ರೆಡ್ ಮತ್ತು ಸಿಲ್ಕ್ ಬ್ಲೂ ಎ೦ಬ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ ಎಂದು ದೃಢಪಡಿಸಲಾಗಿದೆ. Vivo V30e ಸ್ಮಾರ್ಟ್ಫೋನ್ 5,500 mAh ಬ್ಯಾಟರಿಯನ್ನು 45W ಫಾಸ್ಟ್ ಚಾರ್ಜ್ ಜೊತೆಗೆ ಬರುವುದಾಗಿ ನಿರೀಕ್ಷಿಸಬಹುದು.

Vivo V30e ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಮುಂಬರಲಿರುವ ವಿವೋದ ಡ್ಯೂಯಲ್ ಕ್ಯಾಮೆರಾದ Vivo V30e ಸ್ಮಾರ್ಟ್‌ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತಂದುವುದಾದರೆ ಇದನ್ನು ಈಗಾಗಲೇ ಬಿಡುಗಡೆಯಾಗಿರುವ Vivo V29e ಸ್ಮಾರ್ಟ್ಫೋನ್ ಅನುಗುಣವಾಗಿ ಹೋಲಿಸಲಾಗಿದ್ದು ಇದರ 8GB ಮತ್ತು 128GB ಸ್ಟೋರೇಜ್ ಸುಮಾರು 27,999 ರೂಗಳಿಗೆ ಬಂದ್ರೆ ಇದರ 12GB RAM ಮತ್ತು 256GB ಸ್ಟೋರೇಜ್ ಸುಮಾರು 29,999 ರೂಗಳಿಗೆ ಬರುವುದಾಗಿ ನಿರೀಕ್ಷಿಸಬಹುದು. ಅಲ್ಲದೆ ಈ ಸ್ಮಾರ್ಟ್ಫೋನ್ ನೇರವಾಗಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಮಾರಾಟದವನ್ನು 5ನೇ ಮೇ 2024 ರಿಂದ ಆರಂಭಿಸುವುದಾಗಿ ನಿರೀಕ್ಷಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo